ಕೂಳೂರು: ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯ ಅನುದಾನದಡಿ 20 ಲಕ್ಷ ರೂ.ವೆಚ್ಚದಲ್ಲಿ ಬಂಗ್ರಕೂಳೂರು 16ನೇ ವಾರ್ಡ್ ನ ಪಡ್ಡೋಡಿ ರಸ್ತೆಯನ್ನು ಕಾಂಕ್ರಟೀಕರಣ ಮಾಡಲಾಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಅವರು ಇಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದಲ್ಲಿ ತಗ್ಗು ಪ್ರದೇಶವಿರುವುದರಿಂದ ಡಾಮರೀಕರಣ ಮಾಡಿದರೆ ರಸ್ತೆ ಉಳಿಯಲಾರದು. ಜನರ ಬಹುದಿನಗಳ ಬೇಡಿಕೆಯನ್ನು ಆದ್ಯತೆಯ ಮೇರೆಗೆ ಈಡೇರಿಸುತ್ತಿದೇವೆ ಎಂದರು. ಕಾಂಕ್ರಟೀಕರಣದ ಮೂಲಕ ಶಾಶ್ವತ ರಸ್ತೆ ನಿರ್ಮಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆಯಿಂದ 4 ಕೋಟಿ ಬಿಡುಗಡೆ:
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗೆ4 ಕೋಟಿ ರೂ.ಬಿಡುಗಡೆಯಾಗಿದ್ದು ತುರ್ತಾಗಿ ನಡೆಯಬೇಕಾಗಿರುವ ಕಾಮಗಾರಿಗಳನ್ನು ಗುರುತಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸಮರ್ಪಕ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಸರೋಜಿನಿ ಮಹಿಷಿ ವರದಿ ಜಾರಿ:
ಸ್ಥಳೀಯವಾಗಿ ಇರುವ ಕೈಗಾರಿಕೆ ನಮ್ಮದೇ ಯುವಕರಿಗೆ ಉದ್ಯೋಗ ನೀಡುವಲ್ಲಿ ಸರೋಜಿನಿ ಮಹಿಷಿ ಅವರ ವರದಿ ಪ್ರಮುಖ ಅಸ್ತ್ರವಾಗಿದೆ. ಇದನ್ನು ಕಟ್ಟು ನಿಟ್ಟಾಗಿ ಜಿಲ್ಲಾಮಟ್ಟಲ್ಲಿ ಜಾರಿಯಾಗಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಟ್ಟು ನಿಟ್ಟಾಗಿ ಅನುಷ್ಟಾನಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದೇನೆ. 50ಕ್ಕಿಂತ ಅಧಿಕ ಉದ್ಯೋಗಿಗಳು ಇದ್ದಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗುತ್ತದೆ. ಸಿ ಮತ್ತು ಡಿ ಗ್ರೂಪ್ ಗಳಲ್ಲಿ ಶೇ 100, ಬಿ ಗ್ರೂಪ್ ಗೆ ಶೇ 85, ಎ ಗ್ರೂಪ್ ಗೆ ಶೇ 65, ಉದ್ಯೋಗವನ್ನು ನೀಡಬೇಕೆಂಬ ನಿಯಮವಿದೆ. ಇಲ್ಲಿನ ಬೃಹತ್ ಕಂಪನಿಗಳಲ್ಲಿ ಪ್ರತಿಭಾವಂತರಿಗೆ ಉದ್ಯೋಗ ದೊರಕಿದರೆ ಪ್ರತಿಭಾ ಪಲಾಯನವನ್ನು ದೂರ ಮಾಡಬಹುದು ಎಂದು ಎಂದರು. ಸ್ಥಳೀಯ ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಮುಖಂಡರಾದ ಉಮೇಶ್ ಮಲರಾಯ ಸಾನ, ಹರಿಪ್ರಸಾದ್ ಶೆಟ್ಟಿ, ಅಶೋಕ್ ಕುಲಾಲ್,ಕಿರಣ್ ಕೋಟಿಯನ್,ರಾಜೇಶ್ ಸಂಕದ ಮನೆ,ರಮೇಶ್ ಶೆಟ್ಟಿ, ಚಂದ್ರಿಕಾ ಪ್ರಭಾಕರ್,ವಾಣಿ ಭಂಡಾರಿ,ಗಂಗಾಧರ್ ಕಿರೋಡಿಯನ್,ರಘುಪಾತ್ರಿ,ಜಯಾನಂದ್ ಅಮೀನ್,ಯಶವಂತ್ ದೊಡ್ಡಮನೆ, ಉಮೇಶ್ ಪದ್ದೋಡಿ, ಬಿ.ಕೆ ರಾಮ,ಉಮೇಶ್ ಅಮೀನ್,ವೆಂಕಪ್ಪ ದೊಡ್ಡಮನೆ, ಸುರೇಶ್ ಭಂಡಾರಿ,ಸುಧೀರ್ ಭಂಡಾರಿ, ನವನೀತ್ ಕೋಟಿಯನ್, ಗುತ್ತಿಗೆದಾರ ಸುಧಾಕರ ಪೂಂಜಾ,ಬಿಜೆಪಿ ಕಾರ್ಯಕರ್ತರು,ಸ್ಥಳೀಯರು ಉಪಸ್ಥಿತರಿದ್ದರು ಇದೇ ಸಂದರ್ಭ ಬಂಗ್ರಕೂಳೂರು ಬಳಿ ಬಸ್ ನಿಲ್ದಾಣ ನಿರ್ಮಾಣ ಹಾಗೂ ಬಸ್ ನಿಲುಗಡೆಗೆ ಸ್ಥಳೀಯರು ಮನವಿ ಸಲ್ಲಿಸಿದರು.