ಅಷ್ಟಕ್ಕೂ ಕೋಳಿ ಮಾಡಿದ ತಪ್ಪಾದ್ರೂ ಏನು…???
ಹೈದರಾಬಾದ್: ತೆಲಂಗಾಣದ ಜಗಟಿಲ್ ಜಿಲ್ಲೆಯಲ್ಲಿ ಕೋಳಿ ಅಂಕದ ವೇಳೆ ಮಾಲೀಕ ಮೃತಪಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೋಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಗಟಿಲ್ ಜಿಲ್ಲೆಯ ಲೋಥನುರ್ ಗ್ರಾಮದಲ್ಲಿ ಎಲ್ಲಮ್ಮ ದೇವಸ್ಥಾನದ ಪರಿಸರದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸಲಾಗಿತ್ತು. ಇದೇ ವೇಳೆ ಕೋಳಿಯ ಕಾಲಿಗೆ ಕಟ್ಟಿದ ಬಾಳು ತಾಗಿ ಮಾಲೀಕ ತೆಂಗುಲ ಸತೀಶ್ ಮೃತಪಟ್ಟಿದ್ದಾರೆ.
ಬಾಳು ತಾಗಿದ ಪರಿಣಾಮ ನರ ತುಂಡಾಗಿ ಅತೀವ ರಕ್ತ ಸ್ರಾವವಾಗಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಫಲಕಾರಿಯಾಗಲಿಲ್ಲ.
ಇದೀಗ ಕೋಳಿ ಪೊಲೀಸರ ವಶದಲ್ಲಿದ್ದು, ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದಲ್ಲಿ ಕೋಳಿ ಅಂಕ ನಿಷೇಧಿಸಲಾಗಿದೆ.