Monday, October 2, 2023
Homeಕರಾವಳಿಬಿಟ್ ಕಾಯಿನ್ ಮೋಸ ಜಾಲ: ಮಂಗಳೂರು ಮುಂಬೈ ಲಿಂಕ್!

ಬಿಟ್ ಕಾಯಿನ್ ಮೋಸ ಜಾಲ: ಮಂಗಳೂರು ಮುಂಬೈ ಲಿಂಕ್!

- Advertisement -Renault

Renault
Renault

- Advertisement -

ಮಂಗಳೂರು, ಫೆ.14: ಬಿಟ್ ಕಾಯಿನ್ ಹೆಸರಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ವೇಳೆ ಬಿಟ್ ಕಾಯಿನ್ ಹೆಸರಲ್ಲಿ ಮೋಸದ ಜಾಲ ಸಕ್ರಿಯವಾಗಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ.

ಬಂಟ್ವಾಳದ ಅಮ್ಮುಂಜೆ ನಿವಾಸಿ ಅಬ್ದುಲ್ ಲತೀಫ್ (34) ಎಂಬಾತ ಬಂಧಿತ ಯುವಕ. ಈತ ಬಿಟ್ ಕಾಯಿನ್ ಕ್ರಿಪ್ಟೊ ಎನ್ನುವ ಕಂಪೆನಿಯಲ್ಲಿ ಮಾರ್ಕೆಟಿಂಗ್ ಪ್ರತಿನಿಧಿಯೆಂದು ಹೇಳಿಕೊಂಡು ಹಲವರಿಂದ ಹಣ ಸಂಗ್ರಹಿಸಿದ್ದು, ವಂಚನೆ ಎಸಗಿದ್ದಾನೆ. ಈ ಬಗ್ಗೆ ಮಂಗಳೂರಿನ ಡಿಸಿಪಿ ದರ್ಜೆಯ ಅಧಿಕಾರಿಗೆ ಹಣ ಕಳಕೊಂಡವರು ದೂರು ಹೇಳಿಕೊಂಡು ಬಂದಿದ್ದು ಅವರ ಸೂಚನೆಯಂತೆ ನಾರ್ಕೋಟಿಕ್ ಕ್ರೈಮ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಕಾವೂರಿನ ವ್ಯಕ್ತಿಯೊಬ್ಬರು 40 ಲಕ್ಷ ಕಳಕೊಂಡಿರುವ ಬಗ್ಗೆ ದೂರು ಹೇಳಿಕೊಂಡಿದ್ದಾರೆ. ಅಬ್ದುಲ್ ಲತೀಫ್ ಸೂಚನೆಯಂತೆ ಹಣ ಹಾಕಿದ್ದಾಗಿ ಮಾಹಿತಿ ನೀಡಿದ್ದರು. ಲತೀಫ್ ವಿಚಾರಣೆಯ ವೇಳೆ ಸೂಕ್ತ ಮಾಹಿತಿ ನೀಡದ ಕಾರಣ ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಬಿಟ್ ಕಾಯಿನ್ ಕ್ರಿಪ್ಟೋ ಎನ್ನುವ ಹೆಸರಿನಲ್ಲಿ ಅಬ್ದುಲ್ ಲತೀಫ್ ವಾಲೆಟ್ ಹೊಂದಿದ್ದು, ಅದರಲ್ಲಿ ಹಣ ಹೂಡಿದರೆ ಡಬಲ್ ಆಗುತ್ತೆ ಎಂದು ಹಣ ಇದ್ದವರನ್ನು ನಂಬಿಸುತ್ತಿದ್ದ. ಬ್ಲಾಕ್ ಮನಿ ಇದ್ದವರು ಈತನ ಮಾತು ನಂಬಿ ಬಿಟ್ ಕಾಯಿನ್ ಹೆಸರಲ್ಲಿ ಹಣ ಹೂಡಿಕೆ ಮಾಡಿದ್ದರು. ಆದರೆ, ಹಣ ಹೂಡಿಕೆ ಮಾಡಿದವರಿಗೂ ಹಣ ಹೇಗೆ ರಿಟರ್ನ್ ಬರುತ್ತದೆ ಎನ್ನುವ ಮಾಹಿತಿ ಇರಲಿಲ್ಲ.

