ಮಂಗಳೂರು: ಕರ್ನಾಟಕದಲ್ಲಿ ಮೊದಲ ದೆಹಲಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರೆಪ್ರೆಸೆಂಟೇಟಿವ್ (DIMR) ನ ಶಾಖೆ ನಗರದ ಕೊಟ್ಟಾರ ಚೌಕಿಯಲ್ಲಿರುವ ಪ್ಲಾಮಾ ಆರ್ಕೆಡ್ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಮಂಗಳಾ ಕಿಡ್ನಿ ಫೌಂಡೇಶನ್ ಮತ್ತು ಆಸ್ಪತ್ರೆಯ ಡಾ. ಗಣಪತಿ ಭಟ್ ಶುಭಹಾರೈಸಿ ಮಾತನಾಡಿ ಮೆಡಿಕಲ್ ರೆಪ್ರೆಸೆಂಟೇಟಿವ್ ಕೋರ್ಸ್ ಹೆಚ್ಚಿನ ಸ್ಕೋಪ್ ಹೊಂದಿದ್ದು, ಬೆಳೆಯುತ್ತಿರುವ ಫಾರ್ಮಸುಟಿಕಲ್ ಇಂಡಸ್ಟ್ರಿಗೆ ಅಗತ್ಯ ಪ್ರತಿನಿಧಿಗಳನ್ನು ಸೃಷ್ಟಿಮಾಡಲು ಸಹಕಾರಿ ಎಂದರು.
ಮತ್ತೋರ್ವ ಅತಿಥಿ ಜಸ್ಟಿಸ್ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಮನೋರೋಗ ವಿಭಾಗ ಮುಖ್ಯಸ್ಥ ಡಾ. ಸತೀಶ್ ರಾವ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಮೆಡಿಕಲ್ ರೆಪ್ರೆಸೆಂಟೇಟಿವ್ ಕೋರ್ಸ್ ಕೂಡಾ ಯುವ ಜನರಿಗೆ ವಿಪುಲ ಉದ್ಯೋಗ ಅವಕಾಶ ನೀಡಿ, ಆತ್ಮ ನಿರ್ಭರ್ ಆಗಲು ಸಹಾಯ ಮಾಡಲಿದೆ. ಮೆಡಿಕಲ್ ರೆಪ್ರೆಸೆಂಟೇಟಿವ್ ಹುದ್ದೆ ಫಾರ್ಮಸುಟಿಕಲ್ ಕಂಪನಿಯ ಆಸ್ತಿ, ಎಂದರು.
DIMR ಸಂಸ್ಥೆಯ ಆಡಳಿತಧಿಕಾರಿ ಹರ್ಷ ಬಾಂಗ ಅವರು ತರಬೇತಿಯ ವಿವರ ನೀಡುತ್ತಾ, ಸಾಕಷ್ಟು ಮಂದಿಗೆ ಪ್ರೊಫೆಷನಲ್ ಆಗಿ ಮೆಡಿಕಲ್ ರೆಪ್ರೆಸೆಂಟೇಟಿವ್ ಹುದ್ದೆ ನಿರ್ವಹಿಸಲು ಇಲ್ಲಿನ ಕೋರ್ಸ್ ನೆರವಾಗಲಿದೆ.
ಇಲ್ಲಿನ ಕೋರ್ಸ್ ಫಾರ್ಮಸುಟಿಕಲ್ ಕಂಪನಿಗಳ ಉತ್ಪನ್ನದ ಸಂಪೂರ್ಣ ವಿವರ ನೀಡಿ ಪ್ರಚಾರಮಾಡುವುದಕ್ಕಾಗಿ ತರಬೇತಿ ಒದಗಿಸುತ್ತದೆ. ಇದರಿಂದ ತರಬೇತಿ ಪಡೆದವರು ಉದ್ಯೋಗ ಪಡೆಯುವುದು ಸುಲಭ, ಎಂದು ತಿಳಿಸಿದರು.
DIMR ಮಾಲಕರಾದ ಸುಷ್ಮಾ ಪ್ರದೀಪ್ ಅವರು ಬಡ ವಿದ್ಯಾರ್ಥಿಗಳಿಗೆ ತರಬೇತಿ ಶುಲ್ಕದಲ್ಲಿ ಹೆಚ್ಚಿನ ರಿಯಾಯಿತಿ ನೀಡಲಾಗುತ್ತದೆ ಮತ್ತು ಈ ಮೂಲಕ ಯುವಜನರಿಗೆ ಹೆಚ್ಚಿನ ಉದ್ಯೋಗ ಅವಕಾಶ ಸಿಗುತ್ತದೆ. ಇಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಶೇಕಡಾ 100 ರಷ್ಟು ಉದ್ಯೋಗ ಖಾತ್ರಿ ಇದೆ, ಎಂದು ವಿವರಿಸಿದರು.
ಉತ್ತಮ ಮೆಡಿಕಲ್ ರೆಪ್ರೆಸೆಂಟೇಟಿವ್ ಗಳನ್ನು ರೂಪುಗೊಳಿಸುವ ಉದ್ದೇಶ ಹೊಂದಿರುವ DIMR ವಿವಿಧ ತರಬೇತಿ ಕೋರ್ಸ್ ಗಳನ್ನು ಹೊಂದಿದೆ ಎಂದರು.