Monday, January 17, 2022
HomeUncategorizedಆರೋಗ್ಯಫೆಬ್ರವರಿ ಮೊದಲ ವಾರ ರಾಜ್ಯಕ್ಕೆ ಎದುರಾಗುತ್ತ ಕರೊನಾ ಸಂಕಷ್ಟ ಎನ್ನುತ್ತಲೇ ಲಾಕ್​ಡೌನ್ ಕುರಿತು ಸುಧಾಕರ್ ಹೇಳಿದ್ದೇನು?

ಫೆಬ್ರವರಿ ಮೊದಲ ವಾರ ರಾಜ್ಯಕ್ಕೆ ಎದುರಾಗುತ್ತ ಕರೊನಾ ಸಂಕಷ್ಟ ಎನ್ನುತ್ತಲೇ ಲಾಕ್​ಡೌನ್ ಕುರಿತು ಸುಧಾಕರ್ ಹೇಳಿದ್ದೇನು?

- Advertisement -
Renault






- Advertisement -

ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಫೆಬ್ರವರಿ ಮೊದಲ ವಾರ ರಾಜ್ಯಕ್ಕೆ ಕರೊನಾ ಸಂಕಷ್ಟ ಎದುರಾಗಲಿದೆ. ಎಲ್ಲರೂ ಲಸಿಕೆ ತೆಗೆದುಕೊಳ್ಳಿ, ಕರೊನಾ ಮಾರ್ಗಸೂಚಿ ಪಾಲಸಿ ಎಂದು ಮನವಿ ಮಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಲಾಕ್​ಡೌನ್ ಮಾಡಲ್ಲ ಎಂದಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್​, ಕರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಇಲ್ಲದೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಆತಂಕಕಾರಿಯಾದ ನಿಯಮ ಜಾರಿ ಮಾಡಲ್ಲ. ಲಾಕ್​ಡೌನ್ ಒಂದದಿಂದಲೇ ಸೋಂಕು ನಿಯಂತ್ರಣ ಆಗುವುದಿಲ್ಲ. ಎರಡು ಬಾರಿ ಲಾಕ್​ಡೌನ್ ‌ಮಾಡಿ ಜನರಿಗೆ ಸಮಸ್ಯೆ ಆಗಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಕೂಡ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.

ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳ ಆಗ್ತಿದೆ. ನರ್ಸ್​ಗಳೂ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದು ನಮಗೆ ಆಂತಕದ ವಿಷಯ. ಹಾಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕ. ಕಳೆದ ವಾರದಿಂದ ವೀಕೆಂಡ್ ಲಾಕ್ ಮಾಡಿದ್ದೇವೆ. 7 ದಿನಕ್ಕೆ ಸೋಂಕು ಕಡಿಮೆ ಆಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಹಾಗಾಗಿ ಇನ್ನು ಸ್ವಲ್ಪ ‌ದಿನ ಹೋದರೆ ವೀಕೆಂಡ್ ಕರ್ಫ್ಯೂ ರಿಸಲ್ಟ್ ಸಿಗಬಹುದು ಎಂದು ಸುಧಾಕರ್​ ತಿಳಿಸಿದರು.

ಬಹಿರಂಗ ಸಮಾವೇಶ, ಗುಂಪು ಗೂಡುವುದು ಮಾಡಬೇಡಿ. ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ ಸುಧಾಕರ್​, ರಾಜ್ಯದಲ್ಲಿ ಕರೊನಾ ಇನ್ನು ಪೀಕ್​ಗೆ ಹೋಗಿಲ್ಲ. ತಜ್ಞರು ಕೂಡ‌ ಇದನ್ನ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್​ಗೆ ಹೋಗುತ್ತದೆ. 3-4ನೇ ವಾರದಿಂದ ಕಡಿಮೆ ಆಗುತ್ತೆ ಅಂತ ತಜ್ಞರು ಹೇಳಿದ್ದಾರೆ ಎಂದು ವಿವರಿಸಿದರು.

- Advertisement -



Home Plus


LEAVE A REPLY

Please enter your comment!
Please enter your name here

- Advertisment -

Most Popular

Recent Comments