Tuesday, June 6, 2023
Homeರಾಜಕೀಯದಡ್ಡಲ್ ಕಾಡ್- ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

ದಡ್ಡಲ್ ಕಾಡ್- ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

- Advertisement -


Renault

Renault
Renault

- Advertisement -

ದಡ್ಡಲ್ ಕಾಡ್- ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ದೇರೆಬೈಲ್ ದಕ್ಷಿಣ ವಾರ್ಡಿನ ದಡ್ಡಲ್ ಕಾಡ್ ರಾಷ್ಟ್ರೀಯ ಹೆದ್ದಾರಿ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ರಾಷ್ಟ್ರೀಯ ಹೆದ್ದಾರಿಯಿಂದ ದಡ್ಡಲ್ ಕಾಡು ಸಂಪರ್ಕಿಸುವ ರಸ್ತೆ ಹಾಳಾಗಿ ವಾಹನ ಸಂಚಾರಕ್ಕೆ ತೊಡಕಾಗುತಿತ್ತು. ಇಳಿಜಾರಿನಲ್ಲಿ ವಾಹನ ಅಪಘಾತವಾಗುವ ಸಂಭವಿರುವುದನ್ನು ಮನಗಂಡು ಈ ರಸ್ತೆಯ ಅನುದಾನ ಬಿಡುಗಡೆಗೊಳಿಸಲಾಗಿತ್ತು‌. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಿದರೆ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಎಂದು ಶಾಸಕ ಕಾಮತ್ ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರರ್ ಶಶಿಧರ್ ಹೆಗ್ಡೆ, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಚರಿತ್ ಪೂಜಾರಿ, ಗುರುದತ್ ಕೋಟ್ಯಾನ್, ಸುನಂದಾ, ಪ್ರಸನ್ನ ದಡ್ಡಲ್ ಕಾಡ್, ಶ್ರೀನಿವಾಸ್ ಪೈ, ಪವನ್ ಕುಮಾರ್, ಪ್ರಜ್ವಲ್ ಕುಮಾರ್, ಪ್ರತಾಪ್, ಜಯಚಂದ್ರ, ಪ್ರವೀಣ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments