ಉಡುಪಿ: ಪರಿಚಯದ ಹಿನ್ನೆಲೆಯಲ್ಲಿ ಕಾರನ್ನು ಕೊಂಡು ಹೋಗಿ ಅದನ್ನು ವಾಪಾಸ್ ನೀಡದೇ ವಂಚಿಸಿರುವ ಪ್ರಕರಣ ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿದೆ.
ವಂಚಿಸಿದ ಆರೋಪಿ ಅನೂಪ್ ಶೆಟ್ಟಿ ಕಾರು ಕೊಂಡುಹೋದ ಬಳಿಕ ನಾಪತ್ತೆಯಾಗಿದ್ದು ಯಾವುದೇ ಸಂಪರ್ಕಕ್ಕೆ ಲಭ್ಯವಿಲ್ಲವಾಗಿದ್ದಾನೆ.
ಕಾರು ಮಾಲೀಕ ಶಂಕರ್ ಭಂಡಾರಿ ತನ್ನ ಹುಂಡೈ ಕಾರನ್ನು ಪರಿಚಯದ ಮೇಲೆ ಮತ್ತು ವಿಶ್ವಾಸದ ಮೇಲೆ ಕೊಟ್ಟಿದ್ದಾರೆ. ಆದರೆ ಅನೂಪ್ ಶೆಟ್ಟಿ ವಿಶ್ವಾಸ ದ್ರೋಹ ಎಸಗಿದ್ದಷ್ಟೇ ಅಲ್ಲದೇ ಕಾರನ್ನು ಮಾರಾಟ ಮಾಡಿದ್ದಾನೋ ಅಥವಾ ಬೇರೆ ಕೃತ್ಯಕ್ಕೆ ಬಳಸಿದ್ದಾನೋ ಎಂಬ ಸಂಶಯ ಮೂಡುವಂತೆ ಮಾಡಿದ್ದಾನೆ. ಅಲ್ಲದೇ ಸಂಪರ್ಕಕ್ಕೆ ಸಿಗದ ಹಾಗೆ ಕಾಣೆಯಾಗಿರುವ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ.
ಬ್ರಹ್ಮಾವರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.