Monday, October 2, 2023
Homeಕರಾವಳಿಪುತ್ತೂರಿನ ಸ್ಥಳೀಯ ಪ್ರತ್ರಿಕೆಯಲ್ಲಿ ಪುತ್ತೂರು ಪತ್ರಕರ್ತರ ಸಂಘದ ವಿರುದ್ದ ಅವಹೇಳನಕಾರಿ ಬರಹ , ಪತ್ರಕರ್ತರ...

ಪುತ್ತೂರಿನ ಸ್ಥಳೀಯ ಪ್ರತ್ರಿಕೆಯಲ್ಲಿ ಪುತ್ತೂರು ಪತ್ರಕರ್ತರ ಸಂಘದ ವಿರುದ್ದ ಅವಹೇಳನಕಾರಿ ಬರಹ , ಪತ್ರಕರ್ತರ ಸಂಘದಿಂದ ಖಂಡನೆ

- Advertisement -



Renault

Renault
Renault

- Advertisement -

ಪುತ್ತೂರು, ಸೆಪ್ಟೆಂಬರ್ 06 : ಪುತ್ತೂರು ಪತ್ರಕರ್ತರ ಸಂಘ ಇದುವರೆಗೂ ಉತ್ತಮ ಕಾರ್ಯ ಜಿಲ್ಲೆಯಲ್ಲಿ ಉತ್ತಮ ಸಂಘವಾಗಿ ರೂಪುಗೊಂಡಿದೆ. ಇದನ್ನು ಸಹಿಸದ ಕೆಲ ಮಂದಿ ಸಂಘವನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ.

ಸಂಘವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ದುರುದ್ದೇಶದಿಂದ ಉಪ್ಪಿನಂಗಡಿ ಭಾಗದ ವರದಿಗಾರರು ಮತ್ತು ಇಲ್ಲಿನ ಸ್ಥಳೀಯ ಪತ್ರಿಕೆ ಸೇರಿಕೊಂಡು (ಇದಕ್ಕೆ ಪರಿಶೀಲನೆಗೆಂದು ನೀಡಲಾಗಿದ್ದ ಲೆಕ್ಕಪತ್ರವನ್ನು ಸಂಘದ ಸದಸ್ಯರಲ್ಲದವರಿಗೆ ಸೋರಿಕೆ ಮಾಡಿರುವುದೇ ಸಾಕ್ಷಿ ) ಇಲ್ಲಸಲ್ಲದ ಆರೋಪ ಮಾಡಿ ಇಲ್ಲಿನ ಪತ್ರಕರ್ತರ ತೇಜೋವಧೆ ಮಾಡುತ್ತಾ ಬರುತ್ತಿದೆ.

ಕೋತಿ ಬೆಣ್ಣೆಯನ್ನು ತಿಂದು ಮೇಕೆ ಮೂತಿಗೆ ಒರಸಿದಂತೆ ಇದೀಗ ಪುತ್ತೂರು ಪತ್ರಕರ್ತರ ಸಂಘದ ಪದಾಧಿಕಾರಿಗಳ, ಸದಸ್ಯರ ಮೇಲೆ ಇನ್ನಿಲ್ಲದ, ಸಾಕ್ಷ್ಯಾಧಾರಗಳಿಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಪುತ್ತೂರು ಪತ್ರಕರ್ತರ ಸಂಘ ಆರೋಪಿಸಿದೆ. ಈ ಸಂಬಂಧ ಪ್ರಕಟನೆ ಹೊರಡಿಸಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಹಿರಿಯ ಪತ್ರಕರ್ತ ಐ.ಬಿ.ಸಂದೀಪ್ ಕುಮಾರ್, ಸಂಘದಲ್ಲಿ ಪಾರದರ್ಶಕ ಆಡಳಿತವನ್ನು ನಡೆಸಲಾಗುತ್ತಿದ್ದು, ಸಂಶಯವಿದ್ದವರು ಖಂಡಿತವಾಗಿ ಪ್ರೆಸ್ ಕ್ಲಬ್ ಅನ್ನು ಸಂಪರ್ಕಿಸಬಹುದು.

ಸಂಘದ ಚುನಾವಣೆಯನ್ನು ಮುಂದೂಡುವ ಹಿಂದೆಯೂ ಸ್ಥಳೀಯ ಪತ್ರಿಕೆಯ ಕೈವಾಡವಿದ್ದು, ಆಗಸ್ಟ್ 6 ರಂದು ನಿಗದಿಯಾಗಿದ್ದ ಚುನಾವಣೆಗೆ ಜುಲೈ 15 ರಂದು ನಾಮಪತ್ರ ಸಲ್ಲಿಸುವುದೆಂದು ನಿಗದಿಯಾಗಿತ್ತು. ಆದರೆ ಚುನಾವಣಾಧಿಕಾರಿಯಾಗಿ ಆಯ್ಕೆಗೊಂಡಿದ್ದ ಸ್ಥಳೀಯ‌ ಪತ್ರಿಕೆಯ ಸಹ ಛಾಯಾಗ್ರಾಹಕ ದಿ.ಗೋಪಾಲ ನಾಯ್ಕ್ ಅವರ ಪುತ್ರ ಸುಧಾಕರ್ ಪಡೀಲ್ (53) ಎಂಬವರು ಸಂಘದ ಸದಸ್ಯರೋರ್ವರು ನೀಡಿದ ಅಲಿಖಿತ ಮನವಿಗೆ ತಕ್ಷಣವೇ ಸ್ಪಂದಿಸಿದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಸ್ಥಳೀಯ ಪತ್ರಿಕೆಯಲ್ಲಿ ಮಾಹಿತಿಯನ್ನು ನೀಡಿದ್ದರು.

