Saturday, June 3, 2023
HomeUncategorizedಮನೆಯಿಂದ ಹೊರ ಹಾಕಿದ್ದಕ್ಕೆ ಆಸ್ತಿ ವಾಪಾಸ್ ಪಡೆದರು!

ಮನೆಯಿಂದ ಹೊರ ಹಾಕಿದ್ದಕ್ಕೆ ಆಸ್ತಿ ವಾಪಾಸ್ ಪಡೆದರು!

- Advertisement -


Renault

Renault
Renault

- Advertisement -

ಕೊಪ್ಪಳದ ಲೇಬಗೇರಿ ನಿವಾಸಿಯಾಗಿರುವ ನಿಂಗಪ್ಪ ಮಕ್ಕಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಮನೆಯಿಂದ ಹೊರದಬ್ಬಿದ್ದ ಮಕ್ಕಳಿಂದ ತಮ್ಮ ಆಸ್ತಿಯನ್ನು ಕಾನೂನು ಹೋರಾಟ ನಡೆಸಿ ವಾಪಸ್ ಪಡೆದುಕೊಂಡಿದ್ದಾರೆ.

ಕಲಾವಿದರಾಗಿರುವ ನಿಂಗಪ್ಪ 2000 ರೂ. ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರ ಹೆಸರಿನಲ್ಲಿದ್ದ ಆಸ್ತಿಯನ್ನ ಮಕ್ಕಳು ಅನುಭವಿಸುತ್ತಿದ್ದರು. ನಿಂಗಪ್ಪ ಹೆಸರಿನಲ್ಲಿದ್ದ 4.37 ಎಕರೆ ಜಮೀನು ಅನುಭವಿಸುತ್ತಿದ್ದ ಮಕ್ಕಳು ಬೇರೆಯವರಿಗೆ ಸಾಗುವಳಿಗೆ ಜಮೀನು ನೀಡಿದ್ದು ಅದರಿಂದ ಬಂದ ಆದಾಯವನ್ನು ಅವರೇ ತೆಗೆದುಕೊಳ್ಳುತ್ತಿದ್ದರು.

ನಿಂಗಪ್ಪರ ಔಷಧ ಖರ್ಚಿಗೆ, ಜೀವನಕ್ಕೆ ಹಣವಿರಲಿಲ್ಲ. ಮಕ್ಕಳು ಅವರನ್ನು ಮನೆಯಿಂದ ಹೊರ ಹಾಕಿದ್ದರು. ಇದರಿಂದಾಗಿ ಮಕ್ಕಳ ವಿರುದ್ಧ ನಿಂಗಪ್ಪ ಎಸಿ ಕೋರ್ಟ್ ಮೆಟ್ಟಿಲೇರಿದ್ದು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಅನ್ವಯ ನಿಂಗಪ್ಪರಿಗೆ ವಾಪಸ್ ಜಮೀನು ನೀಡಲಾಗಿದೆ.

ಜೀವನಾಂಶಕ್ಕೆ ಪ್ರತಿ ತಿಂಗಳು ತಂದೆಗೆ 8000 ರೂಪಾಯಿ ನೀಡಲು ಆದೇಶಿಸಲಾಗಿದೆ. ತಮ್ಮ ಜಮೀನು ವಾಪಸ್ ಪಡೆದುಕೊಂಡ ನಿಂಗಪ್ಪ ತಮ್ಮ ಜೀವನದ ಅಂತ್ಯಕಾಲದಲ್ಲಿ ತಮ್ಮನ್ನು ನೋಡಿಕೊಳ್ಳುವವವರಿಗೆ ಜಮೀನು ಕೊಡುವುದಾಗಿ ಹೇಳಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments