ಮಂಗಳೂರು:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ನಡುವಿನ ವಾಕ್ಸಮರ ಮುಂದುವರಿದಿದೆ. ಎಚ್ಡಿಕೆ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿ.ಪಿ.ಯೋಗೀಶ್ವರ್, 20 ವರ್ಷದ ಹಿಂದೆ ರಾಮನಗರಕ್ಕೆ ಚುನಾವಣೆಗಾಗಿ ಕುಮಾರಸ್ವಾಮಿ ಯವರು ಹವಾಯಿ ಚಪ್ಪಲಿ ಹಾಕಿಕೊಂಡು ಬಂದಿದ್ದರು. ಆಗ ಅವರೂ ಬಚ್ಚಾನೇ ಆಗಿದ್ದರು. ಆದರೆ ಇನ್ನೂ ಪ್ರಬುದ್ಧತೆ ಮೆರೆದಿಲ್ಲ. ಈಗಲೂ ಬಚ್ಚಾ ಆಗಿಯೇ ಇದ್ದಾರೆ ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿಯವರು ಸಿಂಗಾಪುರದಲ್ಲಿ ಇಸ್ಪೀಟ್ ಆಡಿದ ಫೊಟೊಗಳು ನನ್ನ ಬಳಿ ಇವೆ. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರ ಹಲವು ಚಟುವಟಿಕೆಗಳ ಫೋಟೋಸ್ ನನ್ನ ಬಳಿ ಇದೆ. ಸಂದರ್ಭ ಬಂದಾಗ ನಾನೇ ಬಿಡುಗಡೆ ಮಾಡುವೆ ಎಂದು ಯೋಗೀಶ್ವರ್ ಹೇಳಿದರು.
ಕುಮಾರಸ್ವಾಮಿಯವರದ್ದು ರಾಜಕೀಯ ದ್ವಂದ್ಬ ನಿಲುವು. ತಮಗೆ ಅಧಿಕಾರ ಬೇಕೆಂದಾಗ ಯಾರೊಂದಿಗೆ ಬೇಕಾದರೂ ಕೈ ಜೋಡಿಸುತ್ತಾರೆ. ಮತ್ತೆ ಅರ್ಧದಲ್ಕಿ ಕೈಬಿಟ್ಟು ಬೆಂಬಲಕ್ಕಾಗಿ ಮತ್ತೊಂದು ಪಕ್ಷದ ಹಿಂದೆ ಹೋಗುತ್ತಾರೆ. ಅವರಿಗೆ ರಾಜಕೀಯ ಬದ್ಧತೆ ಇಲ್ಲ ಎಂದು ಸಿ.ಪಿ.ಯೋಗೀಶ್ವರ್ ಟೀಕಿಸಿದರು.