ಆದರೆ ಚುನಾವಣೆ ಮುಂದೂಡಿದ ಬಗ್ಗೆ ಯಾವುದೇ ಮಾಹಿತಿಯನ್ನು ಪುತ್ತೂರು ಪತ್ರಕರ್ತರ ಸಂಘದ ಸದಸ್ಯರ ಗಮನಕ್ಕೆ ತರುವುದಾಗಲೀ, ಸಂಘದ ಕಛೇರಿಯಲ್ಲಿ ಚುನಾವಣೆ ಮುಂದೂಡಿರುವುದರ ಬಗ್ಗೆ ಕನಿಷ್ಟ ನೋಟೀಸ್ ಕೂಡಾ ಹಾಕಿಲ್ಲ. ಆದರೆ ಮುಂದುವರಿದ ಭಾಗವಾಗಿ ಸುದ್ಧಿ ಪತ್ರಿಕೆಯಲ್ಲಿ ಚುನಾವಣೆ ಮುಂದೂಡಿದ ಬಗ್ಗೆ ಚುನಾವಣಾಧಿಕಾರಿ ಸುಧಾಕರ್ ಪಡೀಲ್ ಪತ್ರಿಕಾಭವನದ ಕಛೇರಿಯಲ್ಲಿ ಜುಲೈ 16 ರಂದು ನೋಟೀಸ್ ಅಂಟಿಸುತ್ತಿರುವುದು ಎನ್ನುವ ಪೋಟೋವನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ ವಾಸ್ತವವಾಗಿ ಈ ನೋಟೀಸ್ ಅನ್ನು ಜುಲೈ 22 ರಂದು ಪತ್ರಿಕಾಭವನದ ಕಛೇರಿಯಲ್ಲಿ ಚುನಾವಣಾ ಅಧಿಕಾರಿ ಸುಧಾಕರ್ ಪಡೀಲ್ ಅಂಟಿಸುತ್ತಿರುವ ವಿಡಿಯೋ ಸಹಿತ ಎಲ್ಲಾ ದಾಖಲೆಗಳಿದ್ದು, ಪತ್ರಕರ್ತರ ಸಂಘದಲ್ಲಿ ಅವ್ಯವಹಾರ ಎನ್ನುವುದರ ಹಿಂದಿನ ಶಕ್ತಿ ಯಾವುದು ಎನ್ನುವುದು ಸಾಮಾನ್ಯ ಜ್ಞಾನವಿಲ್ಲದವರಿಗೂ ತಿಳಿಯುವ ಮಾಹಿತಿಯಾಗಿದೆ. ಈ ಹಿಂದೆ ಪುತ್ತೂರಿನಲ್ಲಿ ಯುವ ಭಾರತ್ ತಂಡ ಮತ್ತು ಸುದ್ದಿ ಬಳಗದ ನಡುವೆ ನಡೆದ ಸಂಘರ್ಷ ಕ್ಕೆ ಸಂಬಂಧಿಸಿದ ಕೇಸು ನ್ಯಾಯಾಲಯ ವಿಚಾರಣಾ ಹಂತದಲ್ಲಿದ್ದು, ಪತ್ರಿಕಾಗೋಷ್ಠಿಗೆ ಆಗಮಿಸಿದವರ ವಿರುದ್ಧ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯ ಸಾಕ್ಷಿ ನುಡಿದ ಸಾಕ್ಷಿದಾರ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಸಂಘದ ತೇಜೋವಧೆ ಮಾಡುವ ಪ್ರಯತ್ನಗಳಾಗುತ್ತಿದೆ. ಸಂಘದ ಅಧ್ಯಕ್ಷರೇ ಇದರಲ್ಲಿ ಸೇರಿಕೊಂಡಿರುವುದು ವಿಶೇಷವಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ವಿವರಿಸಲಾಗಿದೆ.

- Advertisement -

1 COMMENT

  1. ಮಾಡಿದ್ದುನ್ನು ಮಾರಾಯ ಎಂಬಂತಿದೆ ನಿಮ್ಮ ಕಥೆ ಕೇಳುವಾಗ

LEAVE A REPLY

Please enter your comment!
Please enter your name here

Most Popular

Recent Comments