ಕಲಬುರಗಿ : ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಾಗ್ತಿದೆ ಎಂಬ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆಗೆತ್ನಿಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಮೇಲೆ ಕಲಬುರಗಿ ರೌಡಿನಿಗ್ರಹ ದಳದ ಪಿಎಸ್‌ಐ ವಾಹಿದ್ ಕೊತ್ವಾಲ್ ಫೈರಿಂಗ್ ಮಾಡಿದ್ದಾರೆ.. ಕಲಬುರಗಿ ಹೊರವಲಯದ ಸ್ವಾಮಿ ಸಮರ್ಥ್ ಬಳಿ ಕಾರಿನಲ್ಲಿ ಮುಖ್ಯ ಆರೋಪಿ ಭೀಮು ಸೇರಿದಂತೆ ನಾಲ್ವರು 300 ಕೆಜಿಯಷ್ಟು ಗಾಂಜಾ ಕಾರಿನಲ್ಲಿ ಸಾಗಾಟ ಮಾಡ್ತಾಯಿದ್ದರು..
ಈ ವೇಳೆ ಪಿಎಸ್‌ಐ ವಾಹಿದ್ ಕೋತ್ವಾಲ್ & ಟಿಮ್ ಬಂಧಿಸಲು ಮುಂದಾಗಿದ್ದಾರೆ.. ಆದರೆ ಪೊಲೀಸರ ಮೇಲೆ ಆರೋಪಿ ಭೀಮು ಹಲ್ಲೆ ಮಾಡಿ ಎಸ್ಕೆಪ್ ಆಗಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪಿಎಸ್‌ಐ ವಾಹಿದ್ ಕೋತ್ವಾಲ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.. ಬಲಗಾಲಿಗೆ ಗುಂಡು ತಗುಲಿ ಕುಸಿದುಬಿದ್ದ ಆರೋಪಿಯನ್ನ ಬಂಧಿಸಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂರು ಜನರನ್ನ ಸಹ ವಶಕ್ಕೆ ಪಡೆಯಲಾಗಿದೆ..