ದಿನೇಶ್ ಆಚಾರ್ಯ ಇಂಟಿರಿಯರ್ ವರ್ಕ್ಸ್:
ಮರದ ಮತ್ತು ಫಾಬ್ರಿಕೇಶನ್ ಆಕರ್ಷಕ ವಿನ್ಯಾಸಕ್ಕಾಗಿ ಒಂದು ಅನುಭವೀ ಹೆಸರು!
ಮಂಗಳೂರು: ಯಾವುದೇ ಒಂದು ಮನೆ ಕಟ್ಟುವಾಗ ಆಗಲಿ, ಒಂದು ಸಣ್ಣ ಕಚೇರಿಯನ್ನು ಸಿದ್ಧಗೊಳಿಸುವ ಕೆಲಸವೇ ಇರಲಿ, ಅದರಲ್ಲಿ ಬಹಳ ಪ್ರಾಮುಖ್ಯತೆ ಕೊಡೋದು ಇಂಟಿರಿಯರ್ ಕೆಲಸಕ್ಕೇ ಇರುತ್ತದೆ. ಅದರಲ್ಲೂ ಆ ಕೆಲಸ ಮಾಡುವ ನಿಪುಣತೆ ಮೇಲೆ ಅವಲಂಬಿಸಿರುತ್ತದೆ.
ದಿನೇಶ್ ಆಚಾರ್ಯ ಅವರು ತನ್ನ ಹಲವಾರು ವರ್ಷಗಳ ಅನುಭವದ ಮೇಲೆ ಇಂಟಿರಿಯರ್ ಡಿಸೈನ್ ಕೆಲಸದಲ್ಲಿ ಮರದ ಕೆತ್ತನೆ ಇರಲಿ ಫಾಬ್ರಿಕೇಶನ್ ಕೆಲಸ ಇರಲಿ, ತನ್ನ ಕೆಲಸವನ್ನು ನಾಜೂಕಾಗಿ ನಿರ್ವಹಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.
ಅತ್ಯಾಧುನಿಕ ಮತ್ತು ಸಾಂಪ್ರದಾಯಿಕ ವಿನ್ಯಾಸದಲ್ಲಿ ನಿಪುಣರಾಗಿರುವ ಇವರ ತಂಡ ಕೂಡಾ ಗ್ರಾಹಕರಿಗೆ ಸಂಪೂರ್ಣ ತೃಪ್ತಿ ನೀಡುವಲ್ಲಿ ಯಶಸ್ವಿಯಾಗಿ ಶ್ರಮಿಸುತ್ತದೆ. ಸಮಯಕ್ಕೆ ಸರಿಯಾಗಿ, ಗ್ರಾಹಕರು ಬೇಕೆನ್ನುವ ರೀತಿಯಲ್ಲಿ, ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರ ಕನಸಿನ ಮನೆ, ಕಚೇರಿ ಅಥವಾ ಯಾವುದೇ ರೀತಿಯ ಸ್ಥಳವಿರಲಿ, ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿ ರೂಪಿಸುವುದೇ ಇವರ ಗುರಿಯಾಗಿದೆ.
ಮರದ ಕೆಲಸದಲ್ಲಿ ಕಿಟಕಿ, ಬಾಗಿಲು, ಫರ್ನಿಚರ್ಸ್, ವಾರ್ಡ್ ರೋಬ್, ಕಿಚನ್ ಕ್ಯಾಬಿನೆಟ್, ಇತ್ಯಾದಿ ಮಾಡಿಕೊಟ್ಟರೆ, ಫಾಬ್ರಿಕೇಶನ್ ಕೆಲಸದಲ್ಲೂ ಕೂಡಾ, ಸ್ಲಾಯ್ಡ್ಯಿಂಗ್ ವಿಂಡೋ, ಪಾರ್ಟಿಷನ್,ಕಿಚನ್ ಕ್ಯಾಬಿನೆಟ್ಸ್, ವಾರ್ಡರೋಬ್, ಇತ್ಯಾದಿ ಮಾಡಿಕೊಡುತ್ತಾರೆ.
ದಿನೇಶ್ ಆಚಾರ್ಯ ಅವರು ಮುಖ್ಯವಾಗಿ ತ್ವರಿತ ಸೇವೆ, ಆಕರ್ಷಕ ವಿನ್ಯಾಸ, ಗುಣಮಟ್ಟದ ಮೇಲೆ ವಿಶ್ವಾಸ ಎಂಬ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಗ್ರಾಹಕರಿಗೆ ತೃಪ್ತಿಯಾದರೆ ನಮಗೂ ಖುಷಿ ಎನ್ನುತ್ತಾರವರು.
ನಿಮಗೂ ಇಂತಹ ಇಂಟಿರಿಯರ್ ಡಿಸೈನ್ ಅಗತ್ಯವಿದ್ದಲ್ಲಿ ಅಥವಾ ಸಲಹೆ ಬೇಕಿದ್ದಲ್ಲಿ
ದಿನೇಶ್ ಆಚಾರ್ಯ ಅವರನ್ನು ಮೊಬೈಲ್
ನಂ. 9008972334 ಮೂಲಕ ಸಂಪರ್ಕ ಮಾಡಬಹುದು.