Saturday, September 30, 2023
Homeರಾಜಕೀಯಕುಮಾರಸ್ವಾಮಿ ಜನಸ್ನೇಹಿ ಗುಣಕ್ಕೆ ಮತ್ತೊಂದು ಉದಾಹರಣೆ

ಕುಮಾರಸ್ವಾಮಿ ಜನಸ್ನೇಹಿ ಗುಣಕ್ಕೆ ಮತ್ತೊಂದು ಉದಾಹರಣೆ

- Advertisement -



Renault

Renault
Renault

- Advertisement -

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿರುವ ಹಲವಾರು ನಿದರ್ಶನಗಳಿವೆ. ಇದನ್ನೆಲ್ಲಾ ಅವರ ವಿರೋಧಿಗಳು ಅಣಕವಾಡಿದ್ದೇ ಹೆಚ್ಚು. ಆದರೆ, ಎಚ್ಡಿಕೆ, ಮಾನವೀಯತೆಯ ತಮ್ಮ ಮುಖವನ್ನು ತೋರಿಸುತ್ತಲೇ ಇರುತ್ತಾರೆ.

ಕೆಲವೇ ದಿನಗಳ ಹಿಂದೆ, ತನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಮಾಡಿದ್ದರು.

ಇದಾದ ನಂತರ ಮಕರ ಸಂಕ್ರಾಂತಿಯ ದಿನದಂದು ಇಂಧನ ಇಲಾಖೆಯಲ್ಲಿ 600ಕ್ಕೂ ಹೆಚ್ಚು ವಿಶೇಷ ಚೇತನರಿಗೆ ಖಾಯಂ ಉದ್ಯೋಗ ಕೊಡಿಸಿ 2 ವರ್ಷವಾದ ಹಿನ್ನೆಲೆಯಲ್ಲಿ, ವಿಶೇಷ ಚೇತನರು ತಮ್ಮ ಕೃತಜ್ಞತೆ ತಿಳಿಸಲು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬಂದಿದ್ದರು.

ಅವರಿಗೆಲ್ಲಾ ಎಳ್ಳು ಬೆಲ್ಲವನ್ನು ಹಂಚಿ, ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಎಚ್ಡಿಕೆ ಕೋರಿದ್ದರು.

ಅಧಿಕಾರ ಇರಲಿ, ಬಿಡಲಿ ಸಹಾಯ ಮಾಡುವುದನ್ನು ಪರಿಪಾಠ ಮಾಡಿಕೊಂಡಿರುವ ಕುಮಾರಸ್ವಾಮಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಡ ಯುವಕನಿಗೆ ಆಟೋ ಕೊಡಿಸುವ ಮೂಲಕ, ದುಡಿಮೆಯ ದಾರಿಯನ್ನು ತೋರಿಸಿದ್ದರು. ಎರಡು ದಿನಗಳ ಹಿಂದೆ, ನಾಗಮಂಗಲದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಅದು ಹೀಗಿದೆ:

ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿ ಗ್ರಾಮದ ಮಹಿಳೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಎಚ್ ಡಿ ಕುಮಾರಸ್ವಾಮಿ ಅವರ ಕಾರನ್ನು ರಸ್ತೆಯಲ್ಲಿ ಕೈ ತೋರಿಸಿ ನಿಲ್ಲಿಸಿದ್ದಾರೆ. ಕ್ಷೇತ್ರ ಪ್ರವಾಸದ ನಂತರ ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಆ ಮಹಿಳೆ, ಪತಿ ಸತ್ತುಹೋಗಿದ್ದಾರೆ. 3 ಹೆಣ್ಣುಮಕ್ಕಳು. ಒಬ್ಬಳಿಗೆ ಮದುವೆಯಾಗಿದೆ. ಮತ್ತಿಬ್ಬರ ಮದುವೆ ಮಾಡಬೇಕು ಎಂದು ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ್ದಾರೆ.

ಕುಮಾರಸ್ವಾಮಿಯವರ ಮುಂದೆ ಕಣ್ಣೀರು.

ಇಬ್ಬರು ಮಕ್ಕಳು ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿಗೆ ಹೋಗಿದ್ದಾರೆ. ನಾನು ಈಗ ಒಬ್ಬಂಟಿ. ಇಳಿವಯಸ್ಸಿನಲ್ಲೂ ದುಡಿದು ಬದುಕುತ್ತಿದ್ದೇನೆ. ಹೆಣ್ಣುಮಕ್ಕಳಿಗೆ ಕೆಲಸ ಕೊಡಿಸಿ ಎಂದು ಕುಮಾರಸ್ವಾಮಿಯವರ ಮುಂದೆ ಕಣ್ಣೀರು ಹಾಕಿದ್ದಾರೆ.

ಬೆಂಗಳೂರಿನ ಜೆಪಿ ನಗರದ ನನ್ನ ನಿವಾಸ.

ಮಹಿಳೆಯ ಅಹವಾಲನ್ನು ತಾಳ್ಮೆಯಿಂದ ಕೇಳಿ, ತಕ್ಷಣವೇ ಸ್ಪಂದಿಸಿದ ಕುಮಾರಸ್ವಾಮಿ, ನಿಮ್ಮ ಹೆಣ್ಣುಮಕ್ಕಳನ್ನು ಬೆಂಗಳೂರಿನ ಜೆಪಿ ನಗರದ ನನ್ನ ನಿವಾಸಕ್ಕೆ ಕಳುಹಿಸಿ. ಅವರಿಗೆ ಖಾಸಗಿ ಸಂಸ್ಥೆಯಲ್ಲಿ ಒಂದು ಒಳ್ಳೆಯ ಉದ್ಯೋಗ ಕೊಡಿಸುತ್ತೇನೆ ಎಂದು ಆ ಮಹಿಳೆಗೆ ಸಾಂತ್ವನ ಹೇಳಿದರು. ಆ ಮಹಿಳೆ ನಿಮಗೆ ಒಳ್ಳೆಯದಾಗಲಿ ಎಂದು ಹರಸಿದ ಘಟನೆ, ಶನಿವಾರ (ಜ 23) ನಡೆದಿದೆ.

ಪದ್ಮಾ ಎನ್ನುವ ಪಿರಿಯಾಪಟ್ಟಣದ ಮಹಿಳೆ.

ಇದೇ ರೀತಿ, ಪದ್ಮಾ ಎನ್ನುವ ಪಿರಿಯಾಪಟ್ಟಣದ ಮಹಿಳೆ, ಮಾನಸಿಕವಾಗಿ ಅಸ್ವಸ್ಥಳಾಗಿ ಭಾಷೆಯ ಕಾರಣದಿಂದ ಬೇರೆಯವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದೆ ಶಿಮ್ಲಾದ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆಗ, ಮಾನವೀಯತೆ ಮೆರೆದ ಕುಮಾರಸ್ವಾಮಿ, ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು, ಸೂಕ್ತ ಚಿಕಿತ್ಸೆ ಕೊಡಿಸಿ, ಆಶ್ರಯ ಒದಗಿಸುವಂತೆ ಸೂಚಿಸಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments