Monday, January 17, 2022
Homeಕೃಷಿರೈತರ ಪರ ಹೋರಾಟಕ್ಕೆ ಮಾರ್ಚ್ 26 ರಂದು ಭಾರತ ಬಂದ್

ರೈತರ ಪರ ಹೋರಾಟಕ್ಕೆ ಮಾರ್ಚ್ 26 ರಂದು ಭಾರತ ಬಂದ್

- Advertisement -
Renault


- Advertisement -

ದಿಲ್ಲಿ:  ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು  ವಾಪಸ್‌ ಪಡಡೆಯಲು ಆಗ್ರಹಿಸಿ  ಕಳೆದ ಮೂರು ತಿಂಗಳಿಂದ  ದಿಲ್ಲಿಯ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ಲಕ್ಷಾಂತರ ರೈತರು ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಮಾರ್ಚ್ 26 ರಂದು ಸಂಪೂರ್ಣ ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ.

ಅಖಿಲ ಭಾರತ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಸೇರಿದಂತೆ ಇತರ  ಸಂಘಟನೆಗಳ ಬೆಂಬಲವನ್ನು ರೈತ ಸಂಘಟನೆಗಳು ಕೋರಿವೆ.ಕನಿಷ್ಟ ಬೆಂಬಲೆ ಬೆಲೆ ನಿಗದಿಗೊಳಿಸುವಂತೆ ಮತ್ತು 3 ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ರೈತರು ಒತ್ತಾಯಿಸುತ್ತಿದ್ದಾರೆ.

ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಫಲಪ್ರದವಾಗಿಲ್ಲ. ಜ. 26 ರಂದು  ರೈತರು ಟ್ರ್ಯಾಕ್ಟರ್‌ ಮೆರವಣಿಗೆ  ಆಯೋಜಿಸಿದ್ದಾಗ ನಡೆದ ಕೆಲವು ಅಹಿತಕರ ಘಟನೆಗಳಿಂದ ಹೋರಾಟಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು. ಬಳಿಕ ರೈತ ಮುಖಂಡ ರಾಕೇಶ್ ಟಿಕಾಯತ್  ರೈತರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಉತ್ತರ ಭಾರತದಾದ್ಯಂತ ಪ್ರತಿ ಹಳ್ಳಿಗಳಲ್ಲೂ ಮಹಾ ಪಂಚಾಯತ್‌ ನಡೆದು ಲಕ್ಷಾಂತರ ರೈತ ಬೆಂಬಲಿಗರು ಒಗ್ಗಟ್ಟಾಗಿದ್ದಾರೆ. ಅಂದಿನಿಂದ ರೈತ ಹೋರಾಟ ಮತ್ತಷ್ಟು ಚುರುಕು ಪಡೆದುಕೊಂಡಿದೆ.

ರೈತರ ಈ ಹೋರಾಟವನ್ನು ಹತ್ತಿಕ್ಕಲು ಆರಂಭದಿದಂದಲೂ ಸರ್ಕಾರ ನಾನಾ ಕ್ರಮಗಳನ್ನು ಕೈಗೊಂಡಿತ್ತು, ಹೋರಾಟ ಮಾಡುತ್ತಿರುವವರು ರೈತರಲ್ಲ ಉಗ್ರರು ಎಂಬ ಅಪಪ್ರಚಾರ ಕೂಡ ನಡೆದಿತ್ತು. ಪ್ರತಿಭಟನಾನಿರತರ ಮೇಲೆ  ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಲಾಗಿತ್ತು., ಬ್ಯಾರಿಕೇಡ್‌ ಹಾಕಿ ರಸ್ತೆಗಳನ್ನು ಬಂದ್‌ ಮಾಡಲಾಗಿತ್ತು. ಕೊನೆಗೆ ರಸ್ತೆಗಳಲಲಿ ಮೊಳೆಗಳನ್ನು ನೆಟ್ಟು ಕೂಡ ಸರ್ಕಾರ ಪ್ರತಿಭಟನೆಯನ್ನು ದಮನಗೊಳಿಸುವ ಪ್ರಯತ್ನ ನಡೆಸಿತ್ತು, ಆದರೆ ಇದ್ಯಾವುದಕ್ಕೂ ಹೆದರದೆ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಹೋರಾಟದ ಅವವಧಿಯಲ್ಲಿ ನೂರಕ್ಕೂ ಹೆಚ್ಚು ರೈತರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ.

- Advertisement -Home Plus


LEAVE A REPLY

Please enter your comment!
Please enter your name here

- Advertisment -

Most Popular

Recent Comments