Tuesday, April 20, 2021
Homeಕರಾವಳಿಜಿಲ್ಲಾ ಯುವ ಕಾಂಗ್ರೆಸ್ನ "ಯುವಕರ ನಡೆ, ಗ್ರಾಮದ ಕಡೆ" ಅಭಿಯಾನಕ್ಕೆ ಚಾಲನೆ

ಜಿಲ್ಲಾ ಯುವ ಕಾಂಗ್ರೆಸ್ನ “ಯುವಕರ ನಡೆ, ಗ್ರಾಮದ ಕಡೆ” ಅಭಿಯಾನಕ್ಕೆ ಚಾಲನೆ

ಜಿಲ್ಲಾ ಯುವ ಕಾಂಗ್ರೆಸ್ನ “ಯುವಕರ ನಡೆ, ಗ್ರಾಮದ ಕಡೆ” ಅಭಿಯಾನಕ್ಕೆ ಚಾಲನೆ.

ಮಂಗಳೂರು: ಗ್ರಾಮ ಗ್ರಾಮಗಳಲ್ಲಿ ಯುವಕರನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಜಿಲ್ಲಾ ಯುವ ಕಾಂಗ್ರೆಸ್ ಹೊರಟಿರುವುದು ಶ್ಲಾಘನೀಯ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ರವರು ಹೇಳಿದರು.

ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ “ಯುವಕರ ನಡೆ, ಗ್ರಾಮದ ಕಡೆ” ಎಂಬ ಅಭಿಯಾನದ ಕಾರ್ಯಕ್ರಮವನ್ನು ಹೂಹಾಕುವಕಲ್ಲು ಎಸ್.ಕೆ ಆಡಿಟೋರಿಯಂ ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್ ಮಾತನಾಡಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಗ್ರಾಮ ಸಮಿತಿಗಳನ್ನು ರಚಿಸಿ ಯುವಕರನ್ನು ಸೈದ್ಧಾಂತಿಕವಾಗಿ ಮತ್ತು ತಾತ್ವಿಕವಾಗಿ ಜಿಲ್ಲಾ ಯುವ ಕಾಂಗ್ರೆಸ್ ಸಜ್ಜುಗೊಳಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಡಿಪು ಬ್ಲೋಕಿನ ಇರಾ ಗ್ರಾಮಕ್ಕೆ ರಾಜೇಶ್. ಡಿ, ನರಿಂಗಾನ ಗ್ರಾಮಕ್ಕೆ ಜೋವಿ ಜೋಯಲ್ ಕುಟಿನ್ಹ ಮತ್ತು ಕೈರಂಗಲ ಗ್ರಾಮಕ್ಕೆ ಮೊಹಮ್ಮದ್ ಆರಿಫ್. ಎನ್ ಇವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ
ಶಾಸಕರಾದ ಯು.ಟಿ ಖಾದರ್ ರವರು ಆದೇಶ ಪತ್ರ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಖಾಜವ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೈಲಜಾ ಅಮರನಾಥ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರಾ, ಜಿಲ್ಲಾ ಇಂಟಕ್ ಪ್ರ.ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಿರೋಜ್ ಮಲಾರ್, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಾಹುಲ್ ಹಮೀದ್, ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಸಿರ್ ನಡುಪದವು, ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಿದ್ದಿಕ್ ಪಾರೆ, NSUI ರಾಷ್ಟ್ರೀಯ ಸಂಯೋಜಕರಾದ ಅನ್ವಿತ್ ಕಟೀಲ್, ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸೌಹಾನ್, ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹರ್ಷದ್, ವಕೀಲರಾದ ಎ.ಸಿ ಜಯರಾಜ್ ಉಪಸ್ಥಿತರಿದ್ದರು. ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವಾಝ್ ನರಿಂಗಾನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೀರ್ ಪಾಜೀರ್ ವಂದಿಸಿದರು. ಹೈದರ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments