Tuesday, September 28, 2021
Homeರಾಜಕೀಯನಾನು ಕೂಡಾ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ : ಈಶ್ವರಪ್ಪ

ನಾನು ಕೂಡಾ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ : ಈಶ್ವರಪ್ಪ

- Advertisement -
Renault
- Advertisement -
Home Plus
- Advertisement -

ಈಶ್ವರಪ್ಪನವರು ನಿನ್ನೆ ಬಸವರಾಜ ಬೊಮ್ಮಾಯಿ ಮಂತ್ರಿ ಸ್ಥಾನದ ಬಗ್ಗೆ ಅಚ್ಚರಿ ಹೇಳಿಕೆ ನೀಡಲಿದ್ದಾರೆ ಎಂಬುದರ ಬಗ್ಗೆ ಹಬ್ಬಿದ್ದ ಗಾಳಿಸುದ್ದಿಗಳಿಗೆ ತೆರೆ ಬಿದ್ದಿದೆ. ನಾನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿ ಎಂದು ಈಶ್ವರಪ್ಪ ಇಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವು ಮಾಧ್ಯಮಗಳು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಬಿಂಬಿಸಿದ್ದಾರೆ ಆದರೆ ಹಾಗೇನಿಲ್ಲವಾಗಿದೆ. ನನಗೆ ಉಪಮುಖ್ಯಮಂತ್ರಿ ಸ್ಥಾನ ದೊರೆತರೆ ಸಂತೋಷದಿಂದ ಸ್ವೀಕರಿಸುತ್ತೇನೆ. ಆದರೆ ಎಲ್ಲದಕ್ಕಿಂತ ಮುಖ್ಯವಾದುದೆಂದರೆ ಪಕ್ಷ ಏನು ಹೇಳುತ್ತದೆಯೋ, ಹಾಗೆ ಕೇಳುವೆ ಎಂದು ಶಾಸಕ ಈಶ್ವರಪ್ಪ ಹೇಳಿದ್ದಾರೆ.

ನಮ್ಮಸಂಘಟನೆ ಕಾರ್ಯಕರ್ತರು ಬರುವ ಎರಡು ವರ್ಷ ಶಕ್ತಿ ಮೀರಿ ಪರಿಶ್ರಮಿಸಿ ಬಿಜೆಪಿ ಮುಂದಿನ‌ ವಿಧಾನ ಸಭಾ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚಿಸುವ ಗುರಿ ಹೊಂದಿದ್ದರೆ. ಸರ್ಕಾರವೂ ಸಹ ಮುಂದಿನ ಎರಡು ವರ್ಷದಲ್ಲಿ ಉತ್ತಮ ಆಡಳಿತ ನೀಡಿ ಪಕ್ಷವನ್ನ ಆಡಳಿತಕ್ಕೆ ತರಲಿದ್ದೇವೆ. ಬಿಎಸ್ ವೈ ಅವರ ನೇತೃತ್ವದಲ್ಲಿ ಬಿಜೆಪಿ ನಾಲ್ಕು ಬಾರಿ ಅಧಿಕಾರಕ್ಕೆ ಬಂದರೂ ಸಹ ಪೂರ್ಣ ಬಹುಮತ ಬಂದಿಲ್ಲ. ಆದರೆ ಮುಂದಿನ ಎರಡು ವರ್ಷ ಕಾರ್ಯಕರ್ತರ ಬೆಂಬಲದಿಂದ ಪೂರ್ಣ ಬಹುಮತ ಬರಲಿದೆ. ಮುಂದಿನ ಎರಡು ವರ್ಷ ಕಾರ್ಯಕರ್ತರಿಗೆ ಇದು ಸವಾಲಾಗಿದೆ. ಬಿಜೆಪಿ ಪಕ್ಷ ಪೂರ್ಣ ಬಹುಮತ ಬರುವವರೆಗೂ ಇದೇ ರೀತಿ ಕೃಷ್ಣನ ತಂತ್ರ ನಡೆಸಲಿದೆ. ಯಾವಾಗ ಪಕ್ಷ ಪೂರ್ಣ ಬಹುಮತ ಬರುತ್ತದೆಯೋ ಆಗ ರಾಮನಂತೆ ಪಕ್ಷ ಆಡಳಿತ ನಡೆಸಲಿದೆ. ಈಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಬಹುಮತ ಸಾಬೀತು ಪಡಿಸಲಿದ್ದೇವೆ. ಮೂಲದಿಂದ ಪಕ್ಷದಲ್ಲಿ ಬಂದ ಸಾವಿರಾರು ಜನರಲ್ಲಿ ನಾನು ಸಣ್ಣ ಬಿಂದುವಾಗಿದ್ದೇನೆ. ಸಿಎಂ ಸ್ಥಾನಕ್ಕೆ ನನಗಿಂತ ಹೆಚ್ಚಿನ ಅನುಭವ ಹಿರಿತನ ಇರುವವರು ಇದ್ದಾರೆ. ಬಿಎಸ್ ವೈ ಬಸವರಾಜ ಬೊಮ್ಮಾಯಿ ಯವರ ಹೆಸರು ಪ್ರಸ್ತಾಪಿಸಿದಾಗ ನನಗೆ ಅನುಮೋದಿಸುವ ಅವಕಾಶ ಸಿಕ್ಕಿತ್ತು. ನನಗೆ ವೈಯುಕ್ತಿಕವಾಗಿ ಡಿಸಿಎಂ ಆಗಬೇಕೆಂಬ ಹಂಬಲವಿಲ್ಲ. ಎಲ್ಲಾ ಸಮಾಜದ ಪ್ರಮುಖರು ಮತ್ತು ಸ್ವಾಮಿಗಳು ಉಪಮುಖ್ಯಮಂತ್ರಿ ಆಗಬಹುದು. ಜಗದೀಶ್ ಶೆಟ್ಟರ್ ಅವರು ಮಂತ್ರಿ ಸ್ಥಾನ ಬೇಡವೆಂದಿದ್ದಾರೆ. ಆದರೆ ನಾನು ಹಾಗೆ ಎಂದು ಹೇಳಲ್ಲ. ಪಕ್ಷ ಏನು ತೀರ್ಮಾನಿಸುತ್ತದೆ ಅದನ್ನ ಅಲಂಕರಿಸುತ್ತೇನೆ ಎಂದು ಹೇಳಿದರು.

ನಾಳೆ ಬೊಮ್ನಾಯಿ ದೆಹಲಿಗೆ ತೆರಳಲಿದ್ದು ಇನ್ನು ಒಂದು ವಾರದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಗೊಳ್ಳಲಿದೆ ಶಾಸಕ ಈಶ್ವರಪ್ಪ ಹೇಳಿದರು.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments