Friday, October 7, 2022
Homeಕರಾವಳಿಮುರ ರೈಲ್ವೇ ಟ್ರ್ಯಾಕ್‌ನಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ: ಸಾವಿನ ಸುತ್ತ ಹಲವು ಅನುಮಾನ

ಮುರ ರೈಲ್ವೇ ಟ್ರ್ಯಾಕ್‌ನಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ: ಸಾವಿನ ಸುತ್ತ ಹಲವು ಅನುಮಾನ

- Advertisement -
Renault

Renault

Renault

- Advertisement -

ಪುತ್ತೂರು: ಮುರ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾದ ಘಟನೆ ಫೆ. 12ರ ತಡ ರಾತ್ರಿ ಬೆಳಕಿಗೆ
ಬಂದಿದೆ. ಘಟನೆಗೆ ಸಂಬಂಧಿಸಿ ವ್ಯಕ್ತಿಗೆ ರೈಲು ಡಿಕ್ಕಿಯಾದ ಯಾವುದೇ ಗುರುತು
ಇಲ್ಲದಿರುವುದರಿಂದ ಕೊಲೆ ಮಾಡಲಾಗಿದೆ ಎಂದು ವ್ಯಕ್ತಿಯ ಸಾವಿನ ಸುತ್ತ ಶಂಕೆ ವ್ಯಕ್ತವಾಗಿದೆ.

ಮೂಲತಃ ಮಡಿಕೇರಿ ನಿವಾಸಿ ಮುರದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವ ಸೋಮಣ್ಣ(32)ರವರು ಮೃತಪಟ್ಟವರು.
ಅವರು ಹೊಟೇಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಫೆ. 12ರ ಎಂದಿನಂತೆ ರಾತ್ರಿ ಗಂಟೆಯಾದರೂ ಮನೆಗೆ ಬಾರದ
ಹಿನ್ನೆಲೆಯಲ್ಲಿ ಸೋಮಣ್ಣ ಅವರ ಪತ್ನಿ ಪುತ್ತೂರು ಅರಣ್ಯ ಇಲಾಖೆಯಲ್ಲಿ ಗಾರ್ಡ್ಆ ಗಿರುವ ಭಾಗ್ಯ ಅವರು ಹುಡುಕಾಡಿಕೊಂಡು
ಬಂದಿದ್ದ ವೇಳೆ ರೈಲ್ವೆ ಹಳಿಯಲ್ಲಿ ಗಂಡ ಸೋಮಣ್ಣ ಅವರ ಮೃತ ದೇಹ ಪತ್ತೆಯಾಗಿತ್ತು. ಘಟನೆ ಕುರಿತು ಪುತ್ತೂರು
ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಕೊಂಡು ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ರೈಲು ಸಂಚಾರ ಇರಲಿಲ್ಲ:
ರಾತ್ರಿ ಸುಮಾರು 12 ಗಂಟೆಗೆ ಯಾವುದೇ ರೈಲು ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಮತ್ತು ಮೃತ ವ್ಯಕ್ತಿಯ ಮೇಲೆ ರೈಲು ಡಿಕ್ಕಿ ಹೊಡೆದ
ಯಾವುದೇ ಗುರುತು ಇಲ್ಲದ ಹಿನ್ನೆಲೆಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿಯಾಗಿಲ್ಲ. ಹಾಗಾಗಿ ರೈಲ್ವೇ ಪೊಲೀಸರು ಇದೊಂದು ರೈಲು ಡಿಕ್ಕಿಯಾಗಿ
ಮೃತಪಟ್ಟಿರುವುದಲ್ಲ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.

- Advertisement -


LEAVE A REPLY

Please enter your comment!
Please enter your name here

Most Popular

Recent Comments