Tuesday, June 6, 2023
HomeUncategorizedಮನುಷ್ಯನಿಗೂ ತಟ್ಟಿತು ಹಕ್ಕಿ ಜ್ವರ…!!!ವಿಶ್ವದ ಮೊದಲ ಡೇಂಜರಸ್ ಪ್ರಕರಣ ನಡೆದಿದ್ದು ಎಲ್ಲಿ ಗೊತ್ತಾ…???

ಮನುಷ್ಯನಿಗೂ ತಟ್ಟಿತು ಹಕ್ಕಿ ಜ್ವರ…!!!ವಿಶ್ವದ ಮೊದಲ ಡೇಂಜರಸ್ ಪ್ರಕರಣ ನಡೆದಿದ್ದು ಎಲ್ಲಿ ಗೊತ್ತಾ…???

- Advertisement -


Renault

Renault
Renault

- Advertisement -

ಮಾಸ್ಕೋ: ಮೇಲಿಂದ ಮೇಲೆ ಮನುಷ್ಯರ ಮೇಲೆ ಒಂದಲ್ಲ ಒಂದು ವೈರಾಣುವಿನಿಂದ ದಾಳಿ ನಡೆಯುತ್ತಲೇ ಇದೆ. ಇದೀಗ ಹಕ್ಕಿ ಜ್ವರಕ್ಕೆ ಕಾರಣವಾಗುವ ಎಚ್5ಎನ್8  ಸೋಂಕು ಮನುಷ್ಯನಿಗೂ ಹರಡಿರುವ  ಪ್ರಕರಣ ವಿಶ್ವದಲ್ಲಿಯೇ ಮೊದಲ ಬಾರಿಗೆ ಪತ್ತೆಯಾಗಿದೆ.

ಹಕ್ಕಿ ಜ್ವರಕ್ಕೆ ಕಾರಣವಾಗುವ ಎಚ್5ಎನ್8 ಸೋಂಕು ರಷ್ಯಾದ ವ್ಯಕ್ತಿಗಳಿಗೆ ಹರಡಿರುವುದು ಪತ್ತೆಯಾಗಿದೆ ಎಂದು ರಷ್ಯಾ ಪ್ರಕಟಣೆಯಲ್ಲಿ ಹೇಳಿದೆ.  ವಿಕ್ಟರ್ ಪ್ರಯೋಗಾಲಯದ ವಿಜ್ಞಾನಿಗಳು ದಕ್ಷಿಣ ರಷ್ಯಾದ ಕೋಳಿ ಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿಯಲ್ಲಿ ಈ ಪ್ರಬೇಧವನ್ನು ಪತ್ತೆ ಮಾಡಿದ್ದಾರೆ ಎಂದು ರಷ್ಯಾದ ಆರೋಗ್ಯ ಕಣ್ಗಾವಲು ಸಮಿತಿಯ ಮುಖ್ಯಸ್ಥೆ ಅನ್ನಾ ಪೊಪೋವಾ ಸ್ಪಷ್ಟಪಡಿಸಿದ್ದಾರೆ.

ಸೋಂಕು ಪತ್ತೆಯಾದ ಕಾರ್ಮಿಕರಲ್ಲಿ ಯಾವುದೇ ಗಂಭೀರವಾದ ಆರೋಗ್ಯ ಪರಿಣಾಮಗಳು ಕಂಡು ಬಂದಿಲ್ಲ ಎಂದು ಏವಿಯಲ್ ಫ್ಲೂ  ಮನುಷ್ಯನಿಗೆ ಹರಡುವ ವಿಶ್ವದ ಮೊದಲ ಪ್ರಕರಣ ಇದಾಗಿದೆ. ಇದರ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments