ಬೆಂಗಳೂರು: ಗಣ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಾಳೆ ರೈತರು ರಾಜ್ಯದಲ್ಲೂ ಪ್ರತಿಭಟನಾರ್ಥ ಟ್ರಾಕ್ಟರ್ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕ ರೈತರ ಐಕ್ಯ ಸಂಘಟನೆಗಳು ಈ ಮೆರವಣಿಗೆಗೆ ಕರೆ ನೀಡಿದ್ದು, 2-3 ಸಾವಿರ ಟ್ರ್ಯಾಕ್ಟರ್ ಗಳು ಜೊತೆಗೆ ಇತರ ವಾಹನಗಳು ಫ್ರೀಡಂ ಪಾರ್ಕ್ ಕಡೆಗೆ ಧಾವಿಸಲಿವೆ.
ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜೊತೆಗೆ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಅದಕ್ಕೆ ಬೆಂಬಲ ಸೂಚಿಸಿ ರಾಜ್ಯದಲ್ಲಿಯೂ ಮೆರವಣಿಗೆ ನಡೆಯಲಿದೆ.
ಬಹುತೇಕ ವಿರೋಧ ಪಕ್ಷಗಳು ಈ ಮೊದಲೇ ಈ ಬಾರಿ ರೈತರ ಗಣರಾಜ್ಯೋತ್ಸವ ಆಚರಣೆಗೆ ಕರೆ ಕೊಟ್ಟಿದ್ದವು.
ಟ್ರ್ಯಾಕ್ಟರ್ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಬಂದೋಬಸ್ತ್ ಬಗ್ಗೆ ಸಿದ್ಧತೆ ನಡೆಸಿದೆ. ಹಾಗೆಯೇ ಸಂಘಟನೆಗಳು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ತಿಳಿಸಿವೆ.