‘
ಬೆಂಗಳೂರು: ನಿರೀಕ್ಷೆಯಂತೆ ಧೃವ ಸರ್ಜಾ ನಟನೆಯ ಪೊಗರು ಚಿತ್ರ ಗ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಫಸ್ಟ್ ಶೋಗೆ ಅಭಿಮಾನಿಗಳು ರಾತ್ರಿಯಿಂದಲೇ ಕಾದ್ದಿದ್ದಕ್ಕೂ ಸಾರ್ಥಕವಾಗಿದೆ ಎಂಬ ಭಾವನೆ ಮೂಡಿದೆ.
ಅರ್ಜುನ್ ಸರ್ಜಾ ಬ್ಯಾಗ್‌ರೌಂಡ್ ವಾಯ್ಸ್, ಮೈನವಿರೇಳಿಸುವ ಪೈಟಿಂಗ್, ಪಂಚಿಂಗ್ ಡೈಲಾಗ್ ಗೆ ಅಭಿಮಾನಿಗಳು ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ. ಕಳೆದೊಂದು ವರ್ಷದಿಂದ ಮಾಸ್ ಆಡಿಯನ್ಸ್‌ಗೆ ರಸದೌತಣ ಉಣಬಡಿಸುವಂತಹ ಸಿನಿಮಾ ನೋಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ದೃವ ಸರ್ಜಾರ ಪೊಗರು ಅದನ್ನುಈಡೇರಿಸಿದೆ.
ಪ್ರತಿ ಪ್ರೇಮ್‌ನಲ್ಲೂ ಡೈಲಾಗ್‌ಗಳ ಸುರಿಮಳೆಯಾಗಿದೆ. ತಂದೆ ಮಗನ ಸೆಂಟಿಮೆಂಟ್, ಮದ್ಯಾಂತರದಲ್ಲಿ ಹಿರೋ ಅರೆಸ್ಟ್, ತಾಯಿಯಿಂದಲೇ ಮಗನ ಮೇಲೆ ಕಂಪ್ಲೆಂಟ್ ಕಡೊವುದು, ಹಿರೋ ಒಳ್ಳೆಯವನ ಕೆಟ್ಟವನ ಎಂಬುದನ್ನು ನಿರ್ದೇಶಕ ನಂದ ಕಿಶೋರ್ ಅವರು ಇಂಟರ್ವಲ್‌ವರೆಗೆ ಕಾಯ್ದಿಡುವ ಮೂಲಕ ಪ್ರೇಕ್ಷಕರನ್ನು ಸೀಟಿನಿ ತುದಿಗೆ ತಂದು ಕೂರಿಸಿದ್ದಾರೆ.
ಚಿತ್ರದ ಪೂರ್ತಿ ಧೃವ ಸರ್ಜಾ ಅವರೇ ಮಿಂಚಿದ್ದು ನಾಯಕಿ ಪಾತ್ರ ನೇಪಥ್ಯ ಎನ್ನುವಂತಿದೆ. ಅಗಾಗಾ ಬಂದು ಹೋಗುವ ಪಾತ್ರವಾದರೂ ಪ್ರೇಕ್ಷಕರ ಮನಸೆಳೆಯುವಲ್ಲಿ ರಶ್ಮಿಕಾ ಮಂದಣ್ಣ ಇಷ್ಟವಾಗುತ್ತಾರೆ.
ಹಾಡುಗಳಲ್ಲಿ ಹೈಟೆಕ್ ಸೆಟಿಂಗ್ ಹಾಕಲಾಗಿದೆ. ಎಲ್ಲೂ ಬೋರ್ ಆಗದೆ ಚಿತ್ರ ತುಂಬಾ ಸ್ಪೀಡಾಗಿ ಸಾಗುತ್ತದೆ. : ಕೆಲವು ಸನ್ನಿವೇಶದ ಡೈಲಾಗ್ ನಲ್ಲಿ ಉಪೇಂದ್ರ ಸಿನಿಮಾದ ನೆನಪುಗಳು ಬರುತ್ತವೆ. ತಾಯಿ ಪಾತ್ರದಲ್ಲಿ ಪವಿತ್ರಾ ಲೋಕೇಶ್, ತಂದೆ ಪಾತ್ರದಲ್ಲಿ ರವಿಶಂಕರ್ ಮನೋಜ್ಞ ಅಭಿನಯ ಮಾಡಿದ್ದಾರೆ.
ಒಟ್ಟಾರೆ ಚಿತ್ರವೂ ನೋಡಿಸಿಕೊಂಡು ಹೋಗಲಿದ್ದು ಎರಡೂವರೆ ಗಂಟೆ ಟೈಂಪಾಸ್‌ಗೆ ಏನೂ ಕಮ್ಮಿಯಿಲ್ಲ ಎನ್ನುವಂತಿದೆ. ಮಾಸ್ ಆಡಿಯನ್ಸ್‌ಗೆ ಚಿತ್ರ ಸೂಪರ್ ಹಿಟ್ ಆಗಿದ್ದು ಫುಲ್ ರಾ ಎಂದೇ ಹೇಳಬಹುದಾಗಿದೆ.
ನೋ ಸ್ಯಾನಿಟೈಸರ್, ನೋ ಮಾಸ್ಕ್
ಚಿತ್ರಮಂದಿರದಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡುವ ಸಲುವಾಗಿ ರಾಜ್ಯ ಸರ್ಕಾರ ಹೊರಡಿಸಿದ ಕೊರೊನಾ ನಿಯಮಗಳನ್ನು ಬಹುತೇಕ ಚಿತ್ರಮಂದಿರಗಳು ಗಾಳಿಗೆ ತೂರಿವೆ. ಬಹುತೇಕ ಕಡೆಗಳಲ್ಲಿ ಸ್ಯಾನಿಟೈಸರ್, ಮಾಸ್ಕ್ ಗಳು ಮಾಯವಾಗಿದ್ದು ಕರೊನಾ ನಿಯಮ ಮಣ್ಣುಪಾಲಾಗಿದೆ.
70% ಫುಲ್, ಟಿಕೆಟ್ ದರ ಏರಿಕೆ
ಗಾಂಧಿನಗರ, ಗೌಡನಪಾಳ್ಯ ಸೇರಿದಂತೆ ಕೆಲವೊಂದು ಚಿತ್ರಮಂದಿರಗಳನ್ನು ಹೊರತುಪಡಿಸಿ ಉಳಿದೆಡೆ 70% ಪ್ರೇಕ್ಷಕರು ಥಿಯೇಟರ್‌ಗೆ ಆಗಮಿಸಿದ್ದಾರೆ. ಇನ್ನು ಟಿಕೆಟ್ ದರದಲ್ಲಿ ಕೂಡ ಕೊಂಚ ಏರಿಕೆ ಮಾಡಲಾಗಿದೆ. ಆದರೂ ಅಭಿಮಾನಿಗಳು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪೊಗರು ನೋಡಲು ಹೊರಟ್ಟಿದ್ದಾರೆ.