Friday, May 14, 2021
HomeUncategorizedಆರೋಗ್ಯವಾಟ್ಸ್ಅಪ್‍ನಲ್ಲಿಯೂ ಕೋವಿಡ್‍ ಲಸಿಕಾ ಕೇಂದ್ರದ ಮಾಹಿತಿ ಲಭ್ಯ

ವಾಟ್ಸ್ಅಪ್‍ನಲ್ಲಿಯೂ ಕೋವಿಡ್‍ ಲಸಿಕಾ ಕೇಂದ್ರದ ಮಾಹಿತಿ ಲಭ್ಯ

- Advertisement -
Rental
Rental
- Advertisement -Home Plus
- Advertisement -
Platform
Maya Builders

ಭಾರತದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಕೋವಿಡ್‍-19 ಲಸಿಕಾ ಅಭಿಯಾನ ಜಾರಿಯಲ್ಲಿದೆ. ಮೊಬೈಲ್ ನಲ್ಲಿ ರಿಜಿಸ್ಟ್ರೇಶನ್ ಮಾಡಿಕೊಂಡು ನಿಮ್ಮ ಸಮೀಪದಲ್ಲಿರುವ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಆದರೆ ಸಮೀಪ ಕೇಂದ್ರ ಎಲ್ಲಿದೆ ಎಂದು ಹುಡುಕಾಡುವುದು ಸ್ಪಲ್ಪ ಕಷ್ಟದ ಕೆಲಸ. ಆದರೆ ಇನ್ಮುಂದೆ ಆ ಟೆನ್ಶನ್ ಇಲ್ಲ. ವಾಟ್ಸ್ಅಪ್‍ನಲ್ಲಿ ಸಮೀಪದ ಲಸಿಕಾ ಕೇಂದ್ರದ ಮಾಹಿತಿ ನಿಮಗೆ ಲಭ್ಯವಾಗಲಿದೆ.

ಹೌದು, ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಬಳಕೆದಾರರು ಸಹ ಈಗ ಸುಲಭವಾಗಿ ಕೊರೊನಾ ಲಸಿಕೆ ಕೇಂದ್ರವನ್ನು ಸರ್ಚ್‌ ಮಾಡಬಹುದಾಗಿದೆ. ನಿಮ್ಮ ಸಮೀಪ ಕೋವಿಡ್ ಲಸಿಕಾ ಕೇಂದ್ರ ಎಲ್ಲಿದೆ ಎಂದು ಯಾವ್ಯಾವುದೋ ಸೈಟ್‍ಗೆ ಹೋಗಿ ಹುಡುಕಾಡುವ ಬದಲು ವಾಟ್ಸಾಪ್‍ನಲ್ಲಿ ಲಸಿಕಾ ಕೇಂದ್ರದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ವಾಟ್ಸಾಪ್‍ನಲ್ಲಿ ಚಾಟ್‌ಬಾಟ್‌ಗಳ ರೂಪದಲ್ಲಿ ಸಹಾಯವಾಣಿಗಳನ್ನು ನಿರ್ವಹಿಸಲಾಗಿದೆ. MyGov ಕೊರೋನಾ ಹೆಲ್ಪ್‌ಡೆಸ್ಕ್ ಚಾಟ್‌ಬಾಟ್‌ಗೆ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರವನ್ನು ಕಂಡುಹಿಡಿಯುವ ಆಯ್ಕೆಯನ್ನು ವಾಟ್ಸಾಪ್ ಸೇರಿಸಿದೆ. ಈ ಚಾಟ್‌ಬಾಟ್ ನಿಮ್ಮ ಹತ್ತಿರದ ಕೋವಿಡ್‍-19 ವ್ಯಾಕ್ಸಿನೇಷನ್ ಕೇಂದ್ರದ ಮಾಹಿತಿಯನ್ನು ಸುಲಭವಾಗಿ ನಿಮ್ಮ ಮುಂದಿಡುತ್ತದೆ.

ಲಸಿಕಾ ಕೇಂದ್ರವನ್ನು ಹುಡುಕುವುದು ಹೇಗೆ?

