Tuesday, June 6, 2023
Homeರಾಜಕೀಯಬ್ರಿಟಿಷ್ ಹೈಕಮಿಷನ್ ಆಯೋಜಿಸಿದ ಸಂವಾದದಲ್ಲಿ ಭರತ್ ಶೆಟ್ಟಿ ಭಾಗಿ

ಬ್ರಿಟಿಷ್ ಹೈಕಮಿಷನ್ ಆಯೋಜಿಸಿದ ಸಂವಾದದಲ್ಲಿ ಭರತ್ ಶೆಟ್ಟಿ ಭಾಗಿ

- Advertisement -


Renault

Renault
Renault

- Advertisement -

ಬೆಂಗಳೂರು: ಕರ್ನಾಟಕವು ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿದ್ದು ಐಟಿಬಿಟಿ ಸಹಿತ ಪ್ರಮುಖ ಸಂಸ್ಥೆಗಳು ಇಂದು ಬೆಂಗಳೂರಿನಲ್ಲಿವೆ. ಬಂಡವಾಳ ಹರಿದು ಬರುವಂತಾಗಲು ಸರಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರ ಜತೆಗೆ ಸರಳ ಕಾನೂನುಗಳನ್ನು ಅನುಷ್ಟಾನಗೊಳಿಸಿ ಮೂಲಸೌಕರ್ಯ ಒದಗಿಸಲು ಬದ್ದವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಅವರು ಬ್ರಿಟಿಷ್ ಹೈಕಮಿಷನ್ ಆಯೋಜಿಸಿದ್ದ ಕರ್ನಾಟಕದಲ್ಲಿ ರಾಜಕೀಯ, ಆರ್ಥಿಕ ಬೆಳವಣಿಗೆ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಹವಾಮಾನ ಬದಲಾವಣೆ ಕುರಿತಂತೆ ಕೇಂದ್ರ,ರಾಜ್ಯ ಸರಕಾರ ಕಾಳಜಿಯನ್ನು ಹೊಂದಿದೆ. ಮಾಲಿನ್ಯ ತಡೆಗೆ ಪರಿಸರ ಸಹ್ಯ ಉದ್ಯಮದ ಉತ್ತೇಜನಕ್ಕಾಗಿ ಸೋಲಾರ್ ಅಳವಡಿಕೆ, ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನವನ್ನು ನೀಡುತ್ತಿದೆ. ಸ್ವಚ್ಚ ಭಾರತ್ ಮೂಲಕ ದೇಶದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಕೊರೊನಾ ಹಾವಳಿಯನ್ನು ಭಾರತ ಸಮರ್ಥವಾಗಿ ನಿಭಾಯಿಸಿದೆ. ನಮ್ಮದೇ ಆದ ವ್ಯಾಕ್ಸಿನ್ ಸಂಶೋಧಿಸಿ
ಜನರಿಗೆ ಮುಟ್ಟಿಸುವಲ್ಲಿ ಸಫಲರಾಗಿದ್ದೇವೆ.ಇದು ದೇಶದ ಬದ್ದತೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿನ ಬಲಾಢ್ಯತೆಯನ್ನು ತೋರಿಸುತ್ತದೆ ಎಂದರು.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ,ಲೌ ಜಿಹಾದ್ ಗೊಂದಲ ಕುರಿತಂತೆ ರಾಯಭಾರಿಗಳ ಅನುಮಾನ ಪರಿಹರಿಸಿದ ಅವರು ಗೋವುಗಳನ್ನು ರಾಜ್ಯದ ದೇಶದ ಜನ ಪೂಜ್ಯ ಭಾವನೆಯಿಂದ ನೋಡುತ್ತಾರೆ.ನಮ್ಮ ಆಡಳಿತ ನಡೆಸುವ ಪಕ್ಷದ ಸಿದ್ದಾಂತದಂತೆ ಗೋ ಹತ್ಯಾ ನಿಷೇಧ ಕಾಯಿದೆ ಜಾರಿಗೆ ತರಲು ನಾವು ಬದ್ದರಾಗಿದ್ದೆವು.ಇದೀಗ ಕಳೆದ ತಿಂಗಳು ಜಾರಿಯಾಗಿದೆ. ಲೌ ಜಿಹಾದ್ ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲಿ ಈ ಬಗ್ಗೆ ನಿಗಾ ವಹಿಸಲಾಗಿದೆ. ಅಗತ್ಯ ಬಿದ್ದರೆ ಕಾನೂನು ಜಾರಿ ತರಬೇಕು ಎನ್ನುವುದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ನುಡಿದರು. ಬೆಂಗಳೂರು ರಾಯಭಾರಿ ಕಚೇರಿಯ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಜೆಮರ್ಿ ಪಿಲಿಮೊರ್ ಬೆಡ್ಪೋಡರ್್, ಬ್ರಿಟಿಷ್ ಸರಕಾರದ ರಾಜಕೀಯ ಮತ್ತು ಮಾಧ್ಯಮ ವಿಭಾಗದ ಕೌನ್ಸೆಲರ್ ಕಾಟಿ ಬಡ್ಜ್
ಸಂವಾದದಲ್ಲಿ ಭಾಗವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments