ಅಷ್ಟಕ್ಕೂ ಬಸ್ ಕದ್ದು ಏನ್ಮಾಡಿದ…???
ಯಾಕೆ ಬಸ್ ಕದ್ದೇ ಅಂದಿದ್ದಕ್ಕೆ ಆತನ ಉತ್ತರ ಕೇಳಿದ ಪೊಲೀಸರೇ ತಬ್ಬಿಬ್ಬು…!!!
ಕೇರಳ: ಮಧ್ಯರಾತ್ರಿ ಮನೆಗೆ ಹೋಗಲು ಬೇರೆ ವಾಹನ ಇಲ್ಲ ಅಂತಾ ಖದೀಮನೊಬ್ಬ ಸರ್ಕಾರಿ ಬಸ್ಸನ್ನೇ ಕಳವು ಮಾಡಿರುವ ಘಟನೆ ಕೇರಳದ ಕೊಟ್ಟರಕ್ಕರದಲ್ಲಿ ನಡೆದಿದೆ.
ಕೇರಳದ ಕೊಟ್ಟರಕ್ಕರ ಡಿಪೋದಿಂದ ಸರ್ಕಾರಿ ಬಸ್ ಒಂದು ಕಳವಾಗಿತ್ತು. ಆ ಬಸ್ ಪರಿಪ್ಪಳ್ಳಿ ಎಂಬಲ್ಲಿ ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಪೊಲೀಸರಿಗೆ ನಗುವುದೋ ಅಳುವುದೋ ಅನ್ನೋ ಹಾಗಾಗಿತ್ತು.
ಹೌದು.. ಕೊಟ್ಟರಕ್ಕರ ಡಿಪೋದಿಂದ ಫೆ.8ರಂದು ಬಸ್ ಒಂದು ಕಳವಾಗಿತ್ತು. ಬಸ್ ಕಳವಾದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಆರೋಪಿಯ ಸುಳಿವು ಲಭಿಸಿತ್ತು. ಸ್ರೀಕಾರ್ಯಂ ನಿವಾಸಿ ನಿಧಿನ್ ಅಲಿಯಾಸ್ ಟಿಪ್ಪರ್ ಅನಿ ಎಂಬಾತ ಬಸ್ ನ್ನು ಕದ್ದಿರೋದು ಸಿಸಿ ಟಿವಿ ದೃಶ್ಯಾವಳಿಗಳ ಮೂಲಕ ಪೊಲೀಸರಿಗೆ ಗೊತ್ತಾಗಿದೆ. ಪಲಕ್ಕಾಡ್ ಸರ್ವೀಸ್ ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದ ಈತ, ಈ ಹಿಂದೆಯೂ ಆತ ಅನೇಕ ವಾಹನಗಳನ್ನು ಕದ್ದಿದ್ದ.
ಇನ್ನು ಬಂಧಿಸಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರೇ ಸುಸ್ತಾಗಿದ್ದಾರೆ. ಅದಕ್ಕೆ ಕಾರಣ ಯಾಕೆ ಕದ್ದೇ ಎಂದು ಕೇಳಿದಾಗ ಆತ ನೀಡಿದ ಉತ್ತರ. ಮಧ್ಯರಾತ್ರಿ ಮನೆಗೆ ಹೋಗೋದಕ್ಕಾಗಿ ನಾನು ಬಸ್ ಕದ್ದೆ ಎಂದಿದ್ದಾನೆ.ಇದೀಗ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.