ಬೆಂಗಳೂರು: ನಿನ್ನೆ ಸಿಎಂ ಮನೆಗೆ ಹೋಗಿದ್ವಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಅದು ಬಿಟ್ಟು ಬೇರೆ ಏನೂ ಮಾತಾಡಿಲ್ಲ, ಇವತ್ತು ಸಿಎಂ ಮತ್ತೆ ಎಲ್ಲರನ್ನೂ ಊಟಕ್ಕೆ ಕರೆದಿದ್ದಾರೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳು ಅಲ್ಲ ಎಂದಿದ್ದಾರೆ.
ಇನ್ನು ನಿನ್ನೆ ವಿಧಾನಸೌಧದಲ್ಲಿ ಮುಖ್ಯ ಸಚೇತಕ ಸುನೀಲ್ ಕುಮಾರ್ ಊಟಕ್ಕೆ ಸೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದರಲ್ಲಿ ಏನೂ ತಪ್ಪು ಇಲ್ಲ, ಅವರು ಸಂಘ ಪರಿವಾರದವರು ಹಿರಿಯರವರು. ಹಾದಿ-ಬೀದಿಯಲ್ಲಿ ಮಾತಾಡುವ ಬದಲು ಒಂದು ಕಡೆ ಮಾತಾದ್ದಾರೆ. ಅವರಿಗೆ ಸಿಎಂಗೆ ಮುಕ್ತವಾಗಿ ಸಲಹೆ ಕೊಡಬಹುದು ಎಂದು ಹೇಳಿದರು.
ಸಿಎಂ ಬದಲಾವಣೆ ಆಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಯತ್ನಾಳ್ ಜತೆ ನಾವೆಲ್ಲ ಮಾತಾಡುತ್ತೇವೆ. ಅವರು ಹಾಗೆಲ್ಲ ಮಾತಾಡಬಾರದು. ಬಿಎಸ್ವೈ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಮಾತನಾಡಿದ್ದಾರೆ.