Wednesday, September 28, 2022
HomeUncategorizedಗ್ರಾಮ ಪಂಚಾಯತ್ ಗೂ ಬಂತು ಅಪಹರಣ ರಾಜಕೀಯ!

ಗ್ರಾಮ ಪಂಚಾಯತ್ ಗೂ ಬಂತು ಅಪಹರಣ ರಾಜಕೀಯ!

- Advertisement -
Renault

Renault

Renault

Renault






- Advertisement -

ಬಸವಕಲ್ಯಾಣ (ಬೀದರ್​): ತಾಲೂಕಿನ ಚಂಡಕಾಪೂರ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮತದಾನಕ್ಕಾಗಿ ಬರುತ್ತಿದ್ದ ಸದಸ್ಯರ ಮೇಲೆ ಅಧ್ಯಕ್ಷ ಆಕಾಂಕ್ಷಿಯೊಬ್ಬರ ಕುಟುಂಬದವರು ಹಲ್ಲೆ ನಡೆಸಿ, 7 ಜನ ಸದಸ್ಯರನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ನಡೆದಿದ್ದು, ಈ ಕುರಿತಂತೆ ಗ್ರಾಮೀಣ‌ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾ.ಪಂ ಸದಸ್ಯೆ ಪುತಳಾಬಾಯಿ ಕುಟುಂಬದವರು ಸದಸ್ಯರನ್ನು ಅಪಹರಿಸಿದ್ದು, ಈ ವೇಳೆ ಮಹಿಳಾ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸದಸ್ಯೆ ಮಹಾದೇವಿ ಸ್ವಾಮಿ ಎನ್ನುವರು 6 ಜನರ ವಿರುದ್ಧ ನೀಡಿರುವ ದೂರು ದಾಖಲಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಪುತಳಾಬಾಯಿ ಕುಟುಂಬದವರು ಒಬ್ಬ ಸದಸ್ಯರಿಗೆ ತಲಾ 2 ಲಕ್ಷ ರೂ.

ಆಮಿಷವೊಡ್ಡಿದ್ದರು ಎನ್ನಲಾಗಿದ್ದು, ಇದನ್ನು ನಿರಾಕರಿಸಿ 10 ಜನ ಸದಸ್ಯರು ಕಲಬುರಗಿ ತುಳಜಾಪುರ ಮತ್ತಿತ್ತರ ಕಡೆಗೆ ಯಾತ್ರೆ ಹೋಗಿದ್ದಾರೆ. ಶನಿವಾರ ಚಡಂಕಾಪೂರ ಗ್ರಾಮದ ಕಡೆ ವಾಪಸ್ ಬರುತ್ತಿದ್ದಾಗ ತಡೋಳಾ ಬಳಿ 20ಕ್ಕೂ ಹೆಚ್ಚು ಜನ ವಾಹನಗಳಿಗೆ ಅಡ್ಡಗಟ್ಟಿ 7 ಜನ ಸದಸ್ಯರಿಗೆ ಒತ್ತಾಯದಿಂದ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರ ತಂಡ, ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದೆ.

ಚಂಡಕಾಪೂರ ಗ್ರಾ.ಪಂ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಗೆ ಅಗತ್ಯ ಸದಸ್ಯರ ಸಂಖ್ಯೆ ಲಭ್ಯವಿಲ್ಲದ ಕಾರಣ ಚುನಾವಣೆ ಪ್ರಕ್ರಿಯೆ ಮುಂದೂಡಲಾಗಿದೆ. ಒಟ್ಟು 20 ಜನ ಸದಸ್ಯ ಬಲದ ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಶನಿವಾರ ದಿನಾಂಕ ನಿಗದಿಯಾಗಿತ್ತು. ಆದರೆ, ಚುನಾವಣೆ ಪ್ರಕ್ರಿಯೆ ವೇಳೆ 9 ಜನ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಹೀಗಾಗಿ ಕೋರಂ ಕೊರತೆ ಕಾರಣ ಚುನಾವಣೆ ಪ್ರಕ್ರಿಯೆ ಮುಂದೂಡಲಾಯಿತು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments