Tuesday, September 28, 2021
Homeಕರಾವಳಿಇಂದಿಗೂ ಸಾಂಪ್ರದಾಯಿಕ ಕೃಷಿಯ ಮೂಲಕ ಎಲ್ಲರ ಗಮನಸೆಳೆಯುವ ಅನಂತಾಡಿ ದಂಡೆತ್ತಿಮಾರ್ ಕಂಬಳದ ವಿಶೇಷತೆಗಳು.

ಇಂದಿಗೂ ಸಾಂಪ್ರದಾಯಿಕ ಕೃಷಿಯ ಮೂಲಕ ಎಲ್ಲರ ಗಮನಸೆಳೆಯುವ ಅನಂತಾಡಿ ದಂಡೆತ್ತಿಮಾರ್ ಕಂಬಳದ ವಿಶೇಷತೆಗಳು.

- Advertisement -
Renault
- Advertisement -
Home Plus
- Advertisement -

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಮಲರಾಯ ದೈವದ ದಂಡೆತ್ತಿಮಾರ ಕಂಬಳದಲ್ಲಿ ಭತ್ತದ ಕೃಷಿ ನೇಜಿ ನೆಡುವ ಕಾಯಕ ನೋಡುಗನ ಕಣ್ಣಿಗೆ ಹಬ್ಬವಿದ್ದಂತೆ. ಏಣೇಲ್ ಮತ್ತು ಸುಗ್ಗಿ ಬೆಳೆಗಳನ್ನು ಇಲ್ಲಿ ಮಾಡಲಾಗುತ್ತಿದ್ದು ಸುಮಾರು 70ಕ್ಕೂ ಹೆಚ್ಚು ಜನರು ನೇಜಿ ನೆಡುವ ದೃಶ್ಯವನ್ನು ಇಂದಿನ ದಿನಗಳಲ್ಲಿ ಕಾಣಬಹುದು.

ಈ ಕಂಬಳದ ವಿಶೇಷತೆ ಏನೆಂದರೆ ಮಲರಾಯ ದೈವದ ದಂಡೆತ್ತಿಮಾರ ಕಂಬಳಕ್ಕೆ ನೇಲ್ಯ ಇಲ್ಲ್ ದೊಡ್ಡಮನೆಯಲ್ಲಿ ಪ್ರತಿ ವರ್ಷ ಪೂಕರೆ ಹಾಕಿ ಅನ್ನ ಸಂತರ್ಪಣೆ ನಡೆದು ಮಲರಾಯ ಪಿಲಿಚಂಡಿ ದೈವಗಳಿಗೆ ನೇಮ ನಡೆಯುವುದು ರೂಡಿ.ಹಿಂದಿನ ಕಾಲದಿಂದಲೂ 12ವರ್ಷಕೊಮ್ಮೆ ಜರಗುವ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಧರ್ಮ ಮೆಚ್ಚಿಯ ಸಂದರ್ಭದಲ್ಲಿ ಇಲ್ಲಿ ವೀಶೇಷವಾಗಿ ಹೊಸದಾಗಿ ಬಾವಿ ನಿರ್ಮಿಸಿ ಅದರ
ಅದರ ನೀರನಲ್ಲೇ ಅಡುಗೆ ತಯಾರಿಸಿ
ಭಕ್ತಾದಿಗಳು ದಂಡೆತ್ತಿಮಾರ ಕಂಬಳದಲ್ಲಿ ಹಾಕಿದ ದಂಡೆಯ ಪಂಕ್ತಿಯಲ್ಲಿ ಅನ್ನ ಪ್ರಸಾದ ಸ್ವೀಕರಿಸಿದರೆ ಶ್ರೀ ಉಳ್ಳಾಲ್ತಿ ಅಮ್ಮನವರ ಧರ್ಮ ಸಂತೃಪ್ತಿ ಗೊಂಡು ಮೆಚ್ಚಿಯಲ್ಲಿ ಭಾಗವಹಿಸಿದ ಭಕ್ತರ ಪಾಲಿಗೆ ಧನ್ಯತೆ ಎಂದು ಇಲ್ಲಿಯ ನಂಬಿಕೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments