Sunday, November 28, 2021
HomeರಾಜಕೀಯBSY ಭೇಟಿ ಮಾಡಿದ ಸಿಎಂ ಬೊಮ್ಮಾಯಿ: ಉಭಯ ನಾಯಕರ ಸುದೀರ್ಘ ಚರ್ಚೆ

BSY ಭೇಟಿ ಮಾಡಿದ ಸಿಎಂ ಬೊಮ್ಮಾಯಿ: ಉಭಯ ನಾಯಕರ ಸುದೀರ್ಘ ಚರ್ಚೆ

- Advertisement -
Renault
- Advertisement -
Bliss
- Advertisement -

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು(ಶುಕ್ರವಾರ) ಭೇಟಿ ಮಾಡಿ ‌ದಸರಾ ಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ.

ಇಂದು(ಶುಕ್ರವಾರ) ನಗರದ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ವಿಜಯದಶಮಿ ಹಬ್ಬದ ಶುಭ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಯಡಿಯೂರಪ್ಪ ಅವರ ನಿವಾಸದಲ್ಲಿರುವ ಪೂಜಾ ಕೋಣೆಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವರಿಗೆ ನಮಸ್ಕರಿಸಿ ಭಗವಂತನ ಆಶೀರ್ವಾದ ಪಡೆದಿದ್ದಾರೆ.

ಬಳಿಕ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರಿಗೆ ಶಾಲು ಹೊದಿಸಿ ಹಾರ ಹಾಕಿ ಸತ್ಕರಿಸಿ ಆಶೀರ್ವಾದ ಪಡೆದ ನಾಡಿದ ದೊರೆ ಬಸವರಾಜ ಬೊಮ್ಮಾಯಿ.

ಇದೇ ವೇಳೆ ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪನವರ ಜೊತೆ ಒಂದು ಗಂಟೆಗಳ ಕಾಲ ಚರ್ಚೆ ಮಾಡಿ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

- Advertisement -
Home Plus

LEAVE A REPLY

Please enter your comment!
Please enter your name here

- Advertisment -

Most Popular

Recent Comments