ಚಿಕ್ಕಮಗಳೂರು : ಹುಲಿ ಬೇಟೆಗಾರರ ಜಾಡು ಪಶ್ಚಿಮ ಘಟ್ಟಗಳ ಸಾಲು, ಭದ್ರಾ ಹುಲಿ ಅಭಯಾರಣ್ಯದ ಲ್ಲಿ ಹರಡಿದ್ಯಾ ಎಂಬ ಅನುಮಾನ ದಟ್ಟವಾಗಿದೆ. ಹುಲಿಯ ಉಗುರು, ಹಲ್ಲು, ಕೋರೆಹಲ್ಲು, ಚರ್ಮ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ ಹುಲಿ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಪೂರ್ವಜರು ಹುಲಿ ಚರ್ಮ, ಹಲ್ಲು, ಉಗುರುಗಳನ್ನ ಮನೆ ಅಲಂಕಾರಕ್ಕೆ ಬಳಸುತ್ತಿದ್ರು. ಉಗುರನ್ನ ಕೊರಳಿಗೆ ಕಟ್ಟಿಕೊಂಡ್ರೆ ಭಯವಾಗೋಲ್ಲ, ಅದರ ಚರ್ಮದ ಮೇಲೆ ಕುಳಿತ್ರೆ ಒಳ್ಳೆದು ಅಂತೆಲ್ಲಾ ಮೂಢನಂಬಿಕೆಯಲ್ಲಿದ್ರು. ಆದ್ರೆ, ಕಲಿಯುಗದ ಜನ ಹುಲಿಯನ್ನ ನೋಡ್ತಿರೋ ದೃಷ್ಠಿಯೇ ಬೇರೆ. ಹುಲಿ ಗಂಟೆಗೆ 5 ರಿಂದ 6 ಬಾರಿ ದೈಹಿಕ ಸಂಪರ್ಕ ನಡೆಸುತ್ತಂದ್ರೆ, ಪುರುಷರ ಕಿವಿ ನೆಟ್ಟಗಾಗುತ್ತೆ. ಆದ್ರೆ, ಅದರ ವಸ್ತುಗಳಿಂದ ತಯಾರದ ಔಷಧಿಯಲ್ಲೂ ಅದೇ ಶಕ್ತಿ ಇರುತ್ತೆಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.
ಚೀನಾದಲ್ಲಿ ವಿವಿಧ ಕಾರಣಗಳಿಂದ ಅದನ್ನ ಹೆಚ್ಚಾಗಿ ಬಳಸೋದ್ರಿಂದ ಲಕ್ಷ-ಕೋಟಿ ಆಸೆಗಾಗಿ ಹುಲಿಯನ್ನ ಭೇಟೆಯಾಡುವವರ ಸಂಖ್ಯೆಯೂ ಹೆಚ್ಚಿದೆ.
ಚೀನಾದಲ್ಲಂತು ಹುಲಿಯ ಯಾವುದೇ ಭಾಗ ಕೊಟ್ರು ಲಕ್ಷಾಂತರ ರೂಪಾಯಿ ಕೊಡ್ತಾರೆ. ಅದಕ್ಕಾಗೇ ಬದುಕಿದ್ದಾಗ ಅದನ್ನ ಕಂಡ್ರೆ ಕಾಲಿಗೆ ಬುದ್ಧಿ ಹೇಳೋ ಜನ, ಅದು ಸತ್ತಾಗ ಲಕ್ಷಾಂತರ ರೂಪಾಯಿಗೆ ಮಾರೋಕೆ ಮುಂದಾಗ್ತಾರೆ. ಹುಲಿಯ ಚರ್ಮ, ಉಗುರನ್ನ ಮನೆಯ ಅಲಂಕಾರಕ್ಕೆ ಬಳಸಿದ್ರೆ, ಅದರ ಮೂಳೆ ಸೇರಿದಂತೆ ಕೆಲ ಭಾಗಗಳನ್ನ ಲೈಂಗಿಕ ಶಕ್ತಿ ವೃದ್ಧಿಯ ಔಷಧಿಗೆ ಬಳಸುತ್ತಾರೆ. ಹುಲಿಯ ಯಾವುದೇ ಭಾಗ ಸಿಕ್ರು ಅದರ ಶಕ್ತಿ ಇಮ್ಮಡಿಗೊಳ್ಳುತ್ತೆ. ಅದಕ್ಕಾಗಿ ಎಷ್ಟು ಬೇಕಾದ್ರು ಹಣ ಕೊಡ್ತಾರೆ. ಅದಕ್ಕಾಗಿಯೇ ಪ್ರಾಣಿಗಳ ಬೇಟೆಗಾರರ ಸಂಖ್ಯೆಯೂ ಹೆಚ್ಚಿದ್ದು ಸದ್ಯ ಇಬ್ಬರನ್ನ ಬಂಧಿಸಿರೋ ಪೊಲೀಸರು ತನಿಖೆ ಮುಂದುವರೆಸಿದ್ದು ಮತ್ತಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಒಟ್ಟಾರೆ, ಅಯ್ಯೋ ಹುಲಿಯಲ್ಲಿ ಆ ಮಟ್ಟದ ತಾಕತ್ತಿದ್ಯಾ, ನಂಗೆ ಅದರ ಅರ್ಧ ಭಾಗ ಬರ್ಲಿ ಅಂತ ಗನ್ ಹಿಡಿದು ಬೇಟೆಗೆ ಅಂತೆನಾದ್ರು ಹೊರಟಿರಾ. ಗೊತ್ತಿರ್ಲಿ, ಸಿಕ್ಕಿ ಬಿದ್ರೆ ಮೂರು ತಿಂಗಳು ಬೇಲ್ ಇಲ್ಲ. ಶಿಕ್ಷೆ ಹಾಗೂ ದಂಡ ಇಷ್ಟೇ ಅಂತ ಹೇಳೋಕು ಆಗೋಲ್ಲ.
ಅದಕ್ಕಾಗೇ ಹುಲಿ ಸತ್ರೆ, ಅದನ್ನ ಸುಟ್ಟ ಬಳಿಕ ಅದ್ರ ಬೂದಿಯೂ ಸಿಗದಂತೆ ಮಾಡ್ತಾರೆ ಅಧಿಕಾರಿಗಳು. ಅದೇನೆ ಇದ್ರು, ಮನುಷ್ಯ ತನ್ನ ದುರಾಸೆಗೋಸ್ಕರ ಮೂಕಪ್ರಾಣಿಗಳನ್ನ ಕೊಂದು ತನ್ನ ಆಸೆ ಈಡೇರಿಸಿಕೊಳ್ತಿರೋದು ಮಾತ್ರ ನಿಜಕ್ಕೂ ದುರಂತ.