ಮಂಗಳೂರು : ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಯು.ಟಿ ಖಾದರ್ ಮಾತನಾಡಿ, ದೇಶದ ಇತಿಹಾಸದಲ್ಲಿ ಯಾರೂ ಕಾಣದ ಸಾಧನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಸರ್ಕಾರದ ಖಜಾನೆ ತುಂಬಲಾಗುತ್ತಿದೆ. ಪೆಟ್ರೋಲ್ ಪಂಪ್ ತೆರಿಗೆ ಸಂಗ್ರಹಿಸುವ ಕೇಂದ್ರವಾಗಿದೆ. ಜನರು ಪೆಟ್ರೋಲ್, ಡೀಸೆಲ್‍ಗಾಗಿ ದಿನವಿಡೀ ದುಡಿಯುವಂತಾಗಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಕಿಡಿಕಾರಿದ್ದಾರೆ.
ಕಷ್ಟದ ಪರಿಸ್ಥಿತಿಯಲ್ಲಿ ಜನರು ಈಗ ಬದುಕುತ್ತಿದ್ದಾರೆ. ಆದರೆ ಟ್ಯಾಕ್ಸ್ ಹಾಕುವ ಮೂಲಕ ಜನರನ್ನು ಲೂಟಿ ಮಾಡಲಾಗುತ್ತಿದೆ. ಸರ್ಕಾರ ತೆರಿಗೆ ಸಂಗ್ರಹಿಸುತ್ತಿದೆ ವಿನಃ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡಲಾಗುತ್ತಿದೆ. ಜನರು ದಂಗೆ ಏಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬೆಲೆ ಏರಿಕೆಯನ್ನು ಸಮರ್ಥನೆ ಮಾಡುವವರು ಯೋಚನೆ ಮಾಡಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗದ್ದಲದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ರಾಜಕೀಯ ಕಿತ್ತಾಟ ಹೆಚ್ಚಾಗಿದೆ. ಇದು ಜನರಿಗೆ ಮಾಡುವ ದ್ರೋಹ. ಇದು ಕರುಣೆ ಇಲ್ಲದ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಂಕಷ್ಟದ ನಡುವೆಯೂ ಬಿಜೆಪಿ ಸಚಿವರು, ಶಾಸಕರು ಅಧಿಕಾರದ ಕಚ್ಚಾಟಕ್ಕಾಗಿ ಕ್ಯೂ ನಿಲ್ಲುತ್ತಿದ್ದಾರೆ. ಸರ್ಕಾರ ಕಚ್ಚಾಟವನ್ನು ಬಿಟ್ಟು ಕೋವಿಡ್‍ನಿಂದ ತೊಂದರೆಯಲ್ಲಿರುವ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಶ್ರೀ UT KADAR ನವರೇ ಈಗಲೇ ಗೋಷಣೆ ಮಾಡಿ ಕಾಂಗ್ರೆಸ್ ಸರಕಾರ ಬಂದರೆ ಪೆಟ್ರೊಲ್ ಬೆಲೆ 50, ರೂಪಾಯಿ ಮಾಡುತ್ತೇವೆ ಎಂದು
ನಾವೆಲ್ಲರೂ ನಿಮ್ಮನ್ನು ಬೇಬಲಿಸುತ್ತೇವೆ
Who will pay the huge loan(nearly 2 lack crs) made by the previous UPA Govt? And a few questions for all those who question: How many people own vehicles. How many use them to carry free ration? How many people get benifits of Ayushman Bharat? How many got gas connections, how many use benifits of Pradhan Mantri janaushadi, how many new roads are built, how many new railways started, how many farmers and others got cash benifits during covid waves, ……