Tuesday, September 28, 2021
HomeUncategorizedಆರೋಗ್ಯಕೇಂದ್ರ ಸರ್ಕಾರದಿಂದ ಈಗಾಗಲೇ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಂದಾಜು 46 ಕೋಟಿಯಷ್ಟು ಲಸಿಕೆ ಡೋಸ್...

ಕೇಂದ್ರ ಸರ್ಕಾರದಿಂದ ಈಗಾಗಲೇ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಂದಾಜು 46 ಕೋಟಿಯಷ್ಟು ಲಸಿಕೆ ಡೋಸ್ ಗಳು ಪೂರೈಕೆ

- Advertisement -
Renault
- Advertisement -
Home Plus
- Advertisement -

ನವದೆಹಲಿ : ಕೊರೋನಾದ ಲಸಿಕೆಯ ಕೊರತೆಯ ವಿಚಾರಗಳು ಕೇಳಿ ಬರುತ್ತಲೇ ಇದ್ದರೂ ನಿರಂತರವಾಗಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ನೀಡಿರುವ ಲಸಿಕೆಯ ಪ್ರಮಾಣಗಳ ವರದಿಯನ್ನು ತನ್ನ ಪ್ರಕಟಣೆಯಲ್ಲಿ ನೀಡುತ್ತಿದೆ. ಇಂದು ಬೆಳಗ್ಗಿನವರೆಗಿನ ವರದಿಯ ಪ್ರಕಾರ, ದೇಶದ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದಿಂದ ಉಚಿತವಾಗಿ 45.37 ಕೋಟಿಯಷ್ಟು ಲಸಿಕೆಯ ಡೋಸ್ ಗಳನ್ನು ನೀಡಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಕೊಟ್ಟಿದೆ.

ಕೇಂದ್ರ ಸರ್ಕಾರ ಲಸಿಕಾ ಅಭಿಯಾನಕ್ಕೆ ತ್ವರಿತ ಗತಿ ನೀಡುತ್ತಿದ್ದು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯಕ್ಕನುಗುಣವಾಗಿ ಕೇಂದ್ರ ಸರ್ಕಾರ ಲಸಿಕೆಗಳನ್ನು ಪೂರೈಸುತ್ತಿದೆ. ಮಾತ್ರವಲ್ಲದೇ ಮಕ್ಕಳಿಗೆ ನೀಡುವ ಲಸಿಕಾ ಪ್ರಯೋಗಗಳು ಕೂಡ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿದ್ದು, ಕೋವಿಡ್ 19 ಸೋಂಕಿನ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

45,37,70,580 ಕೋಟಿಯಷ್ಟು ಲಸಿಕೆಯ ಡೋಸ್ ಗಳನ್ನು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಸುಮಾರು 59, 39,010 ಡೋಸ್ ಲಸಿಕೆಗಳು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡುವುದಕ್ಕೆ ತಯಾರಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೇಂದ್ರ ಸರ್ಕಾರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ನೀಡಿದ 3,09,11,310 ಕೋವಿಡ್ ಡೋಸ್ ಗಳು ಬಳಕೆಯಾಗಿ ಉಳಿದಿವೆ ಎಂದು ತಿಳಿಸಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments