- Advertisement -
ಬೆಂಗಳೂರು,ಜ.29- ಹಾವೇರಿ ಜಿಲ್ಲೆ ಉಸ್ತುವಾರಿಯನ್ನು ತಮಗೆ ಬಿಟ್ಟುಕೊಡುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ ಎಂದು ತೋಟಗಾರಿಕಾ ಸಚಿವ ಆರ್.ಶಂಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಉಸ್ತುವಾರಿಗೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಸ್ವಲ್ಪ ದಿನ ಕಾದು ನೋಡುತ್ತೇನೆ ಎಂದು ಹೇಳಿದರು.
ಖಾತೆ ಹಂಚಿಕೆ ಮಾಡುವುದು ಸಿಎಂಗೆ ಬಿಟ್ಟ ವಿಚಾರ. ಸಚಿವ ಆನಂದ್ ಸಿಂಗ್ ಅವರು ಚಾರ್ಜ್ ತೆಗೆದುಕೊಳ್ಳದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅವರು ಬದಲಾದ ಖಾತೆಯನ್ನು ನಿರ್ವಹಿಸಲು ಮುಂದಾಗಲಿ ಎಂದು ಸಲಹೆ ಮಾಡುವುದಾಗಿ ಹೇಳಿದರು.