Sunday, September 24, 2023
Homeಕರಾವಳಿಕೆಲವೇ ಕ್ಷಣಗಳಲ್ಲಿ‌ ಯೋಗಿ ಆದಿತ್ಯನಾಥ್ ಮಂಗಳೂರಿಗೆ…

ಕೆಲವೇ ಕ್ಷಣಗಳಲ್ಲಿ‌ ಯೋಗಿ ಆದಿತ್ಯನಾಥ್ ಮಂಗಳೂರಿಗೆ…

- Advertisement -Renault

Renault
Renault

- Advertisement -

ಕಾಸರಗೋಡಿನಲ್ಲಿ ನಡೆಯುವ ವಿಜಯಯಾತ್ರೆಯಲ್ಲಿ ಭಾಗವಹಿಸಲಿರುವ ಫಯರ್ ಬ್ರ್ಯಾಂಡ್ ಸಿಎಂ…

ಮಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಮಂಗಳೂರು ಹಾಗೂ ಕಾಸರಗೋಡಿಗೆ ಆಗಮಿಸಲಿದ್ದಾರೆ.ಕೇರಳ ವಿಧಾನಸಭಾ ಚುನಾವಣೆಯ ಪೂರ್ವಭಾವಿ ತಯಾರಿಗಾಗಿ ನಡೆಯಲಿರುವ ವಿಜಯ ಯಾತ್ರೆಯನ್ನು‌ ಕಾಸರಗೋಡಿನಲ್ಲಿ ಇಂದು ಮಧ್ಯಾಹ್ನ‌ 3 ಗಂಟೆಗೆ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ.ಮಧ್ಯಾಹ್ನ 2 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು‌ ಅಲ್ಲಿಂದ ರಸ್ತೆ ಮೂಲಕ ಕಾಸರಗೋಡಿಗೆ ತೆರಳ ಅಲ್ಲಿನ ತಾಳಿಪಡ್ಪು ಎಂಬಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಮುಗಿಸಿ ಸಂಜೆ 7 ಗಂಟೆಗೆ ಮಂಗಳೂರಿನ‌ ಕದ್ರಿ ಜೋಗಿ ಮಠಕ್ಕೆ ಭೇಟಿ ನೀಡಿ ಎರಡು ಗಂಟೆಗಳ ಕಾಲ ಮಠದಲ್ಲೇ ಉಳಿಯಲಿದ್ದಾರೆ.ಕದ್ರಿ ಯೋಗೇಶ್ವರ ಜೋಗಿ ಮಠ ನಾಥ ಪಂಥದ ಪ್ರಮುಖ ಮಠವಾಗಿದ್ದು ಆದಿತ್ಯನಾಥ್ ನಾಥ ಪಂತದ ರಾಷ್ಟ್ರೀಯ ಅಧ್ಯಕ್ಷರಾಗಿರೋದ್ರಿಂದ ಕದ್ರಿ ಮಠದ ಪ್ರಮುಖರೊಂದಿಗೆ ಚರ್ಚೆ ನಡೆಸಲಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments