Monday, October 2, 2023
Homeಕರಾವಳಿಬಂಟ್ವಾಳ: ಆರ್‌ಟಿಒ ಕಚೇರಿಯ ಮುಂದೆ ಉಗ್ರ ಹೋರಾಟ- ಬಿ.ರಮಾನಾಥ ರೈ ಎಚ್ಚರಿಕೆ

ಬಂಟ್ವಾಳ: ಆರ್‌ಟಿಒ ಕಚೇರಿಯ ಮುಂದೆ ಉಗ್ರ ಹೋರಾಟ- ಬಿ.ರಮಾನಾಥ ರೈ ಎಚ್ಚರಿಕೆ

- Advertisement -



Renault

Renault
Renault

- Advertisement -

ಬಂಟ್ವಾಳ: ಬಿಜೆಪಿ ಸರಕಾರವು ರಿಫ್ಲೆಕ್ಟರ್ ಸ್ಟಿಕ್ಕರಿನ ಬೆಲೆಯನ್ನು ಸಾವಿರಾರು ರೂ.ಗಳಿಗೆ ಏರಿಸಿ ನಿಗದಿತ ಏಜೆನ್ಸಿಯವರಿಂದಲೇ ಹಾಕಿಸಿಕೊಳ್ಳಬೇಕು ಎಂಬ ಆದೇಶದ ಮೂಲಕ ಬಡ ವಾಹನದವರ ಹೊಟ್ಟೆಗೆ ಹೊಡೆದು ಹಗಲು ದರೋಡೆ ಮಾಡುತ್ತಿದ್ದು, ಇದನ್ನು ನಿಲ್ಲಿಸದೇ ಇದ್ದಲ್ಲಿ ಆರ್‌ಟಿಒ ಕಚೇರಿಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಎಚ್ಚರಿಸಿದರು.

ಅವರು ಮೆಲ್ಕಾರ್‌ನಲ್ಲಿರುವ ಆರ್‌ಟಿಒ ಕಚೇರಿಗೆ ಭೇಟಿ ನೀಡಿ ಸಾರಿಗೆ ವಾಹನಗಳ ರಿಪ್ಲೆಕ್ಟರ್ ಸ್ಟಿಕ್ಕರ್ ಕಡ್ಡಾಯದ ಕುರಿತು ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಸ್ಟಿಕ್ಕರ್ ಕೈ ಬಿಡಲು ಒತ್ತಾಯಿಸಿದರು. ಸ್ಟಿಕ್ಕರ್ ಹಾಕಿದ ಬಳಿಕ ಏಜೆನ್ಸಿಯವರೇ ಬಿಲ್ಲನ್ನು ನೀಡುತ್ತಿದ್ದು, ಇಲಾಖೆಗೂ ಅದಕ್ಕೂ ಸಂಬಂಧವೇ ಇಲ್ಲವಾಗಿದೆ. ಇದರಿಂದ ಏಜೆನ್ಸಿ ಲಾಭ ಪಡೆದು ಅದರ ಅಂಶವನ್ನು ಯಾರಿಗೋ ನೀಡಬೇಕಾದ ಪರಿಸ್ಥಿತಿ ಇದೆ. ನಾನು ಕೂಡ ಸಾರಿಗೆ ಮಂತ್ರಿಯಾಗಿ ಕೆಲಸ ಮಾಡಿದ್ದು, ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರೆ ಅದನ್ನು ಹೇಳಿದರೆ ಹೆಚ್ಚಾಗಬಹುದು.

ಈಗಾಗಲೇ ಬೆಲೆ ಏರಿಕೆಯಿಂದ ಬಡ ವಾಹನದವರು ಬೇಸತ್ತಿದ್ದು, ಹೀಗಾಗಿ ಈ ರೀತಿ ಸುಲಿಗೆಯನ್ನು ನಿಲ್ಲಿಸಬೇಕು. ಇದು ಮುಂದುವರಿದರೆ ಕಚೇರಿಯ ಮುಂದೆ ಪ್ರತಿಭಟನೆಯನ್ನೂ ಮಾಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬೇಬಿ ಕುಂದರ್, ಸುದೀಪ್‌ಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಅಬ್ಬಾಸ್ ಆಲಿ, ಪದ್ಮನಾಭ ರೈ, ಲೋಕೇಶ್ ಸುವರ್ಣ, ಮೋಹನ್ ಶೆಟ್ಟಿ ಮೊದಲಾದವರಿದ್ದರು.

- Advertisement -

1 COMMENT

  1. ಇಂತಹ ಸರಕಾರದ ಆಡಳಿತವನ್ನು ಬೆಂಬಲಿಸಿದರೆ ಜನಸಾಮಾನ್ಯರಿಗೆ ಖಂಡಿತವಾಗಿಯೂ ಕೇಡು ಕಾಲ ಬರಲಿದೆ ಮೊದಲು ಇಂಥ ಸರಕಾರಗಳನ್ನು ದೂರ ಇಡಬೇಕು

LEAVE A REPLY

Please enter your comment!
Please enter your name here

Most Popular

Recent Comments