ಇನ್ನೊಬ್ಬ ಫರಂಗಿಪೇಟೆಯ ವ್ಯಕ್ತಿಯೊಬ್ಬರು ಕೂಡ, ಡಿಸಿಪಿಯವರಿಗೆ ದೂರು ಹೇಳಿಕೊಂಡು ಬಂದಿದ್ದರು. ಕಳೆದ ಎರಡು ವರ್ಷಗಳಿಂದ ಈ ರೀತಿಯ ದೂರುಗಳು ಬರುತ್ತಿದ್ದು, ಈಗ ಡಿಸಿಪಿ ಹರಿರಾಮ್ ಶಂಕರ್ ಮುತುವರ್ಜಿಯಿಂದ ಪ್ರಕರಣದಲ್ಲಿ ತನಿಖೆ ನಡೆದು ಒಬ್ಬನ ಬಂಧನ ಆಗಿದೆ ಎನ್ನಲಾಗುತ್ತಿದೆ. ಆದರೆ, ತನಿಖೆಯಲ್ಲಿ ಇನ್ನೂ ಕೂಡ ಪೂರ್ತಿ ವಿವರ ಲಭ್ಯವಾಗಿಲ್ಲ. ಅಬ್ದುಲ್ ಲತೀಫ್ ಇದ್ದ ಕಂಪನಿ ನಕಲಿಯೇ ಅಥವಾ ಕಂಪನಿ ಹೆಸರಲ್ಲಿ ಹಣ ಹೂಡಿಕೆ ಮಾಡಿಸಿ ಆತ ಈ ಹಣವನ್ನು ಬೇರೆ ಕಡೆಗೆ ಹೂಡಿಕೆ ಮಾಡುತ್ತಿದ್ದನೇ ಎಂಬ ಬಗ್ಗೆ ವಿವರ ಸಿಕ್ಕಿಲ್ಲ. ವಿಚಾರಣೆ ವೇಳೆ ಮುಂಬೈ ಲಿಂಕ್ ಬಗ್ಗೆಯೂ ಲತೀಫ್ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಹೀಗಾಗಿ ಆರೋಪಿಯ ಹಿಂದೆ ಇನ್ನಷ್ಟು ಕೈಗಳು ಇರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಣ ಕಳಕೊಂಡವರ ಹೆಸರಲ್ಲಿ ವ್ಯಾಲೆಟ್ ಓಪನ್ ಮಾಡಲಾಗಿತ್ತು. ಆದರೆ, ಈಗ ಅದನ್ನು ಓಪನ್ ಮಾಡಿದರೆ ವೆಬ್ ಓಪನ್ ಆಗುತ್ತಿಲ್ಲ ಎಂದು ಹಣ ಹೂಡಿಕೆ ಮಾಡಿದವರು ಆತಂಕಗೊಂಡಿದ್ದಾರೆ. ಈ ಬಗ್ಗೆ ಡಿಸಿಪಿ ಹರಿರಾಮ್ ಶಂಕರ್ ಬಳಿ ಕೇಳಿದರೆ, ಈ ಜಾಲದಲ್ಲಿ ಎಷ್ಟು ಮಂದಿ ಇದ್ದಾರೆ ಎನ್ನುವುದರ ಬಗ್ಗೆ ಈಗಲೇ ಹೇಳುವಂತಿಲ್ಲ. ತನಿಖೆ ನಡೆಸಬೇಕಷ್ಟೆ. ಈತನ ಹಿಂದೆ ದೊಡ್ಡ ಜಾಲ ಇರುವ ಬಗ್ಗೆ ಶಂಕೆಯಿದೆ ಎಂದು ಹೇಳಿದ್ದಾರೆ.

ಬಿಟ್ ಕಾಯಿನ್ ವ್ಯವಹಾರಕ್ಕೆ ಮಾನ್ಯತೆ ಇಲ್ಲ !

ಬಿಟ್ ಕಾಯಿನ್ ವ್ಯವಹಾರ ನಡೆಸುವುದಕ್ಕೆ ಭಾರತದಲ್ಲಿ ಮಾನ್ಯತೆ ಇಲ್ಲ. ಆದರೆ, ವಿದೇಶದಲ್ಲಿ ಚಾಲ್ತಿಯಲ್ಲಿರುವ ಬಿಟ್ ಕಾಯಿನ್ ಕರೆನ್ಸಿಗೆ ಹೂಡಿಕೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಅದರಲ್ಲಿ ಯಾವುದೇ ನಷ್ಟಗಳಿಗೆ ಭಾರತ ಸರಕಾರವಾಗಲೀ, ಆರ್ ಬಿಐ ಆಗಲೀ ಹೊಣೆಯಾಗಲ್ಲ. ಯಾಕಂದ್ರೆ, ಈ ರೀತಿಯ ವ್ಯವಹಾರಕ್ಕೆ ಸರಕಾರ ಅಧಿಕೃತ ಮಾನ್ಯತೆ ನೀಡಿಲ್ಲ.

ನಕಲಿ ಕಂಪನಿ ಹೆಸರಲ್ಲಿ ಹೂಡಿಕೆ

ಆಫ್ರಿಕದ ಕೆಲವು ದೇಶಗಳು, ಯುರೋಪ್ ರಾಷ್ಟ್ರಗಳು, ಕೆನಡಾದಲ್ಲಿ ಬಿಟ್ ಕಾಯಿನ್ ವ್ಯವಹಾರಕ್ಕೆ ಅಧಿಕೃತ ಮಾನ್ಯತೆ ಇದ್ದು, ಈ ಕಾರಣದಿಂದ ವಿದೇಶದಲ್ಲಿ ಬಿಟ್ ಕಾಯಿನ್ ಕರೆನ್ಸಿ ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಭಾರತದಲ್ಲಿ ಇನ್ನೂ ಬಿಟ್ ಕಾಯಿನ್ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಲ್ಲ. ಅಲ್ಲದೆ, ಸರಕಾರವೂ ನಿರಾಸಕ್ತಿ ತೋರಿದ್ದರಿಂದ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. ಹೀಗಿದ್ದರೂ, ಕೆಲವರು ಬಿಟ್ ಕಾಯಿನ್ ಬಗ್ಗೆ ನಕಲಿ ವ್ಯವಹಾರ ನಡೆಸುತ್ತಾರೆ. ಇನ್ನು ಕೆಲವರು ವಿದೇಶದ ಬಿಟ್ ಕಾಯಿನ್ ವ್ಯವಹಾರದಲ್ಲಿ ಹೂಡಿಕೆ ಮಾಡುವಂತೆ ಹಣ ಇದ್ದವರನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ನೈಜ ಮಾಹಿತಿ ತಿಳಿಯದೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿ, ವಂಚನೆಗೊಳಗಾದವರು ಹಣ ಕಳಕೊಂಡ ಬಳಿಕ ದೂರು ಹೇಳಿಕೊಂಡು ಬರುತ್ತಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments