ಮಂಗಳೂರು : ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸಿದ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರ ಬಂಧನವಾಗಿದೆ. ಮಂಗಳೂರಿನ ಸೂಪರ್ ಮಾರ್ಕೆಟ್ ಒಂದರಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದ್ದಲ್ಲದೆ, ಮಾಸ್ಕ್ ಧರಿಸುವುದಿಲ್ಲ ಎಂದು ಅಂಗಡಿ ಮಾಲಕರೊಂದಿಗೆ ಕಕ್ಕಿಲ್ಲಾಯ ವಾಗ್ವಾದಕ್ಕಿಳಿದಿದ್ದರು. ಈ ಬಗ್ಗೆ ಅಂಗಡಿ ಮಾಲಕರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ ಕಕ್ಕಿಲ್ಲಾಯರವರ ಬಂಧನವಾಗಿದೆ.
ಮಾಸ್ಕ್ ಧರಿಸಲು ನಿರಾಕರಿಸಿರುವುದಕ್ಕೆ ಕದ್ರಿ ಪೊಲೀಸ್ ಠಾಣೆಯಲ್ಲಿ ಸಾಂಕ್ರಾಮಿಕ ಕಾಯ್ದೆಯಡಿ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸೂಪರ್ ಮಾರ್ಕೆಟ್‌ನ ಮಾಲಕ ರಿಯಾನ್ ರೊಸಾರಿಯೋ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇದೀಗ ಬಂಧಿಸಿದ್ದಾರೆ.
ಬುಧವಾರ ಬೆಳಗ್ಗೆ ಸೂಪರ್ ಮಾರ್ಕೆಟ್‌ಗೆ ಆಗಮಿಸಿದ್ದ ಕಕ್ಕಿಲಾಯ ಅವರು, ಮಾಸ್ಕ್ ಧರಿಸದೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಈ ಸಂದರ್ಭ ಡಾ.ಕಕ್ಕಿಲ್ಲಾಯ ಅವರು ತಾನು ಮಾಸ್ಕ್ ಧರಿಸುವುದಿಲ್ಲ ಎಂದು ವಾಗ್ವಾದಕ್ಕಿಳಿದಿದ್ದರು. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ವೈದ್ಯರೇ ನಿಯಮ ಉಲ್ಲಂಘಿಸುತ್ತಿರುವುದರ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.
Congrats sir..,