Sunday, September 24, 2023
HomeUncategorizedಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ಕೊಟ್ಟ ಡಿಸಿಎಂ ಲಕ್ಷ್ಮಣ ಸವದಿ…!!!

ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ಕೊಟ್ಟ ಡಿಸಿಎಂ ಲಕ್ಷ್ಮಣ ಸವದಿ…!!!

- Advertisement -



Renault

Renault
Renault

- Advertisement -

ಬೆಂಗಳೂರು: ನಾಳೆ (ಫೆ.10) ಸಾರಿಗೆ ನೌಕರರು ಪ್ರತಿಭಟನೆ ಮಾಡುವ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ವಿಧಾನಸೌಧದಲ್ಲಿ ಹೇಳಿದ್ದಾರೆ. ಸಾರಿಗೆ ನೌಕರರ ಉದ್ದೇಶಿತ ಮುಷ್ಕರದ ಕುರಿತು ಮಾಧ್ಯಮಗಳೊಂದಿಗೆ ಡಿಸಿಎಂ ಸವದಿ ಮಾತನಾಡಿದ್ದಾರೆ.

ಸಾರಿಗೆ ನೌಕರರು ಇಟ್ಟಿದ್ದ ಒಂಭತ್ತು ಬೇಡಿಕೆಗಳಲ್ಲಿ ಈಗಾಗಲೇ ನಾಲ್ಕನ್ನು ಈಡೇರಿಸಿದ್ದೇವೆ. ಉಳಿದ ಬೇಡಿಕೆಗಳನ್ನೂ ಈಡೇರಿಸುತ್ತೇವೆ. ಸಾರಿಗೆ ನೌಕರರ ಮುಖಂಡರೊಂದಿಗೆ ಐದು ಸಭೆಗಳನ್ನು ಮಾಡಿದ್ದೇವೆ. ಆದರೆ ಇಲಾಖೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಇಂಧನದ ಬೆಲೆ ಏರಿಕೆ ಹಾಗೂ ಬಿಎಂಟಿಸಿ ಆಧಾಯದಲ್ಲಿ ತೀವ್ರ ಕೊರತೆ ಉಂಟಾಗಿದೆ. ಹೀಗಾಗಿ ಇಲಾಖೆ ಆರ್ಥಿಕ ಸಂಕಷ್ಟದಲ್ಲಿದೆ. ಅದರಿಂದಾಗಿ ತಾತ್ಕಾಲಿಕವಾಗಿ ಸ್ವಲ್ಪ ತೊಂದರೆಯಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.

ನಾಳೆ ಸಾರಿಗೆ ನೌಕರರು ಮುಷ್ಕರ ಮಾಡಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು ಮಹತ್ವ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಇಲಾಖೆಯ ಹಲವು ಸಂಕಷ್ಟಗಳ ಕುರಿತು ಲಕ್ಷ್ಮಣ ಸವದಿ ಅವರು ಮಾಹಿತಿ ನೀಡಿದ್ದಾರೆ. ಮತ್ತೊಂದು ಸಿಹಿಸುದ್ದಿಯನ್ನೂ ಸಾರಿಗೆ ನೌಕರರಿಗೆ ಸಚಿವ ಸವದಿ ಕೊಟ್ಟಿದ್ದಾರೆ.

ವೇತನ ಪಾವತಿ ಮಾಡಿದ್ದೇವೆ

ಇಷ್ಟೆಲ್ಲ ತೊಂದರೆಗಳಿದ್ದರೂ ಇಲಾಖೆ ನೌಕರರ ವೇತನವನ್ನು ಕೊಟ್ಟಿದ್ದೇವೆ. ಆದರೆ ಡಿಸೆಂಬರ್ ತಿಂಗಳ ವೇತನ ಕೊಡುವುದರಲ್ಲಿ ತೊದರೆ ಆಗಿದೆ. ಜೊತೆಗೆ ಜನವರಿ ತಿಂಗಳಿನ ಅರ್ಧ ವೇತನವನ್ನು ಕೊಟ್ಟಿದ್ದೇವೆ. ಬಸ್‌ಗಳ ಸಂಚಾರದಿಂದ ಬರುವ ಆದಾಯ ಅಲ್ಲಿಗೆ ಸರಿ ಹೋಗುತ್ತಿದೆ. ಆದರೂ ನಾನು ಮಾಧ್ಯಮಗಳ ಮೂಲಕ ಭರವಸೆ ಕೊಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದೇ ಕೊರೆತೆ ಆಗದಂತೆ ನೋಡಿಕೊಳ್ಳುತ್ತೇವೆ. ನಾಳೆ ಪ್ರತಿಭಟನೆ ಕುರಿತು ನಾನೇನು ಹೇಳುವುದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇನ್ನೆರಡು ದಿನಗಳಲ್ಲಿ ಸಂಬಳ ಪಾವತಿ

ಡಿಸೆಂಬರ್ ತಿಂಗಳಿನ ಸಂಬಳವನ್ನು ಇನ್ನೆರಡು ದಿನಗಳಲ್ಲಿ ಹಾಕುತ್ತೇವೆ. ಬಾಕಿ ಉಳಿಸಿಕೊಂಡಿರುವ ಜನವರಿ ತಿಂಗಳಿನ ಅರ್ಧ ಸಂಬಳವನ್ನೂ ಮುಂದಿನ 15 ದಿನಗಳೊಳಗೆ ಹಾಕುತ್ತೇವೆ. ಆದಾಯ ಇಂಧನ ಮತ್ತು ಸಂಬಳಕ್ಕೆ ಸರಿಯಾಗಿತ್ತಿದೆ. ಹೀಗಾಗಿ ಸಂಬಳ ಕೊಡಲು ಕೊರತೆಯಾಗಿದೆ. ಆಸ್ತಿ ಅಡಮಾನ ಇಡಲು ಹಣಕಾಸು ಇಲಾಖೆ ಒಪ್ಪಿಕೊಂಡಿದೆ. ಎರಡು ದಿನದಲ್ಲಿ ಸಾಲ ಪಡೆಯುತ್ತೇವೆ. ಯಾವುದೆ ಅಡ್ಡಿ ಆತಂಕ ಇಲ್ಲದೆ ನಿಮ್ಮ ಸಂಬಳ ಕೊಡುವ ಕೆಲಸ ಮಾಡುತ್ತೇವೆ ಎಂದು ಸಾರಿಗೆ ನೌಕರರಿಗೆ ಸವದಿ ಭರವಸೆ ನೀಡಿದ್ದಾರೆ.

ಸಿಹಿ ಸುದ್ದಿಕೊಟ್ಟ ಸವದಿ

ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸಾರಿಗೆ ಇಲಾಖೆ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಈಗಾಗಲೇ 5 ಸಭೆಗಳನ್ನು ಮಾಡಿ ನಾಲ್ಕು ಭರವಸೆಗಳನ್ನು ಈಡೇರಿಸಿದ್ದೇವೆ. ಜೊತೆಗೆ ಮುಂದಿನ ಹದಿನೈದು ದಿನಗಳಲ್ಲಿ ಆರನೇ ಸಭೆ ಮಾಡುವ ಮೂಲಕ ವೇತನ ಪರಿಷ್ಕರಣೆ ಕುರಿತು ಚರ್ಚೆ ಮಾಡುತ್ತೇವೆ. ನೌಕರರಲ್ಲಿ ಯಾವುದೇ ಅಪನಂಬಿಕೆ ಬೇಡ ಎಂದು ಹೇಳುವ ಮೂಲಕ ಸಾರಿಗೆ ನೌಕರರ ವೇತನ ಹೆಚ್ಚಿಸುವ ಭರವಸೆಯನ್ನು ಲಕ್ಷ್ಮಣ ಸವದಿ ಕೊಟ್ಟಿದ್ದಾರೆ.

ಬಸ್ ಖರೀದಿ ವಿಚಾರ

ಇನ್ನು ಹೊಸ ಬಸ್‌ಗಳ ಖರೀದಿ ವಿಚಾರ ಕುರಿತು ಮಾತನಾಡಿರುವ ಲಕ್ಷ್ಮಣ ಸವದಿ ಅವರು, ಆರ್ಥಿಕ ಸಂಕಷ್ಟದ ಸಮಯದಲ್ಲಿ ನಾವು ಯಾವುದೇ ಬಸ್ ಖರೀದಿ ಮಾಡುತ್ತಿಲ್ಲ. ಬೇರೆ ಬೇರೆ ಕಂಪನಿಗಳು ಬಸ್‌ಗಳನ್ನು ನೀಡಲಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದೆ. ಹೊರ ಗುತ್ತಿಗೆ ಮೇಲೆ ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದೆ ಎಂದಿದ್ದಾರೆ.

ಜೊತೆಗೆ ನಾಳೆ ಯಾವುದೇ ಬಸ್‌ಗಳು ನಿಲ್ಲುವುದಿಲ್ಲ ಎಂದು ಪ್ರಯಾಣಿಕರಿಗೆ ಸವದಿ ಭರವಸೆ ನೀಡಿದ್ದಾರೆ. ಸಾರ್ವಜನಿಕರು ಎಂದಿನಂತೆ ಸಂಚಾರ ಮಾಡಬಹುದು ಎಂದಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments