ಮಂಗಳೂರು: ಖಾಸಗಿ ಚಾನೆಲ್ ನ ಚರ್ಚಾಗೋಷ್ಠಿಯಲ್ಲಿ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥನೆಂದು ಎನಿಸಿಕೊಂಡವ ಎಸ್‌ಡಿಪಿಐ ಪಕ್ಷವನ್ನು ಬಿಜೆಪಿಗೆ ಹೋಲಿಕೆ ಮಾಡಿ ಮಾತನಾಡಿರುವುದು ಹಾಸ್ಯಾಸ್ಪದ ಮತ್ತು ಅವರ ಪ್ರಚಾರಪ್ರಿಯತನವಾಗಿದೆ ಎಂದು SDPI ಮಂಗಳೂರು ದಕ್ಷಿಣ ವಿದಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸುಹೈಲ್ ಖಾನ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಮತ್ತು ಎಸ್‌ಡಿಪಿಐ ವರು ಪರಸ್ಪರ ಅಣ್ಣತಮ್ಮಂದಿರು ಎಂಬ ಬಾಲಿಶತನದ ಹೇಳಿಕೆ ನೀಡಿರುವ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥನ ಹೆಸರಿನಲ್ಲಿರುವ ಈ ವ್ಯಕ್ತಿ ಹಲವಾರು ವರ್ಷಗಳಿಂದ ಇದರ ರಾಜ್ಯಾಧ್ಯಕ್ಷನಾಗಿದ್ದರು ಈ ಬಾರಿ ಜಿಲ್ಲೆಯಲ್ಲಿ ಈತನ ಪಕ್ಷಕ್ಕೆ ಪಂಚಾಯತ್ ಚುನಾವಣೆಯಲ್ಲಿ ಸಾಧನೆ ಮಾಡಲು ಅಸಾಧ್ಯವಾಗಿರುವುದರಿಂದ ಕೇವಲ ಹನ್ನೊಂದು ವರ್ಷಗಳಲ್ಲಿ ಇನ್ನೂರಕ್ಕೂ ಅಧಿಕ ಸೀಟ್ ಗಳನ್ನು ಪಡೆದಿರುವ ಎಸ್‌ಡಿಪಿಐ ಯನ್ನು ವಿಮರ್ಷಣೆ ಮಾಡಿ ಪುಕ್ಕಟೆ ಪ್ರಚಾರ ಪಡೆಯುವ ಉದ್ದೇಶವಷ್ಟೆ,ಇವರು ಎಂಆರ್ಪಿಎಲ್ ನ ಸಮಸ್ಯೆ ಮಾತ್ರ ಈ ದೇಶದ ಅತೀ ದೊಡ್ಡ ಸಮಸ್ಯೆ ಎಂದು ಭಾವಿಸಿ ಯಾವಾಗಲೂ ಅದೊಂದನ್ನು ಹಿಡಿದುಕೊಂಡು ತಾನೋರ್ವ ದೊಡ್ಡ ಹೋರಾಟಗಾರ ಎಂದು ಬಿಂಬಿಸಲು ದಾಖಲೆ ರೆಡಿ ಮಾಡಲು ಹೊರಟಂತೆ ಬಾಸವಾಗ್ತಾ ಇದೆ.
ಅದೇ ರೀತಿ ಎಸ್‌ಡಿಪಿಐಯ ಬಗ್ಗೆ ತಪ್ಪು ಸಂದೇಶ ಹರಡುವ ಮುಂಚೆ ಈತನ ಪಕ್ಷದ ಕಾರ್ಯಕರ್ತರು ಹಗಲಿನಲ್ಲಿ ಕಮ್ಯುನಿಸ್ಟ್ ಸಿದ್ದಾಂತದ ಹೆಸರಿನಲ್ಲಿ ಕೆಲಸ ಮಾಡುತ್ತಾ ರಾತ್ರಿ ಯಾದಾಗ ಆರ್ ಎಸ್ ಎಸ್ ನ ಚಡ್ಡಿಯೊಳಗೆ ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಜಿಲ್ಲೆಯ ಜನತೆಗೆ ಗೊತ್ತಿಲ್ಲದ ವಿಷಯವೇನು ಅಲ್ಲ ಎಂಬುದನ್ನು ಇವರು ಅರ್ಥ ಮಾಡಿಕೊಳ್ಳಬೇಕಾಗಿದೆ.
ಕೇರಳದಲ್ಲಿ ಹಲವಾರು ಅಮಾಯಕರೊಂದಿಗೆ ತಾಂಟಿ ರಕ್ತಪಾತ ನಡೆಸಿ ಕೆಂಪು ಉಗ್ರರ ಪಕ್ಷ ಎಂಬ ಕುಖ್ಯಾತಿ ಪಡೆದಿರುವ ಕಮ್ಯುನಿಸ್ಟ್ ಪಕ್ಷವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಇವರು ಮೊದಲು ಕಾರ್ಯಪ್ರವೃತರಾಗಲಿ ಆಮೇಲೆ ಎಸ್‌ಡಿಪಿಐ ಬಗ್ಗೆ ಮಾತನಾಡಲಿ ಎಂದು ಸುಹೈಲ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.