Tuesday, September 28, 2021
Homeಅಪಘಾತವೈದ್ಯೆಯೋರ್ವಳು ಕೆರೆಯಲ್ಲಿ ಮುಳುಗಿ ದುರ್ಮರಣ… ...

ವೈದ್ಯೆಯೋರ್ವಳು ಕೆರೆಯಲ್ಲಿ ಮುಳುಗಿ ದುರ್ಮರಣ… ಕೃಷಿ ಅಧ್ಯಯನಕ್ಕೆಂದು ವಾರಣಾಸಿ ಫಾರ್ಮ್ ಹೌಸ್‍ ಗೆ ತೆರಳಿದ್ದಳು ಆಕೆ…

- Advertisement -
Renault
- Advertisement -
Home Plus
- Advertisement -

ಬಂಟ್ವಾಳ : ವಿಟ್ಲ ಸಮೀಪದ ಅಡ್ಯನಡ್ಕ ದಲ್ಲಿ ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್‍ ಹೋಗಿದ್ದ ವೈದ್ಯೆಯೊಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ವಾರಣಾಸಿ ಫಾರ್ಮ್ ಹೌಸ್ ನಲ್ಲಿ ಕೆರೆಯಲ್ಲಿ ಮುಳುಗಿ ಮಂಗಳೂರಿನ ವೈದ್ಯೆ ಮೈಜಿ ಕರೋಲ್ ಫೆರ್ನಾಂಡಿಸ್ (31) ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಇಂದು ಆಕೆ ಮೃತಪಟ್ಟಿರುವುದಾಗಿ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್‍.ಇ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃಷಿ ಅಧ್ಯಯನದ ಬಗ್ಗೆ ಆಸಕ್ತಿಯನ್ನು ಹೊಂದಿದ್ದ ಮೈಜಿ ಕರೋಲ್ ಫೆರ್ನಾಂಡೀಸ್ ವಾರಣಾಸಿ ಪಾರ್ಮ್ ಹೌಸ್’ಗೆ ಅಧ್ಯಯನಕ್ಕೆಂದು ತೆರಳಿದ್ದರು. ಸಂಜೆ ಯಾರೂ ಇಲ್ಲದ ಸಮಯ ಫಾರ್ಮ್ ಹೌಸ್‍’ನಲ್ಲಿದ್ದ ಕೆರೆಯಲ್ಲಿ ಈಜಲು ಹೋದವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಸಾಕಷ್ಟು ಸಮಯ ಕಳೆದರೂ ಆಕೆ ಹಿಂತಿರುಗದಿದ್ದ ಕಾರಣ, ಎಲ್ಲೆಡೆ ಹುಡುಕಾಡಿದಾಗ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ವತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಮೈಜಿ ಮೃತಪಟ್ಟಿದ್ದಾರೆ. ಮೃತ ಮೈಜಿ ಕರೋಲ್ ಫೆರ್ನಾಂಡಿಸ್ ಮಂಗಳೂರಿನ ಪ್ರಶಾಂತನಗರ ನಿವಾಸಿಯಾಗಿದ್ದಾರೆ. ವಾರಣಾಸಿ ಫಾರ್ಮ್ ಗೆ ಕೆಲ ದಿನಗಳ ಹಿಂದೆಯೇ ಆಗಮಿಸಿದ್ದರು. ಎರಡು ದಿನ ಊರಿಗೆ ಹೋಗಿ ಮತ್ತೆ ಬಂದು ಇಲ್ಲೇ ವಾಸ್ತವ್ಯ ನಡೆಸುತ್ತಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments