Tuesday, June 6, 2023
HomeUncategorizedದೇವೇಗೌಡರು ದೇಶದ ಆಸ್ತಿ, ಅವರ ಮೇಲೆ ರಾಜಕೀಯ ಇಲ್ಲ : ಪ್ರೀತಮ್ ಗೌಡ

ದೇವೇಗೌಡರು ದೇಶದ ಆಸ್ತಿ, ಅವರ ಮೇಲೆ ರಾಜಕೀಯ ಇಲ್ಲ : ಪ್ರೀತಮ್ ಗೌಡ

- Advertisement -


Renault

Renault
Renault

- Advertisement -

ಹಾಸನ: ಸಮಗ್ರ ಕರ್ನಾಟಕ ಅಭಿವೃದ್ಧಿ ಸಿಎಂ ಆಶಯ. 224 ಕ್ಷೇತ್ರಗಳ ಅಭಿವೃದ್ಧಿ ಮುಖ್ಯವಾಗಿದ್ದು, ಈ ವಿಚಾರವಾಗಿ ಬಿಎಸ್​ವೈ ಒತ್ತು ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಗುರುವಾರ ಹೇಳಿದ್ದಾರೆ.

ನಗರದ ಶಕ್ತಿ ಭವನದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷ, ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡಬೇಕು. ಹಾಗಾಗಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.

ಹಾಸನ ವಿಮಾನ ನಿಲ್ದಾಣ ಸಿಎಂ ಯಡಿಯೂರಪ್ಪ ಮುತುವರ್ಜಿಯಿಂದ ಆಗಿದೆ. ಯಡಿಯೂರಪ್ಪ ಮಾಡಿದ್ದಾರೆ ಅಂದ್ರೆ ಆ ಕ್ರೆಡಿಟ್​ ನನಗೂ ಸಲ್ಲುತ್ತೆ. ದೇವೇಗೌಡರ ವಿಷಯದಲ್ಲಿ ರಾಜಕೀಯ ಮಾಡಲ್ಲ, ಅವರು ದೇಶದ ಆಸ್ತಿ, ಅವರ ಬಗ್ಗೆ ಮಾತನಾಡಲ್ಲ, ರೇವಣ್ಣ, ಹಾಸನ ಸಂಸದರು ರಾಜಕೀಯ ಮಾಡುತ್ತಿರುತ್ತಾರೆ. ಅವರನ್ನು ಎದುರಿಸುವ ಶಕ್ತಿ ಇದೆ.

ರೇವಣ್ಣ ಹಿರಿಯ ರಾಜಕಾರಣಿ ಆಗಿರುವುದರಿಂದ ಕೆಲಸದ ಕ್ರೆಡಿಟ್ ಅವರಿಗೂ ಸಲ್ಲಲಿ ಎಂದು ಪ್ರೀತಂ ಗೌಡ ಅವರು ಮಾತನಾಡಿದ್ದಾರೆ.

224 ಕ್ಷೇತ್ರಗಳನ್ನು ಸರಿಸಮನಾಗಿ ನೋಡೋ ಜವಬ್ದಾರಿ ಸಿಎಂ ಅವರದ್ದು. ಕೇವಲ ರಾಜಕೀಯಕ್ಕಾಗಿ ನೋಡಬೇಕೇ ವಿನಃ ಆಡಳಿತದಲ್ಲಿ ಕ್ಷೇತ್ರಗಳನ್ನು ನೋಡಬಾರದು. ಯಡಿಯೂರಪ್ಪ ಕೇವಲ ಬಿಜೆಪಿಗೆ ಮಾತ್ರ ಮುಖ್ಯಮಂತ್ರಿಗಳಲ್ಲ. ಎಲ್ಲಾ ಪಕ್ಷ ಶಾಸಕರಿಗೂ ಅವರೇ ಮುಖ್ಯಮಂತ್ರಿಗಳು. ಹೀಗಾಗಿ ಸಮಗ್ರ ಕರ್ನಾಟಕ ಅಭಿವೃದ್ಧಿ ಸಿಎಂ ಕನಸ್ಸಾಗಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಅನುದಾನ ಕೊಡಲಿದ್ದಾರೆ ಎಂದಿದ್ದಾರೆ.

ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ದೇವರು ಆಶೀರ್ವಾದದಿಂದ ನನ್ನ ಕ್ಷೇತ್ರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಯಾವ ತೊಂದರೆ ಮಾಡೋಕೆ ಬಂದ್ರು ಆ ತೊಂದರೆ ನಿವಾರಿಸುವ ವಿಘ್ನ ವಿನಾಯಕ ನನ್ನ ಜೊತೆ ಇದ್ದಾನೆ ಎಂದು ಹೇಳಿದರು.

ಹಾಸನದ ವಿಮಾನ ನಿಲ್ದಾಣ ಯಡಿಯೂರಪ್ಪರ ದಿಟ್ಟ ನಿರ್ಧಾರದಿಂದ ಆಗಿದ್ದು, ಅದರಲ್ಲಿ ಪ್ರೀತಂ ಗೌಡ ಆಗಲಿ, ರೇವಣ್ಣ ಆಗಲಿ ಕೇವಲ ನಗಣ್ಯ. ಹಾಸನ ಜಿಲ್ಲೆ ಮೇಲೆ ಯಡಿಯೂರಪ್ಪಗೆ ವಿಶೇಷ ವಾದ ಕಾಳಜಿ ಇದೆ. ಹೀಗಾಗಿ ಯಡಿಯೂರಪ್ಪರ ಫಲದಿಂದ ಹಾಸನ ಜಿಲ್ಲೆಗೆ ವಿಮಾನ ನಿಲ್ದಾಣ ಬಂದಿದೆ ಎಂದು ನುಡಿದರು.

ಸದ್ಯ ಯಡಿಯೂರಪ್ಪ ಮಾಡ್ತಾವರೆ ಅಂದರೆ ಅದರ ಕ್ರೆಡಿಟ್ ಅವರ ಪ್ರತಿನಿಧಿಯಾಗಿ ನನಗೆ ಸಲ್ಲುತ್ತದೆ. ಇದರಲ್ಲಿ ಏನಾದರೂ ಕ್ರೆಡಿಟ್ ತಗೋಬೇಕು ಅಂದರೆ ರೇವಣ್ಣಗೂ ಕೊಡೋಣ. ಅವರ ಕಾಲದಲ್ಲಿ ಮಾಡೋಕೆ ಆಗದೆ ಇರೋದನ್ನು ಇವಾಗ ಯಡಿಯೂರಪ್ಪ ಮಾಡಿದ್ದಾರೆ. ದೇವೇಗೌಡರು ಮನವಿ ಮೇರೆಗೆ ಮಾಡಿರೋದು. ದೇವೇಗೌಡರು ಕೇವಲ ಒಂದು ಪಕ್ಷಕ್ಕೆ ಸೀಮಿತ ಅಲ್ಲ, ಅವರು ಒಂದು ನಾಡಿನ ಆಸ್ತಿ. ಅವರ ಸಲಹೆಯಂತೆ ನಾನು ಯಡಿಯೂರಪ್ಪ ಜೊತೆ ಚರ್ಚಿಸಿ, ವಿಮಾನ ನಿಲ್ದಾಣ ಪ್ರಾರಂಭ ಆಗುತ್ತಿದೆ. ಹೀಗಾಗಿ ದೇವೇಗೌಡರ ಬಗ್ಗೆ ರಾಜಕಾರಣ ಮಾಡೋದು ಬೇಡ. ಆದರೆ, ಉಳಿದಿರುವ ರೇವಣ್ಣ ಸೇರಿದಂತೆ ಎಂಪಿ ಮಾಡುತ್ತಿದ್ದಾರೆ. ಅವರನ್ನು ಎದುರಿಸುವ ಶಕ್ತಿ ನನಗೆ ದೇವರು ಕೊಟ್ಟಿದ್ದಾನೆ. ಅವರನ್ನು ನಾನು ಎದುರಿಸುತ್ತೇನೆ ಎಂದು ಶಾಸಕ ಪ್ರೀತಂ ಗೌಡ ಅವರು ಟಾಂಗ್​ ಕೊಟ್ಟಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments