ಹೊನ್ನಾವರ: ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನ ಹೊನ್ನಾವರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಘಟನೆಯ ವೇಳೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಆಟೋ ಚಾಲಕನಾಗಿರುವ ಭಟ್ಕಳ ತಾಲೂಕಿನ ಮದೀನಾ ಕಾಲೋನಿ ಮೈದಿನ್ ಸ್ಟಿಟ್‌ನ ಅಬ್ರಾರ್ ಇಬ್ರಾಹಿಂ ಶೇಖ್(26) ಬಂಧಿತ ಆರೋಪಿಯಾಗಿದ್ದಾರೆ. ಇನ್ನು ಹೊನ್ನಾವರ ತಾಲೂಕಿನ ಕಾಸರಕೋಡದ ಟೊಂಕಾದ ಕಿಜಾರ್ ಮಸೀದಿಯ ಸಮೀಪದ ಮೊಹಮ್ಮದ್ ಸಲಾಂ ಇಸ್ಮಾಯಿಲ್ ಮೂಸಾ(22) ಹಾಗೂ ಹೊನ್ನಾವರ ತಾಲೂಕಿನ ಟೊಂಕಾ ಕ್ರಾಸ್‌ನ ನಿವಾಸಿ ಸಮೀರ್ ಮಹಮ್ಮದ್ ಅಲಿ ಪಂಡಿತ(23) ಪರಾರಿಯಾದ ಆರೋಪಿಗಳಾಗಿದ್ದಾರೆ.
ಇವರು ಹೊನ್ನಾವರದ ಕಾಸರಕೋಡ, ಟೊಂಕಾದ ಕಿಜಾರ್ ಮಸೀದಿ ಬಳಿ ಸುಮಾರು 500 ಗಾಂಜಾ ಮಾದಕ ವಸ್ತು ಪ್ಯಾಕೆಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನಾವರ ಠಾಣೆ ಪೊಲೀಸರು ದಾಳಿ ನಡೆಸಿ ಗಾಂಜಾ ಪ್ಯಾಕೆಟ್ ಒಂದು ತಕ್ಕಡಿ, ಗಾಂಜಾ, ಬೈಕ್ ವಶಕ್ಕೆ ಪಡೆದಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಠಾಣೆ ಪಿಎಸ್‌ಐ ಅಶೋಕ ಕುಮಾರ ಜಿ. ಎಲ್ ಮುಂದಿವರೆಸಿದ್ದು ತಲೆ ಮರೆಸಿಕೊಂಡವರ ಬಂಧನಕ್ಕೆ ಬಲೆ ಬಿಸಿದ್ದಾರೆ.