Friday, May 14, 2021
HomeUncategorizedಆರು ಹೊಸ ನಗರಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸುರಕ್ಷಿತವಾಗಿ ಉತ್ಪನ್ನಗಳನ್ನು ತಲುಪಿಸುವ ಫ್ಲಿಪ್ ಕಾರ್ಟ್ ಕ್ವಿಕ್...

ಆರು ಹೊಸ ನಗರಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸುರಕ್ಷಿತವಾಗಿ ಉತ್ಪನ್ನಗಳನ್ನು ತಲುಪಿಸುವ ಫ್ಲಿಪ್ ಕಾರ್ಟ್ ಕ್ವಿಕ್ ಆರಂಭ

- Advertisement -
Rental
Rental
- Advertisement -Home Plus
- Advertisement -
Platform
Maya Builders

ದೆಹಲಿ, ಗುರುಗಾಂವ್, ಗಾಜಿಯಾಬಾದ್, ನೋಯ್ಡಾ, ಹೈದ್ರಾಬಾದ್ ಮತ್ತು ಪುಣೆಗಳಿಗೆ ಫ್ಲಿಪ್ ಕಾರ್ಟ್ ಕ್ವಿಕ್ ವಿಸ್ತರಣೆ
• ಗ್ರಾಹಕರು ಕೋವಿಡ್-19 ಅಗತ್ಯ ಉತ್ಪನ್ನಗಳನ್ನು ಆರ್ಡರ್ ಮಾಡಬಹುದು ತಾಜಾ ಹಣ್ಣುಗಳು ಮತ್ತು ತರಕಾರಿಗಳು. ಡೈರಿ ಉತ್ಪನ್ನಗಳು, ಮಾಂಸ, ದಿನಸಿ, ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಕ್ಕಳ ಆರೈಕೆ ಉತ್ಪನ್ನಗಳ ಪೂರೈಕೆ
• ಕೋಲ್ಕತ್ತಾ ಮತ್ತು ಮುಂಬೈ ಸೇರಿ ಹಲವು ನಗರಗಳಲ್ಲಿ ಹಂತಹಂತವಾಗಿ ಫ್ಲಿಪ್ ಕಾರ್ಟ್ ಕ್ವಿಕ್ ಸೇವೆ ಆರಂಭ

ಬೆಂಗಳೂರು, ಏಪ್ರಿಲ್ 20: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಹೈಪರ್ ಲೋಕಲ್ ಸೇವೆಯಾದ ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಹೊಸದಾಗಿ ಆರು ನಗರಗಳಾದ ದೆಹಲಿ, ಗುರುಗಾಂವ್, ಗಾಜಿಯಾಬಾದ್, ನೋಯ್ಡಾ, ಹೈದ್ರಾಬಾದ್ ಮತ್ತು ಪುಣೆಗಳಿಗೆ ವಿಸ್ತರಣೆ ಮಾಡಿದೆ. ಈ ಮೂಲಕ ಸುರಕ್ಷಿತ ಮತ್ತು ತಡೆರಹಿತವಾಗಿ ಅಗತ್ಯ ವಸ್ತುಗಳನ್ನು ತನ್ನ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ.
ಫ್ಲಿಪ್ ಕಾರ್ಟ್ ಈ ಹೈಪರ್ ಲೋಕಲ್ ಸೇವೆಯನ್ನು ಉಳಿದ ಮೆಟ್ರೋ ನಗರಗಳು ಮತ್ತು ನಗರಗಳಿಗೆ ಈ ವರ್ಷ ಹಂತಹಂತವಾಗಿ ವಿಸ್ತರಣೆ ಮಾಡುವ ಗುರಿಯನ್ನು ಹೊಂದಿದೆ.

2020 ರಲ್ಲಿ ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿತ್ತು. ಇದರ ಮೂಲಕ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ಅವರಿರುವ ಸ್ಥಳಗಳಿಗೆ ವಿಸ್ತಾರವಾದ ಉತ್ಪನ್ನಗಳ ಲಭ್ಯತೆ ಮತ್ತು ತ್ವರಿತ ವಿತರಣೆ ಸಾಧ್ಯವಾಗುತ್ತಿದೆ. ತಾಜಾ ಹಣ್ಣುಗಳು ಮತ್ತು ತರಕಾರಿಗಳು. ಡೈರಿ ಉತ್ಪನ್ನಗಳು, ಮಾಂಸ, ದಿನಸಿ, ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಕ್ಕಳ ಆರೈಕೆ ಉತ್ಪನ್ನಗಳು ಸೇರಿದಂತೆ 3000 ಕ್ಕೂ ಅಧಿಕ ಉತ್ಪನ್ನಗಳನ್ನು ಹೈಪರ್ ಲೋಕಲ್ ಡೆಲಿವರಿ ಸೇವೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

