Thursday, July 29, 2021
Homeರಾಜಕೀಯಕೋವಿಶೀಲ್ಡ್ ಲಸಿಕೆ ಡೋಸ್ ಅಂತರ 12-16 ವಾರಗಳಿಗೆ ಹೆಚ್ಚಿಸಬಹುದೆಂದು ಕೇಂದ್ರಕ್ಕೆ ಸೂಚನೆ ನೀಡಿಲ್ಲ : ವಿಜ್ಞಾನಿಗಳ...

ಕೋವಿಶೀಲ್ಡ್ ಲಸಿಕೆ ಡೋಸ್ ಅಂತರ 12-16 ವಾರಗಳಿಗೆ ಹೆಚ್ಚಿಸಬಹುದೆಂದು ಕೇಂದ್ರಕ್ಕೆ ಸೂಚನೆ ನೀಡಿಲ್ಲ : ವಿಜ್ಞಾನಿಗಳ ತಂಡ

- Advertisement -
usha-jewellers
- Advertisement -Home Plus

ನವದೆಹಲಿ : ಕೊರೋನಾದ ಲಸಿಕೆಗಳಲ್ಲಿ ಒಂದಾದ ಕೋವಿಶೀಲ್ಡ್ ಲಸಿಕೆಯ ಡೋಸ್ ಅಂತರವನ್ನು 12ರಿಂದ 16 ವಾರಗಳಿಗೆ ಹೆಚ್ಚಿಸಬಹುದೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿಲ್ಲ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ. ತಾಂತ್ರಿಕ ಸಲಹಾ ಸಮಿತಿಯ ಮೂವರು ವಿಜ್ಞಾನಿಗಳ ತಂಡ ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ.

ಡೋಸ್‍ಗಳ ನಡುವಿನ ಅಂತರವನ್ನು 6-8 ವಾರಗಳ ಬದಲಾಗಿ 12-16 ವಾರಗಳಿಗೆ ವಿಸ್ತರಿಸಲಾಗಿದೆ ಎಂದು ಮೇ.13ರಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿತ್ತು. ಲಸಿಕೆಯ ಕೊರತೆಯ ಕಾರಣಕ್ಕಾಗಿ ಈ ಅಂತರವನ್ನು ಹೆಚ್ಚಿಸಿಲ್ಲ ಎಂದು ಸಹ ತಿಳಿಸಿತ್ತು.

ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು ಬ್ರಿಟನ್‍ನಿಂದ ಪಡೆದ ಸಾಕ್ಷ್ಯಗಳ ಆಧಾರದಲ್ಲಿ ಮಾಡಿದ್ದ ಶಿಫಾರಸಿನ ಮೇರೆಗೆ ಡೋಸ್‍ಗಳ ಮಧ್ಯೆ ಅಂತರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿತ್ತು. ಆದರೆ ವಿಜ್ಞಾನಿಗಳ ತಂಡ, 12 ವಾರಕ್ಕಿಂತ ಹೆಚ್ಚು ಲಸಿಕೆಯ ಮಧ್ಯೆ ಅಂತರ ನೀಡಬಹುದು ಎಂದು ನಾವು ಸೂಚಿಸಿಲ್ಲ. ಡೋಸ್ ನಡುವಣ ಇಷ್ಟು ಅಂತರ ಹೆಚ್ಚಿಸುವ ಶಿಫಾರಸು ಮಾಡಲು ಸಾಕಷ್ಟು ದತ್ತಾಂಶಗಳು ಸಲಹಾ ಸಮಿತಿಯ ಬಳಿ ಇರಲಿಲ್ಲ ಎಂದು ತಿಳಿಸಿದೆ. ಸಲಹಾ ಸಮಿತಿಯ 14 ಸದಸ್ಯರ ಪೈಕಿ ಮೂವರು ವಿಜ್ಞಾನಿಗಳು ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಸಾಂಕ್ರಾಮಿಕ ಸೋಂಕು ಶಾಸ್ತ್ರದ ರಾಷ್ಟ್ರೀಯ ಸಂಸ್ಥೆಯ ಮಾಜಿ ನಿರ್ದೇಶಕ ಎಂ.ಡಿ ಗುಪ್ತೆ, ವಿಶ್ವ ಆರೋಗ್ಯ ಸಂಸ್ಥೆಯು ಸಲಹೆ ನೀಡಿದ್ದ 8 ರಿಂದ 12 ವಾರಗಳ ಅವಧಿಯನ್ನು ನಿಗದಿಪಡಿಸಲು ಒಪ್ಪಿಗೆ ನೀಡಲಾಗಿತ್ತು. ಆದರೆ 12 ವಾರಗಳಿಗೂ ಹೆಚ್ಚಿನ ಅಂತರ ನಿಗದಿಪಡಿಸುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಸಮಿತಿಯಲ್ಲಿ ದತ್ತಾಂಶ ಇರಲಿಲ್ಲ. ಹೀಗಾಗಿ ಈ ಬಗ್ಗೆ ಕೇಂದ್ರಕ್ಕೆ ಸಲಹೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಸಮಿತಿಯ ಮತ್ತೊಬ್ಬ ಸದಸ್ಯ ಮ್ಯಾಥ್ಯೂ ವರ್ಗೀಸ್, ನಾವು ಲಸಿಕೆಯ ಡೋಸ್ ಅಂತರವನ್ನು 8-12 ವಾರಗಳಿಗೆ ವಿಸ್ತರಿಸಬಹುದು ಎಂದಷ್ಟೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು ಎಂದು ತಿಳಿಸಿದ್ದಾರೆ.

- Advertisement -

Renault

LEAVE A REPLY

Please enter your comment!
Please enter your name here

- Advertisment -

Most Popular

Recent Comments