ಕೋಟೆಕಣಿ 1ನೇ ಅಡ್ಡರಸ್ತೆ ಅಭಿವೃದ್ಧಿಗೆ ಶಾಸಕ ಕಾಮತ್ ಗುದ್ದಲಿಪೂಜೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ದೇರೆಬೈಲ್ ದಕ್ಷಿಣ ವಾರ್ಡಿನ ಕೋಟೆಕಣಿ 1 ನೇ ಅಡ್ಡರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ದೇರೆಬೈಲ್ ದಕ್ಷಿಣ ವಾರ್ಡಿನ ಕೋಟೆಕಣಿ ಅಡ್ಡ ರಸ್ತೆಯ ಕಾಂಕ್ರೀಟೀಕರಣದ ಕುರಿತು ನಮ್ಮ ಪಕ್ಷದ ಕಾರ್ಯಕರ್ತರು ಕೆಲವಾರು ತಿಂಗಳಿಗಳ ಹಿಂದೆ ಮನವಿ ಸಲ್ಲಿಸಿದ್ದರು. ಕೋಟೆಕಣಿ 1 ನೇ ಅಡ್ಡರಸ್ತೆಯಲ್ಲಿ ಅನೇಕ ಮನೆಗಳಿದ್ದು ಮಳೆಗಾಲದ ಸಂದರ್ಭದಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ಸಮಸ್ಯೆ ಉಂಟಾಗುವ ಕುರಿತು ನಮ್ಮ ಕಾರ್ಯಕರ್ತರು ಮನವಿ ನೀಡಿದ್ದರು. ಹಾಗಾಗಿ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಶಶಿಧರ್ ಹೆಗ್ಡೆ, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಚರಿತ್ ಪೂಜಾರಿ, ಗುರುದತ್ ಕೋಟ್ಯಾನ್, ಸುನಂದ, ಪ್ರಥಮ್, ಶ್ರೀನಿವಾಸ್ ಪೈ, ಶ್ರೀನಿವಾಸ್, ಪ್ರಜ್ವಲ್, ಪವನ್ ರಾಜ್, ಪ್ರವೀಣ್ ನಾಯಕ್, ಪ್ರಸನ್ನ ದಡ್ಡಲ್ ಕಾಡ್, ಚಂದ್ರರಾಜ್ ಹಾಗೂ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.