- Advertisement -
ಮಂಗಳೂರು: ರಾಜ್ಯ ಸಚಿವರಾದ ಸಿ.ಪಿ.ಯೋಗೇಶ್ವರ್ ಮತ್ತು ನಾರಾಯಣ್ ಗೌಡ ಅವರು ವಿವಿಧ ಕಾರ್ಯಕ್ರಮಗಳ ನಿಮಿತ್ತ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಮೆಸ್ಕಾಂ ನಿರ್ದೇಶಕರಾದ ಕಿಶೋರ್ ಕುಮಾರ್ ಪುತ್ತೂರು ನೇತೃತ್ವದಲ್ಲಿ ರಾಜೇಶ್ ಶೆಟ್ಟಿ ಪಜೀರು ಗುತ್ತು, ವಸಂತ್ ಜೆ ಪೂಜಾರಿ, ಶುಭೋದ್ ಮಾರ್ತಾ, ಮಂಜುನಾಥ್ ನಾಯಕ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಬೃಹತ್ ಹಾರಾರ್ಪಣೆಯೊಂದಿಗೆ ಸ್ವಾಗತಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಗಣೇಶ ಹೊಸಬೆಟ್ಟು, ರೂಪ ಡಿ ಬಂಗೇರ, ವಿಜಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.