ಫ್ಲಿಪ್ ಕಾರ್ಟ್ ಕ್ವಿಕ್ ಕಂಪನಿಯ ನಿಂಜಾಕಾರ್ಟ್ ನಲ್ಲಿನ ಹೂಡಿಕೆ ಮತ್ತು ಇತರೆ ಸ್ಥಳೀಯ ಮಾರಾಟಗಾರರೊಂದಿಗೆ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಂದುವ ಮೂಲಕ ಗ್ರಾಹಕರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸುತ್ತಿದೆ. ಇದರಲ್ಲಿ ಪ್ರಮುಖವಾಗಿ ಗುಣಮಟ್ಟದ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ತಮ ಮೌಲ್ಯದೊಂದಿಗೆ ಪಡೆಯಲು ಅನುವು ಮಾಡಿಕೊಡುತ್ತಿದೆ. ಫ್ಲಿಪ್ ಕಾರ್ಟ್ ನ ಸ್ಟ್ರಾಟೆಜಿಕ್ ಲಾಜಿಸ್ಟಿಕ್ ಪಾಲುದಾರ ಸಂಸ್ಥೆಯಾಗಿರುವ ಶಾಡೋಫ್ಯಾಕ್ಸ್ ಫ್ಲಿಪ್ ಕಾರ್ಟ್ ಕ್ವಿಕ್ ಗಾಗಿ ಕಟ್ಟಕಡೆಯ ಗ್ರಾಹಕನಿಗೆ ಉತ್ಪನ್ನಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಫ್ಲಿಪ್ ಕಾರ್ಟ್ ನ ಉಪಾಧ್ಯಕ್ಷ ಸಂದೀಪ್ ಕಾರ್ವಾ ಅವರು ಮಾತನಾಡಿ, “ಹೈಪರ್ ಲೋಕಲ್ ಸಾಮರ್ಥ್ಯಗಳು ಗ್ರಾಹಕರಿಗೆ ಆನ್ ಲೈನ್ ಶಾಪಿಂಗ್ ಅನುಭವವನ್ನು ಹೆಚ್ಚಿಸಲಿವೆ. ಅಲ್ಲದೇ ಇ-ಕಾಮರ್ಸ್ ಕಂಪನಿಗಳಿಗೆ ಸಪ್ಲೈ ಚೇನ್ ಕಾರ್ಯಾಚರಣೆಗಳನ್ನು ಬಲವರ್ಧನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇಂತಹ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಗ್ರಾಹಕರಿಗೆ ವೇಗವಾಗಿ ವಿಶ್ವಾಸಾರ್ಹವಾದ ವಿತರಣೆಯ ವ್ಯವಸ್ಥೆಯ ಸಹಭಾಗಿತ್ವವನ್ನು ಅನ್ವೇಷಣೆ ಮಾಡುವುದು ಬಹುಮುಖ್ಯವಾಗಿದೆ. ಈ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಗ್ರಾಹಕ ಕೇಂದ್ರಿತ ಸಂಸ್ಥೆಯಾಗಿದೆ ಮತ್ತು ಗ್ರಾಹಕರಿಗೆ ಅನುಕೂಲವಾಗುವಂತಹ ಪರಿಹಾರಗಳನ್ನು ನೀಡಲು ಬದ್ಧವಾಗಿದೆ. ಈ ಬದ್ಧತೆ ಕೇವಲ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯದ ವಿತರಣೆ ನೀಡುವುದಷ್ಟೇ ಅಲ್ಲ. ಇದರ ಜತೆಗೆ ಸ್ಥಳೀಯ ರೈತರು ಮತ್ತು ಪೂರೈಕೆದಾರರಿಗೆ ಪ್ರೋತ್ಸಾಹ ನೀಡಲಿದೆ’’ ಎಂದರು.

ಕೃಷಿ ಪೂರೈಕೆಯ ಚೇನ್ ಅನ್ನು ನಿರ್ಮಾಣ ಮಾಡುವುದು ಫ್ಲಿಪ್ ಕಾರ್ಟ್ ನ ಮೊದಲ ಆದ್ಯತೆಯಾಗಿದೆ. ಇದು ಸಂಸ್ಥೆಗೆ ಆಧಾರಸ್ತಂಭವೂ ಆಗಿದೆ. ಕಂಪನಿಯ ತಾಜಾ ಉತ್ಪನ್ನಗಳ ಮೂಲವು ಮೌಲ್ಯವರ್ಧಿತ ಮಾರುಕಟ್ಟೆ ಸಂಪರ್ಕಗಳ ಮೂಲಕ ರೈತರ ಜೀವನೋಪಾಯ ಮತ್ತು ಸ್ಥಳೀಯ ಆಹಾರ ಸಂಸ್ಕರಣಾ ಉದ್ಯಮವನ್ನು ಹೆಚ್ಚಿಸುತ್ತದೆ. ಈ ಋತುವಿನಲ್ಲಿ ಫ್ಲಿಪ್ ಕಾರ್ಟ್ ಕ್ವಿಕ್ ತನ್ನ ಮೊದಲ ಹಂತದಲ್ಲಿ ರತ್ನಗಿರಿ ಅಲ್ಫೊನ್ಸೊ ಮಾವಿನಹಣ್ಣಿನ ಮಾರಾಟವನ್ನು ಬೆಂಗಳೂರಿನಲ್ಲಿ ಆರಂಭಿಸಿದೆ. ಈಗ ಈ ತಾಜಾ ಹಣ್ಣುಗಳನ್ನು ಆರು ನಗರಗಳ ಗ್ರಾಹಕರಿಗೆ ತಲುಪಿಸಲಿದೆ. ಈ ಮೂಲಕ ಗ್ರಾಹಕರು ಸ್ಥಳೀಯ ಸ್ವಾದದ ಹಣ್ಣುಗಳನ್ನು ಸವಿಯಲು ಸಾಧ್ಯವಾಗುತ್ತದೆ.

ಫ್ಲಿಪ್ ಕಾರ್ಟ್ ಕ್ವಿಕ್ ಗ್ರಾಹಕರು ಆನ್ ಲೈನ್ ನಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಆರ್ಡರ್ ಮಾಡಿದ 90 ನಿಮಿಷಗಳೊಳಗೆ ಅವುಗಳನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಅಲ್ಲದೇ, ಅವರ ಅನುಕೂಲಕ್ಕೆ ತಕ್ಕಂತೆ 2 ಗಂಟೆಯ ಅವಧಿಯಲ್ಲಿ ಆರ್ಡರ್ ಮಾಡಿದ ಉತ್ಪನ್ನಗಳನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ತಮ್ಮ ಮೊದಲ ಆರ್ಡರ್ ಅನ್ನು ಉಚಿತವಾಗಿ ಡೆಲಿವರಿ ಪಡೆದುಕೊಳ್ಳಬಹುದಾಗಿದೆ ಮತ್ತು 499 ರೂಪಾಯಿಗಿಂತ ಅಧಿಕ ಮೊತ್ತದ ಉತ್ಪನ್ನಗಳನ್ನು ಆರ್ಡರ್ ಮಾಡಿದರೆ ಉಚಿತ ಡೆಲಿವರಿ ಸೇವೆಯನ್ನು ಪಡೆದುಕೊಳ್ಳಬಹುದು. ಗ್ರಾಹಕರು ಯಾವುದೇ ಸಮಯದಲ್ಲಿಯೂ ಉತ್ಪನ್ನಗಳಿಗೆ ಆರ್ಡರ್ ಮಾಡಬಹುದು ಮತ್ತು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ವಿತರಣೆ ಪಡೆದುಕೊಳ್ಳಲು ಅವಕಾಶವಿದೆ.

ಸಾಂಕ್ರಾಮಿಕದ ಅವಧಿಯಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ನ ಆದ್ಯತೆ ಪೂರೈಕೆ ಜಾಲದ ಪ್ರತಿನಿಧಿಗಳು, ವಿತರಣಾ ಪ್ರತಿನಿಧಿಗಳು ಮತ್ತು ಗ್ರಾಹಕರ ಸುರಕ್ಷತೆಯಾಗಿದೆ. ದೇಶಾದ್ಯಂತ ಗ್ರಾಹಕರು ಮನೆಯಿಂದ ಹೊರಗೆ ಬಾರದೇ ತಾವಿದ್ದಲ್ಲಿಗೇ ಉತ್ಪನ್ನಗಳನ್ನು ತಲುಪಿಸುವ ಮೂಲಕ ಸಾವಿರಾರು ವಿತರಣಾ ಹೀರೋಗಳು ಗ್ರಾಹಕರ ಆರೋಗ್ಯವನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಫ್ಲಿಪ್ ಕಾರ್ಟ್ ತನ್ನ ವೇದಿಕೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರಾಟಗಾರರು/ಎಂಎಸ್ಎಂಇಗಳಿಗೆ ಅವಕಾಶ ಕಲ್ಪಿಸುವ ಮೂಲಕ ಅವರ ವ್ಯವಹಾರ ವೃದ್ಧಿಯಾಗುವಂತೆ ನೆರವಾಗಿದೆ. ಅಲ್ಲದೇ, ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಕಳೆದ ಹಲವು ತಿಂಗಳಿಂದ ಸ್ಥಳೀಯ ಆಡಳಿತಗಳು ಹೊರಡಿಸುತ್ತಿರುವ ಆದೇಶಗಳು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments