Monday, October 2, 2023
HomeUncategorizedಕುಟುಂಬದ ನಾಲ್ವರೂ ರೈಲಿನಡಿ ತಲೆ ಕೊಟ್ಟರು: ಹೃದಯ ವಿದ್ರಾವಕ ಘಟನೆ

ಕುಟುಂಬದ ನಾಲ್ವರೂ ರೈಲಿನಡಿ ತಲೆ ಕೊಟ್ಟರು: ಹೃದಯ ವಿದ್ರಾವಕ ಘಟನೆ

- Advertisement -Renault

Renault
Renault

- Advertisement -

ಬೆಳಗಾವಿ : ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ರೈಲ್ವೆ ನಿಲ್ದಾಣದ ಬಳಿಯಲ್ಲಿ ನಡೆದಿದೆ.

ಬೀರಡಿ ಸಾತಪ್ಪ ಸುತಾರ್( 60 ವರ್ಷ) ತಾಯಿ ಮಹಾದೇವಿ (50 ವರ್ಷ), ಮಕ್ಕಳಾದ ದತ್ತಾತ್ರೇಯ (28 ವರ್ಷ ) ಮತ್ತು ಸಂತೋಷ್ (25 ವರ್ಷ ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ.

ಸಾಮೂಹಿಕ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ರಾಯಭಾಗ ರೈಲ್ವೆ ನಿಲ್ದಾಣದ ಬಳಿಯ ಘಟನಾ ಸ್ಥಳಕ್ಕೆ ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments