ಕೇರಳ-ಕರ್ನಾಟಕ ಗಡಿ ಭಾಗದ ಜನತೆಗೆ ಅನಾನೂಕೂಲತೆ ಆಗದಂತೆ ವರ್ತಿಸಿ…!!!
ಗಡಿ ಭಾಗದವರಿಗೆ ಕೇವಲ ಸ್ಕ್ರೀನಿಂಗ್ ಸಾಕು, ಪರೀಕ್ಷೆ ಬೇಡ…!!!
ಮಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿಕೆ…!!!
ಮಂಗಳೂರು: ಕೇರಳ ಗಡಿಯಲ್ಲಿ ಇರುವವರು ಮಂಗಳೂರನ್ನೇ ಬಹಳಷ್ಟು ಆಶ್ರಯಿಸಿದ್ದಾರೆ. ನಿತ್ಯ ಬಂದು ಹೋಗೋರಿಗೆ ಅನಾನುಕೂಲತೆ ಆಗಬಾರದು. ಈ ನಿಟ್ಟಿನಲ್ಲಿ ಅವರಿಗೆ ಕೇವಲ ಸ್ಕ್ರೀನಿಂಗ್ ಆಗಬೇಕು, ಪರೀಕ್ಷೆ ಆಗಬಾರದು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವ್ರು, ಆರೋಗ್ಯ ಸೇತು ಆಪ್ ಹಾಕಿಸಿ ಟ್ರಾಕಿಂಗ್ ಮತ್ತು ಮಾನಿಟರ್ ಮಾಡಬೇಕು. ಜೊತೆಗೆ ನಿತ್ಯ ಶಾಲಾ-ಕಾಲೇಜು, ಉದ್ಯೋಗಿಗಳಿಗೆ ಅನಾನುಕೂಲತೆ ಆಗಬಾರದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಆರೋಗ್ಯ ಸಚಿವ ಸುಧಾಕರ್ ಗೆ ತಿಳಿಸುತ್ತೇನೆ ಎಂದರು. ಇನ್ನು ಇಲ್ಲೇ ಬಂದು ಇರೋರು, ವಾಸ ಮಾಡೋರಿಗೆ ನೆಗೆಟಿವ್ ರಿಪೋರ್ಟ್ ಬೇಕು. ಅಂಥವರಿಗೆ ನೆಗೆಟಿವ್ ವರದಿ ಕಡ್ಡಾಯ ಇರಬೇಕು. ಆದ್ರೆ ಪ್ರತಿನಿತ್ಯ ಬಂದು ಹೋಗೋರು ಎಷ್ಟು ಸಲ ಅಂತ ನೆಗೆಟಿವ್ ರಿಪೋರ್ಟ್ ಮಾಡ್ತಾರೆ..?, ದಿನ ಬರೋರು ಎಲ್ಲೆಲ್ಲಿಂದ ನೆಗೆಟಿವ್ ಸರ್ಟಿಫಿಕೇಟ್ ತರೋದು ಅಲ್ವಾ?, ಹೀಗಾಗಿ ಆರೋಗ್ಯ ಸೇತು ಆಪ್ ಮೂಲಕ ಅವರನ್ನ ಟ್ರ್ಯಾಕ್ ಮಾಡಬೇಕಿದೆ ಎಂದರು.