ವಾಟ್ಸಾಪ್ ಮೂಲಕ ಹತ್ತಿರದ ಕೋವಿಡ್‍-19 ಲಸಿಕೆ ಕೇಂದ್ರವನ್ನು ಹುಡುಕಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು. ಮೊದಲಿಗೆ +91 9013151515 ಸಂಖ್ಯೆಯನ್ನು ನಿಮ್ಮ ಮೊಬೈಲ್‍ನಲ್ಲಿ ಸೇವ್ ಮಾಡಿಕೊಳ್ಳಿ. ಅದು myGov ಕೊರೋನಾ ಹೆಲ್ಪ್‌ಡೆಸ್ಕ್ ಚಾಟ್‌ಬಾಟ್‌ಗೆ ಸೇರಿಕೊಳ್ಳುತ್ತದೆ. ನಂತರ ವಾಟ್ಸಾಪ್‍ ಗೆ ಹೋಗಿ contact ಲಿಸ್ಟ್ ನಲ್ಲಿ ಸೇವ್ ಆಗಿರುವ ಈ ನಂಬರ್‍ ನ್ನು ಹುಡುಕಿ. ಈ ನಂಬರ್‍ ಗೆ ನಮಸ್ತೆ ಎಂಬ ಮೆಸೇಜ್‍ನ್ನು ಕಳುಹಿಸಿ.
ನಂತರ ಸ್ವಯಂಚಾಲಿತ ಪ್ರತಿಕ್ರಿಯೆ ನಿಮ್ಮ ಪಿನ್ ಕೋಡ್ ನ್ನು ಕೇಳುತ್ತದೆ. ಅದನ್ನು ನಮೂದಿಸಿ. ಈಗ ಚಾಟ್‌ಬಾಟ್ ನಿರ್ದಿಷ್ಟ ಸ್ಥಳದಲ್ಲಿ ಲಭ್ಯವಿರುವ ಲಸಿಕಾ ಕೇಂದ್ರದ ಪಟ್ಟಿಯನ್ನು ನಿಮಗೆ ಕಳುಹಿಸುತ್ತದೆ. ಒಂದು ವೇಳೆ ನೀವು myGov ಸಂಪರ್ಕ ಸಂಖ್ಯೆಯನ್ನು ಉಳಿಸಲು ಬಯಸದಿದ್ದರೆ, ನೀವು ಕೇವಲ wa.me/919013151515 ಗೆ ಹೋಗಬಹುದು.

ಲಸಿಕೆ ಪಡೆದುಕೊಳ್ಳುವವರಿಗೆ ಅನುಕೂಲವಾಗುವಂತೆ ಗೂಗಲ್ ಅಪ್ಲಿಕೇಶನ್ ಈಗಾಗಲೇ ಮಾಹಿತಿ ನೀಡುತ್ತಿದೆ. ಗೂಗಲ್ ಸರ್ಚ್ ಅಥವಾ ಮ್ಯಾಪ್ ಮೂಲಕ ವ್ಯಾಕ್ಸಿನ್ ಸೆಂಟರ್ ನಿಯರ್ ಮಿ ಎಂದು ಟೈಪ್ ಮಾಡಿದರೆ ಸಮೀಪದಲ್ಲಿರುವ ಲಸಿಕಾ ಕೇಂದ್ರದ ಮಾಹಿತಿಯನ್ನು ಗೂಗಲ್ ತನ್ನ ಬಳಕೆದಾರರಿಗೆ ನೀಡುತ್ತದೆ. ಇದೀಗ ಇದೇ ಹಾದಿಯಲ್ಲಿ ವಾಟ್ಸಾಪ್ ಕೂಡ ಹೆಜ್ಜೆಯಿಟ್ಟಿದೆ. ವಾಟ್ಸಾಪ್‌ ಬಳಕೆದಾರರಿಗೆ ಹತ್ತಿರದ ಕೊರೊನಾ ಲಸಿಕೆ ಕೇಂದ್ರವನ್ನು ಕಂಡುಹಿಡಿಯಲು ಉತ್ತಮ ಆಯ್ಕೆಯನ್ನು ಪರಿಚಯಿಸಿದೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments