ಬೆಂಗಳೂರು : ರಾಮಮಂದಿರಕ್ಕಾಗಿ ಹಣ ದಾನ ಮಾಡದ ಮನೆಗಳನ್ನು ಗುರುತಿಸಲಾಗುತ್ತಿದ್ದು , ಈ ಮೂಲಕ ನಾಝಿ ಪಾರ್ಟಿಗೆ ಆರ್ ಎಸ್ ಎಸ್ ಅನ್ನು ಕರ್ನಾಟಕದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೋಲಿಕೆ ಮಾಡಿ ಟ್ವಿಟ್ ಮಾಡಿದ್ದಾರೆ. ಈ ಕುರಿತು ಸರಣಿ ಟ್ಟೀಟ್ ಮಾಡಿರುವ ಅವರು, ದೇಶವು ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲಾಗದ ಂತಹ ಸನ್ನಿವೇಶವನ್ನು ನೋಡುತ್ತಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿ ಅಂತ ಹೇಳಿದ್ದಾರೆ.
ಜರ್ಮನಿಯಲ್ಲಿ ನಾಜಿ ಪಕ್ಷ ಸ್ಥಾಪನೆಯಾದ ಸಂದರ್ಭದಲ್ಲಿಯೇ ಆರ್ ಎಸ್ ಎಸ್ ಜನ್ಮ ತಗೆದುಕೊಂಡಿತು ಎಂದು ಇತಿಹಾಸಕಾರರು ಹೇಳುತ್ತಾರೆ. ನಾಜಿಗಳು ಅಳವಡಿಸಿಕೊಂಡಿರುವ ನೀತಿಗಳನ್ನು ಆರೆಸ್ಸೆಸ್ ಜಾರಿಗೆ ತರಲು ಪ್ರಯತ್ನಿಸಿದರೆ ಏನಾಗುತ್ತದೆ ಎಂಬ ಆತಂಕಗಳಿವೆ.
ದೇಶದಲ್ಲಿ ಈಗ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಅಂತ ಅವರು ಹೇಳಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಎಲ್ಲಿ ಅಂತಿಮವಾಗಿ ನಮ್ಮನ್ನು ಕರೆದುಕೊಂಡು ಹೋಗುತ್ತದೋ ಗೊತ್ತಿಲ್ಲ. ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ ಹಾಗೂ ಇಲ್ಲದವರ ಮನೆಗಳನ್ನು ಪ್ರತ್ಯೇಕವಾಗಿ ಗುರುತು ಮಾಡಿಸಲಾಗಿದೆ. ಹಿಟ್ಲರ್ ನ ಆಳ್ವಿಕೆಯ ಕಾಲದಲ್ಲಿ ನಾಜಿಗಳು ಜರ್ಮನಿಯಲ್ಲಿ ಮಾಡಿದ ಕೆಲಸವನ್ನೇ ಹೋಲುತ್ತದೆ,’ ಎಂದು ಅವರು ಹೇಳಿದರು.