ಬೆಂಗಳೂರು(25-01-2021): ಸಿಎಂ ಯಡಿಯೂರಪ್ಪ ಮತ್ತೆ ಸಚಿವರ ಖಾತೆಯನ್ನು ಬದಲು ಮಾಡಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರಿಗೆ ವಾಪಾಸ್ಸು ನೀಡಿದ್ದಾರೆ. ಸಚಿವ ಆನಂದ್ ಸಿಂಗ್ ಅವರಿಗೆ ಸಿಎಂ ಬಳಿಯಲ್ಲಿದ್ದಂತ ಮೂಲ ಸೌಕರ್ಯ ಖಾತೆಯನ್ನು ಹೆಚ್ಚುವರಿಯಾಗಿ ನೀಡಿದ್ದಾರೆ.
ಸಚಿವ ಸುಧಾಕರ್ ಹೆಗಲಿಗೆ ಪ್ರಾಥಮಿಕ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳ ಜವಾಬ್ದಾರಿ ಹೊರಿಸಿದ್ದಾರೆ. ಜೊತೆಗೆ ಹಜ್ ಮತ್ತು ವಕ್ಫ್ ಖಾತೆ ಜೊತೆಗೆ ಮೂಲ ಸೌಕರ್ಯ ಖಾತೆಯನ್ನು ಹೆಚ್ಚುವರಿಯಾಗಿ ಆನಂದ್ ಸಿಂಗ್ ಗೆ ನೀಡಲಾಗಿದೆ.
ಸಚಿವ ಸಂಪುಟ ವಿಸ್ತರಣೆಯ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಖಾತೆ ಹಂಚಿಕೆಯೂ ತಲೆನೋವಾಗಿತ್ತು. ಮಾಧುಸ್ವಾಮಿ ತಮಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಿದ್ದಾರೆ. ಅದರಲ್ಲಿ ನಾನು ಹೇಗೆ ಕೆಲಸ ಮಾಡಲಿ ಎಂದು ಅಸಮಾಧಾನವನ್ನು ಹೊರಹಾಕಿದ್ದರು.