Tuesday, June 6, 2023
Homeರಾಜಕೀಯಗ್ರಾಪಂ ಸದಸ್ಯನಿಂದ ತನಗೆ ಮತ ನೀಡದವರ ಮೇಲೆ ಗೂಂಡಾಗಿರಿ, ಪೊಲೀಸ್ ಬಂಧನ.

ಗ್ರಾಪಂ ಸದಸ್ಯನಿಂದ ತನಗೆ ಮತ ನೀಡದವರ ಮೇಲೆ ಗೂಂಡಾಗಿರಿ, ಪೊಲೀಸ್ ಬಂಧನ.

- Advertisement -


Renault

Renault
Renault

- Advertisement -

ಮೈಸೂರು:ಪರಿಶಿಷ್ಟ ಜಾತಿ ಸಮುದಾಯದವರು ಚುನಾವಣೆಯಲ್ಲಿ ತನಗೆ ಮತ ಹಾಕಲಿಲ್ಲವೆಂದು ಗ್ರಾಮದ ಜನರೊಂದಿಗೆ ಗೂಂಡಾ ವರ್ತನೆ ತೋರಿದ ಗ್ರಾ.ಪಂ ಸದಸ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇಹೆಗ್ಗುಡಿಲು ಗ್ರಾಮ ಪಂಚಾಯಿತಿ ಸದಸ್ಯ ಶಿವರಾಜು ಬಂಧಿತ ಆರೋಪಿ.
ಈತ ಗ್ರಾಪಂ ಸದಸ್ಯನಾದ ದಿನದಿಂದಲೂ ತನಗೆ ಗ್ರಾಮದ ಪರಿಶಿಷ್ಟ ಜಾತಿ ಜನಾಂಗ ಮತ ಹಾಕಿಲ್ಲ ಎಂದು ನಿತ್ಯವೂ ಗ್ರಾಮದ ಜನರೊಂದಿಗೆ ಗಲಾಟೆ ಮಾಡುತ್ತಿದ್ದ. ಶನಿವಾರ ರಾತ್ರಿ ಕೂಡ ಇದೇ ರೀತಿ ಗಲಾಟೆ ಮಾಡಿ, ಗ್ರಾಮದ ಯೋಗೇಶ್ ಎಂಬ ಯುವಕನನ್ನು ಥಳಿಸಲು ಮುಂದಾಗಿದ್ದಾನೆ. ಈ ವೇಳೆ ಗ್ರಾಮದ ಜನರನ್ನೆಲ್ಲ ಆತನನ್ನು ನಿಂದಿಸಿದ್ದಾನೆ ಎನ್ನಲಾಗಿದೆ.
ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಸರಗೂರು ಠಾಣಾ ಪೊಲೀಸರು ಗ್ರಾಪಂ ಸದಸ್ಯ ಶಿವರಾಜುನನ್ನು ವಶಕ್ಕೆ ಪಡೆದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments