ಮಂಗಳೂರು : ಭಾರತದ ಅತ್ಯಂತ ದೊಡ್ಡ ಇವಿ ದ್ವಿಚಕ್ರ ವಾಹನ ಕಂಪನಿ ಹೀರೋ ಎಲೆಕ್ಟ್ರಿಕ್ ವ್ಹೀಲ್ಸ್ ಇಎಂಐ ಜತೆಯಲ್ಲಿ ಸಹಯೋಗವನ್ನು ಪ್ರಕಟಿಸಿದ್ದು, ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಕೊಳ್ಳುವವರಿಗೆ ಸುಲಭ ಹಣಕಾಸು ಆಯ್ಕೆಯನ್ನು ನೀಡುತ್ತದೆ.
ಹೀರೋ ಎಲೆಕ್ಟ್ರಿಕ್ ಪ್ರಸ್ತುತ ಪ್ರತಿ ತಿಂಗಳೂ 10,000ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಮಾರಾಟ ಮಾಡುತ್ತಿದ್ದು ಶೇ.40ರಷ್ಟು ಗ್ರಾಮೀಣ ಪ್ರದೇಶಗಳಿಂದ ಲಭ್ಯವಾಗುತ್ತಿದೆ. ಈ ಸಹಯೋಗದಿಂದ ಕಂಪನಿಯು ಮಾರಾಟ ಹೆಚ್ಚಿಸುವ ನಿರೀಕ್ಷೆ ಹೊಂದಿದೆ ಹಾಗೂ 2021ರ ವೇಳೆಗೆ ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಮಾರಾಟದ ಗುರಿ ಹೊಂದಿದೆ ಎಂದು ಹೀರೋ ಎಲೆಕ್ಟ್ರಿಕ್‍ನ ಸೊಹಿಂದರ್ ಗಿಲ್, ಮತ್ತು ಸಂಸ್ಥಾಪಕ ಮತ್ತು ಜೆಎಂಡಿ ಕರುಣಾಕರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.