ಅತ್ತೆ ಮತ್ತು ಸೊಸೆ ಸಂಬಂಧ ತಾಯಿ ಮಗಳ ಸಂಬಂಧದ ರೀತಿ ಪವಿತ್ರವಾದದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಅತ್ತೆ-ಸೊಸೆ ಬಾಂಧವ್ಯವೂ ಸರಿಯಾಗಿಲ್ಲ. ಸುಳ್ಯದ ಪೈಚಾರಿನಲ್ಲಿ ಸೊಸೆ ತನ್ನ ಅತ್ತೆಯ ಮೇಲೆ ಬಿಸಿನೀರಿಗೆ ಮೆಣಸಿನ ಪುಡಿ ಬೆರೆಸಿ ಎರಚಿದ ಅಮಾನವೀಯ ಘಟನೆ ನಡೆದಿದೆ.
ಪೈಚಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಮೈಮೂನ ಈ ಅಮಾನವೀಯ ಕೃತ್ಯ ಎಸಗಿದ ಆರೋಪಿ. ಇಸ್ಮಾಯಿಲ್ ರವರ ತಾಯಿ ಮೇಲೆ ನಿಷ್ಕರುಣಿ ಸೊಸೆ ಬಿಸಿ ನೀರು ಎರಚಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಸ್ಮಾಯಿಲ್ ಮತ್ತು ಅಬ್ದುಲ್ಲಾ ರವರು ಸಹೋದರರಾಗಿದ್ದು, ಪೈಚಾರಿನಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದಾರೆ. ಇವರ ತಾಯಿ ಅಬ್ದುಲ್ಲಾ ರವರ ಮನೆಯಲ್ಲಿ ವಾಸವಿದ್ದಾರೆ. ಅಣ್ಣ ತಮ್ಮಂದಿರು ಅಕ್ಕಪಕ್ಕದಲ್ಲಿದ್ದರು ಜಾಗದ ವಿಚಾರದಲ್ಲಿ ಇವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇಸ್ಮಾಯಿಲ್ ತಾಯಿ ಅಬ್ದುಲ್ಲಾ ರ ಮಕ್ಕಳಿಗೆ ಮಾವಿನ ಹಣ್ಣು ಕೊಯ್ದು ಕೊಟ್ಟರು ಅನ್ನುವ ಕ್ಲುಲ್ಲಕ ಕಾರಣಕ್ಕೆ ಸೊಸೆ ಮೈಮುನಾ ಮೆಣಸಿನ ಪುಡಿ ಬೆರೆಸಿ ಬಿಸಿ ನೀರನ್ನು ಅತ್ತೆಯ ಮೇಲೆ ಎರಚಿದ್ದಾರೆ ಎಂದು ಆರೋಪಿಸಲಾಗಿದೆ.
ಛೆ ಪಾಪ..,
ಸೊಸೆಗೂ ಹಾಗೇ ಮಾಡಿ.